ವೈಭವ್ ಸೂರ್ಯವಂಶಿ ನಾ ಕಂಡ ಅದ್ಭುತ ಪ್ರತಿಭೆ.. ಟೆಸ್ಟ್‌ನಲ್ಲಿ ಶತಕ ಸಿಡಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ: ಮಾಜಿ ಕ್ರಿಕೆಟರ್

Vaibhav Sooryavashi: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರ ಟೆಸ್ಟ್‌ ಕ್ರಿಕೆಟ್‌ ಭವಿಷ್ಯ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಈ ವಿಚಾರವಾಗಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ ವೈಭವ್ ಪರ ಬ್ಯಾಟ್ ಬೀಸಿ ಗಮನ ಸೆಳೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ವಾ ಅವರು, ಭಾರತದ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ಟೆಸ್ಟ್ ಕ್ರಿಕೆಟ್ ಆಡಲು ಸಮರ್ಥರಾಗಿದ್ದಾರೆ. 15 ವರ್ಷದ ಈ ಬಾಲಕ ಕಳೆದ ಒಂದು ವರ್ಷದಿಂದ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಆಟದ ಮೂಲಕ ಹೆಸರಾಗಿದ್ದಾರೆ.

Steve Waugh Backs Team India Cricketer Vaibhav Sooryavanshi for Test Cricket Future Know details

ಜಿಂಬಾಬ್ವೆ ವಿರುದ್ಧ ಮಿಂಚಿದ್ದ ವೈಭವ್

ವೈಭವ್ ಸೂರ್ಯವಂಶಿ ಅವರು ಇತ್ತೀಚೆಗಷ್ಟೇ ನಡೆದ ಇಂಗ್ಲೆಂಡ್ ಮತ್ತು ಜಿಂಬಾಬ್ವೆ ವಿರುದ್ಧದ ಟಿ-20 ಸರಣಿಗೆ ಟೀಮ್ ಇಂಡಿಯಾ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಜಿಂಬಾಬ್ವೆ ವಿರುದ್ಧ ಅರ್ಧಶತಕ ಸಿಡಿಸಿದ ಅವರು, ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡು ಗಮನ ಸೆಳೆದರು.

ವೈಭವ್ ಟೆಸ್ಟ್‌ ಕ್ರಿಕೆಟ್‌ ಭವಿಷ್ಯದ ಬಗ್ಗೆ ಸ್ಟೀವ್ ವಾ ಹೇಳಿದ್ದೇನು?

ಆದರೆ ಅವರು ಭವಿಷ್ಯದಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಾರೆಯೇ ಇಲ್ಲವೇ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿ ಪಂದ್ಯದಲ್ಲಿ ನಾರ್ತ್ ಈಸ್ಟ್ ಝೋನ್ ವಿರುದ್ಧ ಈಸ್ಟ್ ಝೋನ್ ಪರ ಆಡಿದ ಅವರು ಕೇವಲ 8 ರನ್ ಗಳಿಸಲಷ್ಟೇ ಶಕ್ತರಾದರು. ಇನ್ನೂ ವೈಭವ್ ಅವರ ಟೆಸ್ಟ್ ಭವಿಷ್ಯದ ಕುರಿತು ಮಾತನಾಡಿದ ಸ್ಟೀವ್ ವಾ, ಈ ಯುವ ಆಟಗಾರ ಖಂಡಿತ ಸಿದ್ಧರಾಗುತ್ತಾರೆ. ಆದರೆ ಭಾರತ ತಂಡ ಇಷ್ಟು ಬೇಗ ಅವರಿಗೆ ಅವಕಾಶ ನೀಡುತ್ತದೆಯೇ ಎಂಬ ಕುತೂಹಲವಿದೆ,' ಎಂದು ಹೇಳಿದ್ದಾರೆ.

