Shubman Gill: ಇಂಗ್ಲೆಂಡ್ ವಿರುದ್ಧ ಶುಭಮನ್ ಗಿಲ್ ಐಸಿಸಿ ನಿಯಮ ಉಲ್ಲಂಘನೆ: ಕಾದಿದೆಯಾ ಸಂಕಷ್ಟ?
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಹೆಡಿಂಗ್ಲಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿ ಅಮೋಘ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಪ್ರವಾಸಿ ತಂಡದ ಪರ ಆರಂಭಿಕ ಯಶಸ್ವಿ ಜೈಸ್ವಾಲ್ ಹಾಗೂ ಶುಭಮನ್ ಗಿಲ್ ಶತಕ ಬಾರಿಸಿ ಅಬ್ಬರಿಸಿದ್ದಾರೆ. ನಾಯಕ ಶುಭಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಶತಕ ಸಿಡಿಸಿದರು. ಆದರೆ ಈಗ ಗಿಲ್ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
ಟೀಮ್ ಇಂಡಿಯಾ ಪರ ಚೊಚ್ಚಲ ಬಾರಿಗೆ ನಾಯಕರಾಗಿ ಕಣಕ್ಕೆ ಇಳಿದಿದ್ದ ಶುಭಮನ್ ಗಿಲ್, ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಇಷ್ಟೇ ಅಲ್ಲ ವಿರಾಟ್ ಕೊಹ್ಕಿ ಆಡುತ್ತಿದ್ದ ನಾಲ್ಕನೇ ಕ್ರಮಾಂಕದಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ತಂಡವನ್ನು ಮುನ್ನಡೆಸಿದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಆದರೆ ಈಗ ಶುಭಮನ್ ಗಿಲ್ ತಮ್ಮ ಅಮೋಘ ಇನಿಂಗ್ಸ್‌ನಿಂದ ಸುದ್ದಿ ಆಗುತ್ತಿಲ್ಲ. ಆದರೆ ಐಸಿಸಿ ನಿಯಮಗಳನ್ನು ಮೀರಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಉಡುಗೆಗಳ ಬಗ್ಗೆ ಐಸಿಸಿ ಕಟ್ಟುನಿಟ್ಟಿನ ನಿಯಮವನ್ನು ಹೊಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ನಿಯಮಗಳ ಪ್ರಕಾರ ಟೆಸ್ಟ್ ಪಂದ್ಯದ ವೇಳೆ ಬಿಳಿ, ಕ್ರೀಮ್, ತಿಳಿ ಬೂದು ಬಣ್ಣದ ಕಾಲ್ ಗವಸಗಳನ್ನು (ಸಾಕ್ಸ್) ಬಳಸಬೇಕಾಗುತ್ತದೆ. ಐಸಿಸಿ ಇದಕ್ಕಾಗಿ ಕಟ್ಟು ನಿಟ್ಟಿನ ನಿಯಮಗಳನ್ನು ಹೊಂದಿದೆ. ಎಂಸಿಸಿ ನಿಯಮ 19.45 ರ ಅಡಿಯಲ್ಲಿ ಮೇಲೆ ತಿಳಿಸಿದ ಬಣ್ಣಗಳನ್ನು ಬಿಟ್ಟು ಬೇರೆ ಬಣ್ಣಗಳ ಸಾಕ್ಸ್‌ಗಳನ್ನು ಉಪಯೋಗಿಸಲು ಅವಕಾಶವಿಲ್ಲ. ಈ ನಿಯಮವನ್ನು 2023ರಲ್ಲಿ ಜಾರಿಗೆ ಬಂದಿದೆ. ಈ ನಿಯಮಗಳನ್ನು ಆಟಗಾರರು ಕಟ್ಟು ನಿಟ್ಟಾಗಿ ಫಾಲೋ ಮಾಡ್ತಾರೆ.
ಕಪ್ಪು ಸಾಕ್ಸ್
ಆದರೆ ಶುಭಮನ್ ಗಿಲ್ ಇಂಗ್ಲೆಂಡ್ ವಿರುದ್ಧ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಕಪ್ಪು ಬಣ್ಣದ ಸಾಕ್ಸ್ ಹಾಕಿಕೊಂಡಿದ್ದು ಕ್ಯಾಮೆರಾಗಳ ಕಣ್ಣಲ್ಲಿ ಕಂಡು ಬಂದಿತು. ಈ ವಿಷಯ ಸಾಮಾಜಿಕ ತಾಣದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತು.ಇದು ನಿಯಮ ಉಲ್ಲಂಘನೆ ಅಲ್ಲವಾ ಎಂಬ ಪ್ರಶ್ನೆಗಳು ಸಹ ಎದ್ದವು. ಇದಕ್ಕೆ ಐಸಿಸಿ ಶಿಕ್ಷೆ ವಿಧಿಸಬಹುದಾ ಎಂಬ ಚರ್ಚೆಗಳು ಆರಂಭವಾಗಿವೆ.

ಶುಭಮನ್ ಗಿಲ್ ಅವರು ಐಸಿಸಿ ನಿಯಮಗಳನ್ನು ಉಲ್ಲಂಘಿಸಿದಕ್ಕಾಗಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆಟಗಾರ ಡ್ರೆಸ್ ಕೋಡ್ ಉಲ್ಲಂಘಿಸಿದಲ್ಲಿ ಲೆವೆಲ್ 1 ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ವೇಳೆ ಮ್ಯಾಚ್ ರೆಫ್ರಿ ಪಂದ್ಯದ ಶುಲ್ಕದ ಶೇಕಡಾ 10 ರಿಂದ 50ರ ವರೆಗೆ ದಂಡವನ್ನು ವಿಧಿಸಬಹುದು. ಅಲ್ಲದೆ ಡಿಮೆರಿಟ್ ಅಂಕಗಳನ್ನು ಸಹ ನೀಡಬಹುದು.
ಏನು ವಿಧಿಸಬಹುದು ಶಿಕ್ಷೆ?
ಈ ವಿಷಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ತೆಗೆದುಕೊಳ್ಳಬೇಕಾಗುತ್ತದೆ. ಐಸಿಸಿ ಮಾರ್ಗಸೂಚಿಗಳ ಪ್ರಕಾರ, ಯಾವುದೇ ಆಟಗಾರನು ಡ್ರೆಸ್ ಕೋಡ್ ಉಲ್ಲಂಘಿಸಿದರೆ ಅದನ್ನು ಲೆವೆಲ್ 1 ಅಪರಾಧವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ, ಆಟಗಾರನಿಗೆ ಪಂದ್ಯ ಶುಲ್ಕದ 10% ರಿಂದ 50% ವರೆಗೆ ದಂಡ ವಿಧಿಸಬಹುದು ಮತ್ತು ಆಟಗಾರನಿಗೆ ಡಿಮೆರಿಟ್ ಅಂಕಗಳನ್ನು ಸಹ ನೀಡಬಹುದು. ಆದಾಗ್ಯೂ, ಗಿಲ್ ಉದ್ದೇಶಪೂರ್ವಕವಾಗಿ ಈ ತಪ್ಪನ್ನು ಮಾಡಿಲ್ಲ ಎಂದು ಮ್ಯಾಚ್ ರೆಫರಿ ಭಾವಿಸಿದರೆ, ಕೇವಲ ಎಚ್ಚರಿಕೆ ನೀಡುವ ಮೂಲಕ ಅವರನ್ನು ಬಿಡುಗಡೆ ಮಾಡಬಹುದು.












Click it and Unblock the Notifications