
ಲೆಜೆಂಡ್ಸ್ ಲೀಗ್ ಕ್ರಿಕೆಟ್: ವಿಶೇಷ ಪಂದ್ಯದಲ್ಲಿ ಆಡುವ ನಿರ್ಧಾರದಿಂದ ಹಿಂದೆ ಸರಿದ ಸೌರವ್ ಗಂಗೂಲಿ
ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ನ ಆರಂಭದ ಪಂದ್ಯದಲ್ಲಿ ಭಾಗವಹಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಹಲವು ಕೆಲಸಗಳ ಒತ್ತಡದ ಕಾರಣದಿಂದಾಗಿ ನಾನು ಪಂದ್ಯವನ್ನು ಆಡಲು ಆಗುತ್ತಿಲ್ಲ, ಆದರೆ ಆ ದಿನ ಪಂದ್ಯದ ಸಮಯದಲ್ಲಿ ಕ್ರೀಡಾಂಗಣದಲ್ಲಿ ಹಾಜರಿರುತ್ತೇನೆ ಎಂದು ಹೇಳಿದ್ದಾರೆ.
ಭಾರತದ ಸ್ವಾತಂತ್ಯ್ರದ ಅಮೃತ ಮಹೋತ್ಸವ ಅಂಗವಾಗಿ ಭಾರತ ಮಹಾರಾಜರ ತಂಡ ವರ್ಲ್ಡ್ ಜೈಂಟ್ಸ್ ತಂಡದ ವಿರುದ್ಧ ಸೆಪ್ಟೆಂಬರ್ 16ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಪಂದ್ಯವನ್ನು ಆಯೋಜನೆ ಮಾಡಲಾಗಿತ್ತು. ಈ ಪಂದ್ಯದದಲ್ಲಿ ಭಾರತ ಮಹಾರಾಜರ ತಂಡಕ್ಕೆ ಸೌರವ್ ಗಂಗೂಲಿ ನಾಯಕರಾಗಿ ಆಯ್ಕೆಯಾಗಿದ್ದರು. ಹಲವು ವರ್ಷಗಳ ಬಳಿಕ ಗಂಗೂಲಿ ಅವರು ಮತ್ತೆ ಕ್ರಿಕೆಟ್ ಆಡುವುದನ್ನು ನೋಡಲು ತವರಿನ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಗಂಗೂಲಿ ನಿರ್ಧಾರದಿಂದ ಈಗ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.
ಏಕದಿನ ಕ್ರಿಕೆಟ್: ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಪಂದ್ಯ ಗೆದ್ದು ಇತಿಹಾಸ ಬರೆದ ಜಿಂಬಾಬ್ವೆ

ಬೇಸರ ವ್ಯಕ್ತಪಡಿಸಿ ಪತ್ರ ಬರೆದ ಗಂಗೂಲಿ
ಲೀಗ್‌ಗೆ ಬರೆದ ಪತ್ರದಲ್ಲಿ ಸೌರವ್ ಅವರು ತಮ್ಮ ಕ್ರಿಕೆಟ್ ಸಹೋದ್ಯೋಗಿಗಳಿಗೆ ಚಾರಿಟಿ ಪಂದ್ಯ ಮತ್ತು ಲೀಗ್‌ಗೆ ಶುಭ ಹಾರೈಸಿದ್ದಾರೆ, "ಲೆಜೆಂಡ್ಸ್ ಲೀಗ್‌ಗೆ ನನ್ನ ಶುಭಾಶಯಗಳನ್ನು ತಿಳಿಸಲು ನಾನು ಬಯಸುತ್ತೇನೆ. ನಿವೃತ್ತ ಕ್ರಿಕೆಟಿಗರನ್ನು ಮರಳಿ ಕರೆತರುವ ಅದ್ಭುತ ಕಲ್ಪನೆಯಾಗಿದೆ, ಮೈದಾನದಲ್ಲಿ ತಲೆಮಾರುಗಳ ಅಭಿಮಾನಿಗಳೊಂದಿಗೆ ಬೆರೆಯುವುದು ಸಂತೋಷದ ವಿಚಾರ. ಸೆಪ್ಟೆಂಬರ್ 16, 2022 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಏಕಮಾತ್ರ ಲೆಜೆಂಡ್ಸ್ ಲೀಗ್ ಪಂದ್ಯದಲ್ಲಿ ಆಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ." ಎಂದು ಹೇಳಿದ್ದಾರೆ.
"ಬಿಸಿಸಿಐನ ನಿರಂತರ ಕೆಲಸದಿಂದಾಗಿ, ನಾನು ಈ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅಭಿಮಾನಿಗಳು ಈ ಲೀಗ್‌ಗಾಗಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ ಮತ್ತು ಕ್ರೀಡಾಂಗಣದಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ ಎಂದು ನನಗೆ ಖಾತ್ರಿಯಿದೆ. ನಾನು ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಿಸುತ್ತೇನೆ." ಎಂದು ಹೇಳಿದ್ದಾರೆ.
Asia Cup 2022: ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆ ಸಾಧ್ಯತೆ

