ನಿಜವಾಗಿಯೂ ಶುಬ್ಮನ್ ಗಿಲ್ ನಿಂದ ಪ್ರಭಾವಿತನಾಗಿದ್ದು ಏಕೆಂದರೆ.. : ತೆಂಡೂಲ್ಕರ್
ಹಾಲೀ ಐಪಿಎಲ್ ಸೀಸನ್ ನಲ್ಲಿ ಪ್ರಚಂಡ ಫಾರ್ಮ್ ನಲ್ಲಿರುವ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಅವರ ಆಟದ ವೈಖರಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಫಿದಾ ಆಗಿದ್ದಾರೆ. ಯುವ ಆಟಗಾರನನ್ನು ಹಾಡಿ ಹೊಗಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ವಿರುದ್ದ ಮ್ಯಾಚ್ ವಿನ್ನಿಂಗ್ ಆಟವನ್ನು ಆಡಿದ ನಂತರ ಶುಬ್ಮನ್ ಗಿಲ್ ಗೆ, ಎಲ್ಲಾ ಕಡೆಯಿಂದಲೂ ಪ್ರಶಂಸೆಯ ಸುರಿಮಳೆಯೇ ಬರುತ್ತಿದೆ. ಈಗ ತೆಂಡೂಲ್ಕರ್ ಕೂಡಾ, ಗಿಲ್ ಆಟದಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳಿದ್ದಾರೆ.

ಎರಡನೇ ಕ್ವಾಲಿಫೈಯರ್ ನಲ್ಲಿ ಗಿಲ್, ಹತ್ತು ಸಿಕ್ಸ್ ಮತ್ತು ಏಳು ಬೌಂಡರಿಯ ಮೂಲಕ ಅರವತ್ತು ಎಸೆತದಲ್ಲಿ 129 ರನ್ ಚಚ್ಚಿದ್ದರು. ಆ ಮೂಲಕ, ಗುಜರಾತ್ ತಂಡ ಭಾರೀ ಮೊತ್ತದ ಸವಾಲನ್ನು ಮುಂಬೈಗೆ ನೀಡಿತ್ತು. ಆದರೆ, ಅದನ್ನು ಚೇಸ್ ಮಾಡುವಲ್ಲಿ ರೋಹಿತ್ ಶರ್ಮಾ ಪಡೆ ವಿಫಲವಾಗಿತ್ತು.
IND vs ZIM 3ನೇ ಏಕದಿನ: ಚೊಚ್ಚಲ ಅಂತಾರಾಷ್ಟ್ರೀಯ ಶತಕ ಸಿಡಿಸಿದ ಶುಭ್‌ಮನ್ ಗಿಲ್
"ಶುಬ್ಮನ್ ಗಿಲ್ ಅವರ ಆಟ ಅವಿಸ್ಮರಣೀಯವಾಗಿತ್ತು, ಮೈದಾನದಲ್ಲಿ ಈ ಯುವಕ ತೋರಿದ ಪ್ರಬುದ್ದತೆ, ತಾಳ್ಮೆ ಮತ್ತು ಕಾನ್ಫಿಡೆನ್ಸ್ ಯುವ ಆಟಗಾರರಿಗೆ ಮಾದರಿಯಾಗಿತ್ತು"ಎಂದು ಸಚಿನ್ ತೆಂಡೂಲ್ಕರ್ ಹಾಡಿ ಹೊಗಳಿದ್ದಾರೆ.
Shubman Gill's performance this season has been nothing short of unforgettable, marked by two centuries that left an indelible impact. One century ignited @mipaltan's hopes, while the other dealt them a crushing blow. Such is the unpredictable nature of cricket!
— Sachin Tendulkar (@sachin_rt) May 28, 2023
What truly… pic.twitter.com/R3VLWQxhoT
"ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿ, ಈ ಮೂವರು ಕ್ರಿಕೆಟಿನಲ್ಲಿ ತೋರಿದ ಸಾಧನೆಯನ್ನು ಈ ಯುವಕ ಕೂಡಾ ಮುಂದಿನ ದಿನಗಳಲ್ಲಿ ಮಾಡುತ್ತಾನೆ ಎನ್ನುವ ವಿಶ್ವಾಸ ನನಗಿದೆ. ಆ ಬದ್ದತೆ ಆತನಲ್ಲಿ ಇದೆ ಎನ್ನುವುದು ನನ್ನ ನಂಬಿಕೆ" ಎಂದು ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಅಭಿಪ್ರಾಯ ಪಟ್ಟಿದ್ದಾರೆ.
ಐಪಿಎಲ್ ಗೆ ಹೊಸ ಟೀಂ ಆಗಿ ಗುಜರಾತ್ ಟೈಟನ್ಸ್ ಸೇರ್ಪಡೆಗೊಂಡರೂ ಆ ತಂಡದ ಬೌಲಿಂಗ್ ವಿಭಾಗದಲ್ಲಿ ಹಲವು ಆಯ್ಕೆಗಳಿವೆ. ಸೂರ್ಯ ಕುಮಾರ್ ಯಾದವ್ ಅವರು ಮುಂಬೈ ತಂಡದಲ್ಲಿದ್ದರೂ, ಶುಬ್ಮನ್ ಗಿಲ್ ಪ್ರಸಕ್ತ ಟೂರ್ನಮೆಂಟಿನಲ್ಲಿ ಬಲಾಢ್ಯನಾಗಿದ್ದಾನೆ ಎಂದು ಅತುಲ್ ವಾಸನ್ ಹೊಗಳಿದ್ದಾರೆ.












Click it and Unblock the Notifications