ಇಂಗ್ಲೆಂಡ್ ಪಬ್‌ನಲ್ಲಿ ಗಲಾಟೆ: ಸೌತ್ ಆಫ್ರಿಕಾ ಕ್ರಿಕೆಟಿಗನ ಮೇಲೆ ಹಲ್ಲೆ, ಕೋಮಾದಲ್ಲಿ ಮಾಂಡ್ಲಿ

ಲಂಡನ್, ಜೂನ್ 1: ಪಬ್‌ವೊಂದರಲ್ಲಿ ಸೌತ್ ಆಫ್ರಿಕಾ ಕ್ರಿಕೆಟಿಗನೊಬ್ಬರನ ಮೇಲೆ ಹಲ್ಲೆ ಎಸಗಿ ಗಾಯಗೊಳಿಸಿರುವ ಘಟನೆ ಭಾನುವಾರ ನಡೆದಿರುವುದು ಬೆಳಕಿಗೆ ಬಂದಿದೆ. ಬ್ರಿಟನ್‌ನ ಸಾಮರ್‌ಸೆಟ್ ರಾಜ್ಯದ ಬ್ರಿಗ್‌ವಾಟರ್ ಎಂಬ ಪಟ್ಟಣದಲ್ಲಿ ಘಟನೆ ನಡೆದಿರುವುದು ವರದಿಯಾಗಿದೆ. ಸೌತ್ ಆಫ್ರಿಕಾದ ಮಾಜಿ ಅಂಡರ್-19 ವಿಶ್ವಕಪ್ ಕ್ರಿಕೆಟಿಗ ಹಾಗು ವೇಗದ ಬೌಲರ್ 20 ವರ್ಷದ ಮಾಂಡ್ಲಿ ಖುಮಾಲೋ ಹಲ್ಲೆಗೊಳಗಾದವರು. ಪಬ್ ಆಚೆ ನಡೆದ ಈ ಹಲ್ಲೆ ಪ್ರಕರಣದಲ್ಲಿ ಪೊಲೀಸರು 27 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಬೇಸರದ ವಿಚಾರ ಎಂದರೆ ಹಲ್ಲೆಗೊಳಗಾದ ಕ್ರಿಕೆಟಿಗ ಪರಿಸ್ಥಿತಿ ಗಂಭೀರವಾಗಿರುವುದು ತಿಳಿದುಬಂದಿದೆ. ಖುಮಾಲೊ ಸದ್ಯ ಕೋಮಾ ಸ್ಥಿತಿಗೆ ಜಾರಿದ್ಧಾರೆ. ಘರ್ಷಣೆಯಲ್ಲಿ ಅವರ ತಲೆಗೆ ತೀವ್ರಪೆಟ್ಟು ಬಿದ್ದು ಮಿದುಳಿನಲ್ಲಿ ರಕ್ತಸ್ರಾವವಾಗಿದೆ. ಎರಡು ಶಸ್ತ್ರಚಿಕಿತ್ಸೆಗಳನ್ನು ವೈದ್ಯರು ನಡೆಸಿದ್ದಾರೆ.

ಸೌತ್ ಆಫ್ರಿಕಾದ ಉದಯೋನ್ಮುಖ ಕ್ರಿಕೆಟ್ ಪ್ರತಿಭೆ ಎನಿಸಿರುವ ಮಾಂಡ್ಲಿ ಅವರು ೨೦೨೦ರ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಆಡಿದ್ದರು. ಸೌತ್ ಆಫ್ರಿಕಾದಲ್ಲಿ ಅವರು 4 ಪ್ರಥಮ ದರ್ಜೆ ಪಂದ್ಯಗಳು ಮತ್ತು ಒಂದು ಲಿಸ್ಟ್ ಎ ಪಂದ್ಯವನ್ನು ಆಡಿದ್ದಾರೆ. ಇಂಗ್ಲೆಂಡ್‌ನ ನಾರ್ತ್ ಪೀಟರ್‌ಟನ್ ಕ್ರಿಕೆಟ್ ಕ್ಲಬ್‌ನ ಗುತ್ತಿಗೆ ಪಡೆದು ಸದ್ಯ ಆಡುತ್ತಿದ್ದರು. ಇದೇ ಮೊದಲ ಬಾರಿಗೆ ವಿದೇಶೀ ನೆಲದಲ್ಲಿ ಅವರು ವೃತ್ತಿಪರ ಕ್ರಿಕೆಟ್ ಆಡಿರುವುದು.

