Sri Lanka Team: ಟಿ20 ವಿಶ್ವಕಪ್‌ಗೆ ಶ್ರೀಲಂಕಾ ತಂಡ ಪ್ರಕಟ; ಮಾಜಿ ಆರ್‌ಸಿಬಿ ಆಟಗಾರನಿಗೆ ನಾಯಕತ್ವ
ಜೂನ್ 2 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಮಾಜಿ ಆರ್ ಸಿಬಿ ಆಟಗಾರ ವನಿಂದು ಹಸರಂಗ ಈ ಬಾರಿ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಐಪಿಎಲ್‌ನಲ್ಲಿ ಮಿಂಚುತ್ತಿರುವ ಆಟಗಾರರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಬಲಿಷ್ಠ ಸ್ಪಿನ್ ಮತ್ತು ವೇಗದ ಬೌಲಿಂಗ್ ದಾಳಿಯನ್ನು ಒಳಗೊಂಡಿದ್ದು, ಸ್ಫೋಟಕ ಬ್ಯಾಟರ್ ಗಳು ಕೂಡ ತಂಡದಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಲಂಕನ್ನರು ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಯುಎಸ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಐಪಿಎಲ್‌ನಲ್ಲಿ ಮಿಂಚುತ್ತಿರುವ ಮತೀಶ ಪತಿರಾನ, ಮಹೀಶ ತೀಕ್ಷಣ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಅವರ ಜೊತೆಗೆ ದುನಿತ್ ವೆಲ್ಲಲಗೆ, ದುಶ್ಮಂತ್ ಚಮೀರ, ವನಿಂದು ಹಸರಂಗ ಬೌಲಿಂಗ್ ವೇಗಕ್ಕೆ ಬಲ ತುಂಬಲಿದ್ದಾರೆ.
ಕುಶಾಲ್ ಮೆಂಡಿಸ್, ಚರಿತ್ ಅಸಲಂಕ, ಏಂಜೆಲೊ ಮ್ಯಾಥ್ಯೂಸ್, ದಸುನ್ ಶನಕ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಎಲ್ಲಾ ವಿಭಾಗಗಳಲ್ಲಿ ಕೂಡ ಉತ್ತಮ ಆಟಗಾರರು ಇದ್ದು, ಈ ಬಾರಿ ವಿವಿಧ ತಂಡಗಳಿಗೆ ಕಠಿಣ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.
ಟಿ20 ವಿಶ್ವಕಪ್‌ಗೆ ಶ್ರೀಲಂಕಾ ತಂಡ
ವನಿಂದು ಹಸರಂಗ (ನಾಯಕ), ಚರಿತ್ ಅಸಲಂಕ (ಉಪನಾಯಕ), ಕುಶಾಲ್ ಮೆಂಡಿಸ್, ಪಾತುಂ ನಿಸ್ಸಂಕ, ಕಮಿಂದು ಮೆಂಡಿಸ್, ಸದೀರ ಸಮರವಿಕ್ರಮ, ಏಂಜೆಲೊ ಮ್ಯಾಥ್ಯೂಸ್, ದಸುನ್ ಶನಕ, ಧನಂಜಯ ಡಿ ಸಿಲ್ವ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಾಗೆ, ದುಷ್ಮಂತ ಚಮೀರ, ಮತೀಶ ಪತಿರಾನ, ನುವಾನ್ ತುಶಾರ, ದಿಲ್ಷನ್ ಮಧುಶಂಕ.
ಪ್ರಯಾಣ ಮೀಸಲು ಆಟಗಾರರು: ಅಸಿತ ಫೆರ್ನಾಂಡೋ, ವಿಜಯಕಾಂತ್ ವಿಯಾಸ್‌ಕಾಂತ್, ಭಾನುಕಾ ರಾಜಪಕ್ಸೆ, ಜನಿತ್ ಲಿಯಾನಗೆ.












Click it and Unblock the Notifications