'ಶತಕ ಸಿಡಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ'

'ವೈಭವ್ ಸೂರ್ಯವಂಶಿ ಅದ್ಭುತ ಪ್ರತಿಭೆ ಎನ್ನುವುದರಲ್ಲಿ ಆಶ್ಚರ್ಯವಿಲ್ಲ ಮತ್ತು ಅವರು ಟೆಸ್ಟ್ ಕ್ರಿಕೆಟ್ ಆಡಲು ಸಂಪೂರ್ಣ ಸಿದ್ಧರಾಗುತ್ತಾರೆ. ಅದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಆದರೆ ಭಾರತ ತಂಡ ಇಷ್ಟು ಬೇಗ ಅವರಿಗೆ ಅವಕಾಶ ನೀಡಲು ಸಿದ್ಧವಿದೆಯೇ ಎಂಬುದಷ್ಟೇ ಈಗಿರುವ ಪ್ರಶ್ನೆ. ಅವರು ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅವರಲ್ಲಿ ಅಂತಹ ಪ್ರತಿಭೆಯಿದೆ, ಆದರೆ ಅಲ್ಲಿಯ ಪರಿಸ್ಥಿತಿಯೇ ಬೇರೆಯಾಗಿರುತ್ತದೆ,' ಎಂದು ಅವರು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಟೆಸ್ಟ್ ಕ್ರಿಕೆಟ್‌ಗೆ ಪರಿಗಣಿಸಲ್ಪಡುವ ಮೊದಲು ಸೂರ್ಯವಂಶಿ ಸಾಕಷ್ಟು ಪ್ರಥಮ ದರ್ಜೆ ಕ್ರಿಕೆಟ್ ಅಂತಲೂ ಹೇಳಿದ್ದಾರೆ.. 'ಟೆಸ್ಟ್ ಕ್ರಿಕೆಟ್‌ನಲ್ಲಿ ಅವರಿಗೆ ಹಲವು ರೀತಿಯ ಸವಾಲುಗಳಿರುತ್ತವೆ. ಬೌಲರ್‌ಗಳು ವಿಭಿನ್ನವಾಗಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅಲ್ಲಿ ಹೆಚ್ಚು ಅವಕಾಶವಿರುತ್ತದೆ. ಆದ್ದರಿಂದ ವೈಭವ್ ಇನ್ನಷ್ಟು ಪ್ರಥಮ ದರ್ಜೆ ಪಂದ್ಯಗಳ ಅನುಭವ ಹೊಂದುವುದನ್ನು ನೋಡಲು ಬಯಸುತ್ತೇನೆ. ಮೂರು ಅಥವಾ ನಾಲ್ಕು ದಿನಗಳ ಕ್ರಿಕೆಟ್ ಆಡಿದ ಅನುಭವವಿಲ್ಲದೆ ಅವರನ್ನು ಟೆಸ್ಟ್ ಕ್ರಿಕೆಟ್‌ಗೆ ಸೇರಿಸಿಕೊಳ್ಳುವುದು ಸೂಕ್ತವಲ್ಲ,' ಎಂದು ಹೇಳಿದ್ದಾರೆ.

ಸಂಜಯ್ ಮಂಜ್ರೇಕರ್ ಹೇಳಿದ್ದೇನು?

ಕೊಲಂಬೋದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ವೇಳೆ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ಶ್ರೀಲಂಕಾದ ವೇಗಿ ಅಸಿತ ಫೆರ್ನಾಂಡೋ ನಡುವೆ ಮೈದಾನದಲ್ಲಿ ಜಟಾಪಟಿ ನಡೆದಿತ್ತು. ನಂತರ ಜೈಸ್ವಾಲ್ ಅವರಿಗೆ ದಂಡ ವಿಧಿಸಲಾಗಿತ್ತು. ಈ ಘಟನೆಯ ಬಳಿಕ ಮೈದಾನದಲ್ಲಿ ಆಟಗಾರರ ನಡವಳಿಕೆ ಮತ್ತು ಶಿಸ್ತಿನ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನಷ್ಟು ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+