Simon Harmer: 18 ವರ್ಷಗಳ ಹಳೆಯ ಡೇಲ್ ಸ್ಟೇನ್ ದಾಖಲೆ ಪತನ

Simon Harmer: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಫ್ ಸ್ಪಿನ್ನರ್ ಸೈಮನ್ ಹಾರ್ಮರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಅವರು ತಮ್ಮದೇ ದೇಶದ ಮಾಜಿ ವೇಗಿ ಡೇಲ್ ಸ್ಟೇನ್ ಹೆಸರಿನಲ್ಲಿದ್ದ 18 ವರ್ಷಗಳ ಹಳೆಯ ಪ್ರಮುಖ ದಾಖಲೆಯೊಂದನ್ನು ಮುರಿಯುವ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಂದು, 9ನೇ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಹಾರ್ಮರ್ 82 ರನ್‌ಗಳ ಅತ್ಯುತ್ತಮ ಇನಿಂಗ್ಸ್ ಆಡಿದರು. ಆಸ್ಟ್ರೇಲಿಯಾ ವಿರುದ್ಧ ಈ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್‌ ಒಬ್ಬರು ಕಲೆಹಾಕಿದ ಗರಿಷ್ಠ ರನ್ ಇದಾಗಿದೆ. 2008ರಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಡೇಲ್ ಸ್ಟೇನ್ ಬಾರಿಸಿದ್ದ 76 ರನ್‌ಗಳ ದಾಖಲೆಯನ್ನು ಹಾರ್ಮರ್ ಈಗ ಹಿಂದಿಕ್ಕಿದ್ದಾರೆ.

Simon Harmer Breaks Dale Steyn s 18-Year-Old Record Against Australia Know complete details

ಉತ್ತಮ ಪ್ರದರ್ಶನ ನೀಡಿದ ಹಾರ್ಮರ್

ತಮ್ಮ ಚೊಚ್ಚಲ ಟೆಸ್ಟ್ ಅರ್ಧಶತಕದ ಹಾದಿಯಲ್ಲಿ ಹಾರ್ಮರ್ 91 ಎಸೆತಗಳನ್ನು ಎದುರಿಸಿ, 10 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಆಸ್ಟ್ರೇಲಿಯಾದ ಮಾರಕ ಬೌಲಿಂಗ್ ದಾಳಿಯಿಂದಾಗಿ ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಟೆಂಬಾ ಬವುಮಾ ಅವರೊಂದಿಗೆ ಸೇರಿ ಹಾರ್ಮರ್ ಉತ್ತಮ ಪ್ರದರ್ಶನ ನೀಡಿದರು.

183 ರನ್‌ಗಳ ಭರ್ಜರಿ ಜೊತೆಯಾಟ

ದಕ್ಷಿಣ ಆಫ್ರಿಕಾ 110 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಬವುಮಾ ಮತ್ತು ಮಾರ್ಕೊ ಜಾನ್ಸನ್ 7ನೇ ವಿಕೆಟ್‌ಗೆ 132 ರನ್‌ಗಳ ಕಾಣಿಕೆ ನೀಡಿದರು. ಜಾನ್ಸನ್ 85 ರನ್ ಗಳಿಸಿ ಔಟಾದ ನಂತರ ಕ್ರೀಸ್‌ಗೆ ಬಂದ ಹಾರ್ಮರ್, ಬವುಮಾ ಜೊತೆಗೂಡಿ 8ನೇ ವಿಕೆಟ್‌ಗೆ ಬರೋಬ್ಬರಿ 183 ರನ್‌ಗಳ ಭರ್ಜರಿ ಜೊತೆಯಾಟ ಆಡಿದರು.

ಇದು ದಕ್ಷಿಣ ಆಫ್ರಿಕಾ ಟೆಸ್ಟ್ ಇತಿಹಾಸದಲ್ಲಿ 8ನೇ ಅಥವಾ ಅದಕ್ಕಿಂತ ಕೆಳ ಕೆಳ ಕ್ರಮಾಂಕದ ವಿಕೆಟ್‌ಗೆ ಮೂಡಿಬಂದ ಎರಡನೇ ಗರಿಷ್ಠ ಜೊತೆಯಾಟವಾಗಿದೆ. 1998ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಪಾಕಿಸ್ತಾನ ವಿರುದ್ಧ ಮಾರ್ಕ್ ಬೌಚರ್ ಮತ್ತು ಪ್ಯಾಟ್ ಸೈಮ್‌ಕಾಕ್ಸ್ ಗಳಿಸಿದ್ದ 195 ರನ್‌ಗಳ ಜೊತೆಯಾಟ ಮೊದಲ ಸ್ಥಾನದಲ್ಲಿದೆ. 2008ರಲ್ಲಿ ಜೆಪಿ ಡುಮಿನಿ ಮತ್ತು ಡೇಲ್ ಸ್ಟೇನ್ ಆಸ್ಟ್ರೇಲಿಯಾ ವಿರುದ್ಧ ನಿರ್ಮಿಸಿದ್ದ 180 ರನ್‌ಗಳ ಜೊತೆಯಾಟವನ್ನು ಹಾರ್ಮರ್-ಬವುಮಾ ಜೋಡಿ ದಾಟಿತು.

179 ರನ್ ಬಾರಿಸಿದ ನಾಯಕ ತೆಂಬಾ

ನಾಯಕ ತೆಂಬಾ ಬವುಮಾ 334 ಎಸೆತಗಳಲ್ಲಿ 18 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 179 ರನ್ ಗಳಿಸಿ ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ಇನಿಂಗ್ಸ್ ಆಡಿದರು. ಹಾರ್ಮರ್ ಅವರನ್ನು ಮಾರ್ನಸ್ ಲಬುಶೇನ್ ಬೌಲ್ಡ್ ಮಾಡುವ ಮೂಲಕ ಚೊಚ್ಚಲ ಶತಕ ತಪ್ಪಿಸಿದರು. ಆ ಬಳಿಕ ದಕ್ಷಿಣ ಆಫ್ರಿಕಾ ತನ್ನ ಮೊದಲ ಇನಿಂಗ್ಸ್ ಅನ್ನು 9 ವಿಕೆಟ್‌ಗೆ 425 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.

ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತನ್ನ ಎರಡನೇ ಇನಿಂಗ್ಸ್‌ನಲ್ಲಿ 3 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. ಕಗಿಸೊ ರಬಾಡ, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ನಿಕ್ ಮ್ಯಾಡಿನ್ಸನ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಪ್ರಸ್ತುತ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಡರ್ಬನ್‌ನಲ್ಲಿ ನಡೆದ ಮೊದಲ ಪಂದ್ಯವನ್ನು 214 ರನ್‌ಗಳಿಂದ ಗೆದ್ದಿದ್ದ ಆಸ್ಟ್ರೇಲಿಯಾ 1-0 ಮುನ್ನಡೆಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+