ಸ್ವಾತಂತ್ಯ್ರದ ಅಮೃತ ಮಹೋತ್ಸವದ ನೆನಪಿಗೆ ವಿಶೇಷ ಪಂದ್ಯ
ಭಾರತದ ಸ್ವಾತಂತ್ಯ್ರದ ಅಮೃತ ಮಹೋತ್ಸವದ ನೆನಪಿಗಾಗಿ ಈ ವಿಶೇಷ ಪಂದ್ಯವನ್ನು ಆಯೋಜನೆ ಮಾಡಲಾಗಿತ್ತು. ಸೆಪ್ಟೆಂಬರ್ 16ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.
ಲೆಜೆಂಡ್ ಲೀಗ್ ಕ್ರಿಕೆಟ್‌ನ ಆರಂಭದ ಪಂದ್ಯ ಇದಾಗಿದೆ. ಇದು ಚಾರಿಟಿ ಉದ್ದೇಶಕ್ಕಾಗಿ ಆಡುವ ಪಂದ್ಯವಾಗಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಪಂದ್ಯದಿಂದ ಬರುವ ಸಂಪೂರ್ಣ ಆದಾಯವನ್ನು ಕಪಿಲ್ ದೇವ್ ಅವರ ಖುಷಿ ಫೌಂಡೇಶನ್‌ಗೆ ದೇಣಿಗೆ ನೀಡಲಾಗುತ್ತದೆ.

10 ರಾಷ್ಟ್ರಗಳ ದಿಗ್ಗಜ ಕ್ರಿಕೆಟಿಗರು ಭಾಗಿ
ಮಹತ್ವದ ಉದ್ದೇಶಕ್ಕಾಗಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ಆಡುತ್ತಿರು ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಲು 10 ವಿವಿಧ ರಾಷ್ಟ್ರಗಳ ವಿವಿಧ ಆಟಗಾರರು ಒಪ್ಪಿಕೊಂಡಿದ್ದಾರೆ. ಭಾರತದ ಮಹಾರಾಜಾಸ್ ತಂಡದಲ್ಲಿ ವಿರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್ ಸೇರಿದಂತೆ ಪ್ರಮುಖ ಆಟಗಾರರು ಭಾಗವಹಿಸುತ್ತಿದ್ದಾರೆ.
ವರ್ಲ್ಡ್ ಜೈಂಟ್ಸ್ ಪಂದ್ಯದಲ್ಲಿ ಹಲವು ಪ್ರಮುಖ ಆಟಗಾರರು ಭಾಗವಹಿಸಲಿದ್ದಾರೆ, ಇಯಾನ್ ಮಾರ್ಗನ್ ವರ್ಲ್ಡ್ ಜೈಂಟ್ಸ್ ತಂಡಕ್ಕೆ ನಾಯಕತ್ವ ವಹಿಸಿಕೊಂಡಿದ್ದಾರೆ. ಮುತ್ತಯ್ಯ ಮುರಳೀಧರನ್, ಬ್ರೆಟ್ ಲೀ, ಶೇನ್ ವಾಟ್ಸನ್, ಜಾಕ್ ಕಾಲಿಸ್ ಸೇರಿದಂತೆ ಹಲವು ಆಟಗಾರರು ಭಾಗವಹಿಸಲಿದ್ದಾರೆ.

ಗಂಗೂಲಿ ನಿರ್ಧಾರವನ್ನು ಗೌರವಿಸುತ್ತೇವೆ
ನಾವು ಸೌರವ್ ಗಂಗೂಲಿ ಅವರ ನಿರ್ಧಾರವನ್ನು ಗೌರವಿಸುತ್ತೇವೆ ಮತ್ತು ಲೆಜೆಂಡ್ಸ್ ಲೀಗ್ ಕ್ರಿಕೆಟ್ ದಿಗ್ಗಜ ಕ್ರಿಕೆಟಿಗರ ಶ್ರೇಷ್ಠತೆಯನ್ನು ಅತ್ಯುತ್ತಮ ರೀತಿಯಲ್ಲಿ ಆಚರಿಸುತ್ತಿದೆ.
ಸೌರವ್ ಗಂಗೂಲಿ ಆಡದಿದ್ದರೂ ಸಹ, ಅವರ ಉಪಸ್ಥಿತಿಯೊಂದಿಗೆ ಈ ಪಂದ್ಯ ಸಮಯದಲ್ಲಿ ಕ್ರೀಡಾಂಗಣದಲ್ಲಿ ಭಾಗವಹಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ ಎಂದು ಸಿಇಒ ಮತ್ತು ಸಹ-ಸಂಸ್ಥಾಪಕ ಲೆಜೆಂಡ್ಸ್ ಲೀಗ್ ಕ್ರಿಕೆಟ್ ರಮಣ್ ರಹೇಜಾ ಹೇಳಿದರು.