South African Cricketer Mandli in Coma after Clash Near Pub in England

ಸ್ಥಳೀಯ ಟೂರ್ನಿಯ ಪಂದ್ಯವೊಂದರಲ್ಲಿ ಗೆದ್ದ ಬಳಿಕ ಅವರು ತಮ್ಮ ನಾರ್ತ್ ಪೀಟರ್ಸನ್ ಕ್ರಿಕೆಟ್ ಕ್ಲಬ್‌ನ ಇತರ ಸದಸ್ಯರ ಜೊತೆ ಗೆಲುವಿನ ಸಂಭ್ರಮಾಚರಣೆ ಮಾಡಲು ಹೋಗಿದ್ದರು. ಈ ವೇಳೆ ಘರ್ಷಣೆ ಆಗಿದೆ. ಆದರೆ, ಗಲಾಟೆ ಯಾಕೆ ಶುರುವಾಯಿತು, ಯಾಕೆ ಹಲ್ಲೆ ನಡೆಸಲಾಯಿತು ಎಂಬುದು ನಿಖರವಾಗಿ ಗೊತ್ತಾಗಿಲ್ಲ.

ಮಾಂಡ್ಲಿ ಏಜೆಂಟ್ ಆಘಾತ:
ಇಂಗ್ಲೆಂಡ್‌ನಲ್ಲಿ ಕ್ಲಬ್ ಕ್ರಿಕೆಟ್ ಆಡಲು ಮಾಂಡ್ಲಿ ಅವರನ್ನು ಕರೆದು ತಂದಿದ್ದ ಏಜೆಂಟ್ ರಾಬ್ ಹಂಫ್ರೀಸ್ ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ

""ಮಾಂಡ್ಲಿ ನಿಜಕ್ಕೂ ಒಳ್ಳೆಯ ಹುಡುಗ. ನಾರ್ತ್ ಪೀಟರ್‌ಟನ್‌ನಲ್ಲಿರುವ ಪ್ರತಿಯೊಬ್ಬರೂ ಕೂಡ ಆತನನ್ನು ಇಷ್ಟಪಡುತ್ತಾರೆ. ಇಲ್ಲಿ ಬಹಳ ಖುಷಿಯಿಂದಲೂ ಇದ್ದ ಹುಡುಗ. ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದ ಆತ ಈ ಕ್ಲಬ್‌ನ ಪ್ರಮುಖ ಆಟಗಾರನೂ ಆಗಿದ್ದ" ಎಂದು ರಾಬ್ ಹಂಫ್ರೀಸ್ ಹೇಳಿದ್ದಾರೆ.

South African Cricketer Mandli in Coma after Clash Near Pub in England

ಸದ್ಯ ಖುಮಾಲೋ ಅವರ ವೈದ್ಯಕೀಯ ವೆಚ್ಚವೆಲ್ಲವನ್ನೂ ನಾರ್ತ್ ಪೀಟರ್ನಟನ್ ಕ್ಲಬ್‌ನವರೇ ನೋಡಿಕೊಳ್ಳುತ್ತಿದ್ಧಾರೆ. ಆದರೂ ಮುಂಬರುವ ವೆಚ್ಚವನ್ನು ಗಮನದಲ್ಲಿರಿಸಿಕೊಂಡು ಕ್ಲಬ್‌ನವರು ಕ್ರೌಡ್ ಫಂಡಿಂಗ್ ಕಾರ್ಯಕ್ಕೆ ಮುಂದಾಗಿದ್ದಾರೆ. ಇದೇ ವೇಳೆ, ಗಾಯಾಳು ಆಟಗಾರನ ಕುಟುಂಬ ಸದಸ್ಯರು ಸೌತ್ ಆಫ್ರಿಕಾದಿಂದ ಇಂಗ್ಲೆಂಡ್‌ಗೆ ಬರಲು ಪಾಸ್‌ಪೋರ್ಟ್ ಇತ್ಯಾದಿ ನೆರವನ್ನು ಏಜೆಂಟ್ ರಾಬ್ ಹಂಫ್ರೀಸ್ ಮಾಡುತ್ತಿದ್ದಾರೆನ್ನಲಾಗಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+