Suryakumar Yadav: ಕ್ಯಾಚ್ ವಿವಾದದ ಬಗ್ಗೆ ಸೂರ್ಯಕುಮಾರ್ ಯಾದವ್ ಸ್ಪಷ್ಟನೆ

17 ವರ್ಷಗಳ ಬಳಿಕ ಭಾರತ ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿದೆ. ಜೂನ್ 29ರಂದು ನಡೆದ ಫೈನಲ್ ಪಂದ್ಯದಲ್ಲ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳಿಂದ ಗೆದ್ದ ಭಾರತ ಎರಡನೇ ಬಾರಿ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿದೆ.

ಕೊನೆಯ ಓವರ್ ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಬೌಲಿಂಗ್‌ನ ಮೊದಲನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಲಾಂಗ್‌ಆನ್‌ ಕಡೆ ಸಿಕ್ಸರ್ ಬಾರಿಸುವ ಪ್ರಯತ್ನ ಮಾಡಿದರು. ಇನ್ನೇನು ಚೆಂಡು ಬೌಂಡರಿ ಗೆರೆ ದಾಟಿತು ಎನ್ನುವಾಗಲೇ ಸೂರ್ಯಕುಮಾರ್ ಯಾದವ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ದಕ್ಷಿಣ ಆಫ್ರಿಕಾದ ಗೆಲುವನ್ನು ಕಸಿದುಕೊಂಡರು.

Suryakumar Yadav Discusses T20 World Cup Final Catch Amid controversy

ಬೌಂಡರಿ ಲೈನ್‌ನಲ್ಲಿ ಓಡಿ ಬಂದ ಅವರು ಚೆಂಡು ಹಿಡಿದು ಬಳಿಕ ಅದನ್ನು ಗಾಳಿಯಲ್ಲಿ ಎಸೆದು, ಬೌಂಡರಿ ಗೆರೆ ಆಚೆ ದಾಟಿ ಮತ್ತೆ ಬೌಂಡರಿ ಗೆರೆಯೊಳಗೆ ಓಡಿ ಬಂದು ಕ್ಯಾಚ್ ಪೂರ್ಣಗೊಳಿಸಿದರು.

ವಿವಾದದ ಬಗ್ಗೆ ಸೂರ್ಯ ಸ್ಪಷ್ಟನೆ

ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ಬಗ್ಗೆ ವಿವಾದ ಸೃಷ್ಟಿಯಾಗಿತ್ತು. ಅದು ಔಟ್ ಇರಲಿಲ್ಲ ಸಿಕ್ಸರ್ ಎಂದು ದಕ್ಷಿಣ ಆಫ್ರಿಕಾ ಅಭಿಮಾನಿಗಳು ಆರೋಪಿಸಿದ್ದರು. ಆದರೆ, ಚೆಂಡು ಕೈಯಲ್ಲಿದ್ದಾಗ ಸೂರ್ಯ ಬೌಂಡರಿ ಗೆರೆ ತುಳಿಯದೇ ಇರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡಿತ್ತು.

ಈಗ ಸ್ವತಃ ಸೂರ್ಯಕುಮಾರ್ ಯಾದವ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚೆಂಡನ್ನು ಹಿಡಿಯುವಾಗ ಎಷ್ಟು ಜಾಗರೂಕರಾಗಿದ್ದರು, ಅವರ ಪಾದಗಳು ಬೌಂಡರಿ ಗೆರೆ ಮುಟ್ಟದಂತೆ ನೋಡಿಕೊಳ್ಳುತ್ತಿದ್ದೆ ಎನ್ನುವ ವಿಚಾರವನ್ನು ಇಂಡಿಯನ್‌ ಎಕ್ಸ್‌ಪ್ರೆಸ್ ಜೊತೆ ಹಂಚಿಕೊಂಡಿದ್ದಾರೆ.

"ನಮ್ಮ ಫೀಲ್ಡಿಂಗ್ ಕೋಚ್ ದಿಲೀಪ್ ಸರ್ ಅವರು ಸೂರ್ಯ, ವಿರಾಟ್ ಕೊಹ್ಲಿ, ಅಕ್ಸರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಯಾವಾಗಲೂ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಫೀಲ್ಡಿಂಗ್ ಮಾಡಬೇಕು ಎಂದು ಹೇಳಿದ್ದಾರೆ, ಅಲ್ಲಿ ಚೆಂಡು ಹೋಗುವ ಹೆಚ್ಚಿನ ಅವಕಾಶವಿದೆ" ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ಫೀಲ್ಡಿಂಗ್ ಅಭ್ಯಾಸದ ಸಮಯದಲ್ಲಿ ವಿವಿಧ ಮೈದಾನಗಳಲ್ಲಿ ಅಂತಹ ಕ್ಯಾಚ್‌ಗಳನ್ನು ಅಭ್ಯಾಸ ಮಾಡಿದ್ದನ್ನು ಅವರು ಬಹಿರಂಗಪಡಿಸಿದರು. ನಾನು ತೆಗೆದುಕೊಂಡ ಕ್ಯಾಚ್ ಅನ್ನು ಗಾಳಿಯ ಆಧಾರದ ಮೇಲೆ ವಿವಿಧ ಮೈದಾನಗಳಲ್ಲಿ ಅಭ್ಯಾಸ ಮಾಡಿದ್ದೇನೆ. ನನಗೆ ಸ್ಪಷ್ಟವಾಗಿ ಗೊತ್ತಿದೆ ನಾನು ಬೌಂಡರಿ ಗೆರೆಯನ್ನು ತುಳಿದಿಲ್ಲ ಎಂದರು.

ಕ್ಯಾಚ್ ತೆಗೆದುಕೊಂಡಾಗ, ನಾನು ಹಗ್ಗವನ್ನು ಮುಟ್ಟಿಲ್ಲ ಎಂದು ನನಗೆ ತಿಳಿದಿತ್ತು, ನಾನು ಜಾಗರೂಕತೆಯಿಂದ ಇದ್ದ ಏಕೈಕ ವಿಷಯವೆಂದರೆ ನಾನು ಚೆಂಡನ್ನು ಹಿಂದಕ್ಕೆ ತಳ್ಳಿದಾಗ, ನನ್ನ ಪಾದಗಳು ಬೌಂಡರಿಯನ್ನು ಮುಟ್ಟಬಾರದು. ಅದು ನನಗೆ ತಿಳಿದಿತ್ತು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+