Suryakumar Yadav: ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ಪಕ್ಕಾ, ಇದರಲ್ಲಿ ಅನುಮಾನವೇ ಬೇಡ! ಇಲ್ಲಿದೆ ಮತ್ತೊಂದು ಸಾಕ್ಷಿ

ಭಾರತ ಕ್ರಿಕೆಟ್ ತಂಡ 2024ರ ಸಾಲಿನ ಐಸಿಸಿ ಟಿ20 ವಿಶ್ವಕಪ್ ಗೆದ್ದು ತವರಿಗೆ ಬಂದಿದೆ. ಈ ಶುಭ ಸಮಯವನ್ನು ಭಾರತೀಯರು ಅತ್ಯಂತ ಆನಂದದಿಂದ ಕಳೆದಿದ್ದು, ಭಾರತ ತಂಡದ ಆಟಗಾರರಿಗೆ ಬೆನ್ನುತಟ್ಟಿ ಶುಭ ಕೋರಿದ್ದಾರೆ. ಹೀಗಿದ್ದಾಗ ಟಿ20 ವಿಶ್ವಕಪ್ ಫೈನಲ್ ಮ್ಯಾಚ್ ವೇಳೆ ಕೊನೆಯ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತವಾದ ಕ್ಯಾಚ್ ಹಿಡಿದರು, ಅದೇ ಕ್ಯಾಚ್ ಈಗ ದೊಡ್ಡ ವಿವಾದ ಎಬ್ಬಿಸುತ್ತಿದೆ!

ಅಂದಹಾಗೆ ಸೂರ್ಯಕುಮಾರ್ ಯಾದವ್ ಅವರು ಆ ಕ್ಯಾಚ್ ಹಿಡಿಯದೇ ಹೋಗಿದ್ದರೆ ಆಗ ಇಡೀ ಪಂದ್ಯದ ರಿಸಲ್ಟ್ ಬದಲಾಗಿ ಹೋಗುತ್ತಿತ್ತು. ಅಕಸ್ಮಾತ್ ಈ ಕ್ಯಾಚ್ ಹಿಡಿಯದೇ ಹೋಗಿದ್ರೆ ಭಾರತ ಸೋಲು ಕಾಣುತ್ತಿತ್ತು. ಹೀಗೆ ಭಾರತದ ಗೆಲುವಿನಲ್ಲಿ ಈ ಕ್ಯಾಚ್ ನಿರ್ಣಾಯಕವಾಗಿದ್ದು, ಇದೇ ಕ್ಯಾಚ್ ಬಗ್ಗೆ ಹಲವು ಅನುಮಾನ ಮೂಡಿದ್ದವು. ಅಲ್ಲದೆ ಭಾರತ ಟಿ20 ವಿಶ್ವಕಪ್‌ನ ಗೆದ್ದೇ ಇಲ್ಲ, ವಾಪಸ್ ಕೊಡಿ ಎಂಬ ಅಧಿಕ ಪ್ರಸಂಗದ ಮಾತುಗಳು ಕೇಳಿಬಂದವು. ಆದರೆ, ಈ ಮಾತುಗಳಿಗೆ ಪಕ್ಕಾ ಉತ್ತರ ಸಿಕ್ಕಿದ್ದು ಆ ವಿಡಿಯೋ ಮುಂದೆ ನೋಡಿ.

Suryakumar Yadav Catch At The T20 World Cup Final Is Very Much Perfect And Here Is The Proof

ವಿಡಿಯೋ ಸಮೇತ ಸಿಕ್ಕಿದೆ ಸಾಕ್ಷಿ!

ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುತ್ತಾ, ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ಸರಿ ಇಲ್ಲ. ಸೂರ್ಯಕುಮಾರ್ ಯಾದವ್ ಕ್ಯಾಚ್ ಹಿಡಿಯುವಾಗ ಅವರ ಕಾಲುಗಳು ಬೌಂಡರಿ ಗೆರೆಗೆ ತಾಗಿವೆ ಎಂದು ಆರೋಪ ಮಾಡುತ್ತಿದ್ದಾರೆ. ಹಾಗೇ ಈ ಬಗ್ಗೆ ಐಸಿಸಿ ಕೂಡ ನಿರ್ಲಕ್ಷ್ಯ ದೋರಣೆ ಹೊಂದಿದ್ದು, ದಕ್ಷಿಣ ಆಫ್ರಿಕಾಗೆ ಮೋಸ ಮಾಡಿ ಭಾರತ ತಂಡಕ್ಕೆ ಈಗ ಐಸಿಸಿ ಟಿ20 ವಿಶ್ವಕಪ್ ಗೆಲ್ಲಲು ಸಹಾಯ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಎಲ್ಲಾ ಆರೋಪಗಳಿಗೆ ಬಾರು ಕೋಲು ತಗೊಂಡು ಬಾರಿಸಿದ ರೀತಿ ಇಲ್ಲೊಂದು ವಿಡಿಯೋ ಸಾಕ್ಷಿ ಸಿಕ್ಕಿದೆ, ವಿಡಿಯೋ ಇಲ್ಲಿದೆ ಮುಂದೆ ನೋಡಿ.

ಭಾರತ ತಂಡಕ್ಕೆ ಭರ್ಜರಿ ಗೆಲುವು!

2007ರಲ್ಲಿ ಮೊದಲ ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದ್ದ ಭಾರತಕ್ಕೆ 2024 ರಲ್ಲಿ ಮತ್ತೊಮ್ಮೆ ವಿಜಯಲಕ್ಷ್ಮೀ ಒಲಿದು ಬಂದಿದ್ದು ಸಾರ್ಥಕ ಕ್ಷಣಕ್ಕೂ ಸಾಕ್ಷಿ ಆಗಿದೆ. ಆದರೆ ಮ್ಯಾಚ್ ಇನ್ನೇನು ಕೈಬಿಟ್ಟು ಹೋಗುತ್ತಿದೆ ಎನ್ನುವಾಗಲೇ ಭಾರತಕ್ಕೆ ಆಸರೆಯಾಗಿ ನಿಂತಿದ್ದು ಸೂರ್ಯಕುಮಾರ್. ಅವರು ಬೌಂಡರಿ ಲೈನ್ ಬಳಿ ಹಿಡಿದ ಅದೊಂದು ಕ್ಯಾಚ್ ಇಡೀ ಮ್ಯಾಚ್‌ನ ಸೀನ್ ಬದಲಾಯಿಸಿ ಬಿಸಾಕಿತ್ತು. ಹೀಗಿದ್ದಾಗ ನೂರಾರು ಅನುಮಾನ ಮೂಡುವಂತೆ ಕೆಲವು ಮಾತನಾಡ್ತಿದ್ದಾರೆ.

ಸೂರ್ಯಕುಮಾರ್ ಯಾದವ್ ಕ್ಯಾಚ್ ಬಗ್ಗೆ ಹಲವು ಅನುಮಾನದ ಮಾತುಗಳು ಕೇಳಿಬಂದವು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯದಲ್ಲಿ ಇನ್ನೇನು ಕೊನೇ ಓವರ್ ಹಾಕುವಾಗ, 16 ರನ್ ಮಾತ್ರ ಬೇಕಿತ್ತು. ಆಗ ಸಿಕ್ಸ್ ಹೋಗುತ್ತಿದ್ದ ಬಾಲ್‌ ತಡೆದು, ಇದೇ ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್ ಸಮೀಪ ಎಗರಿ ಕ್ಯಾಚ್ ಹಿಡಿದು ನೆರವಾಗಿ ನಿಂತರು. ಹಾಗೇ ಭಾರತ ಪಂದ್ಯ & ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+