• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭ್‌ಮನ್‌ ಗಿಲ್ ಭರ್ಜರಿ ಶತಕ: ಜಿಂಬಾಬ್ವೆ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

|
Google Oneindia Kannada News

ಭಾರತ-ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಅಂತಿಮ ಕ್ಷಣದಲ್ಲಿ ಗೆದ್ದು ಬೀಗಿದೆ. ಈ ಮೂಲಕ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಶುಭ್‌ಮನ್ ಗಿಲ್ ಅಮೋಘ ಶತಕನದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 289 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನತ್ತಿದ ಜಿಂಬಾಬ್ವೆ ಒಂದು ಹಂತದಲ್ಲಿ ಹೀನಾಯವಾಗಿ ಸೋಲುವ ಸ್ಥಿತಿಯಲ್ಲಿತ್ತು. ಆದರೆ ಸಿಕಂದರ್ ರಜಾ ಶತಕ ಗಳಿಸುವ ಮೂಲಕ ಜಿಂಬಾಬ್ವೆಗೆ ಗೆಲುವಿನ ಭರವಸೆ ಮೂಡಿಸಿದರು.

ಪಂಜಾಬ್ ಕಿಂಗ್ಸ್ ನಾಯಕ ಸ್ಥಾನದಿಂದ ಕೆಳಗಿಳಿಯಲಿರುವ ಕನ್ನಡಿಗ ಮಯಾಂಕ್: ಯಾರು ಹೊಸ ನಾಯಕ?ಪಂಜಾಬ್ ಕಿಂಗ್ಸ್ ನಾಯಕ ಸ್ಥಾನದಿಂದ ಕೆಳಗಿಳಿಯಲಿರುವ ಕನ್ನಡಿಗ ಮಯಾಂಕ್: ಯಾರು ಹೊಸ ನಾಯಕ?

ಅಂತಿಮ ಮೂರು ಓವರ್ ಗಳಲ್ಲಿ ಪಂದ್ಯ ರೋಚಕತೆಯಿಂದ ಕೂಡಿತ್ತು. ಕೊನೆಯ 18 ಎಸೆತಗಳಲ್ಲಿ ಜಿಂಬಾಬ್ವೆ ಗೆಲುವಿಗೆ 33 ರನ್ ಬೇಕಿತ್ತು ಆವೇಶ್‌ ಖಾನ್ 48ನೇ ಓವರ್ ನಲ್ಲಿ 16 ರನ್ ಬಿಟ್ಟು ಕೊಟ್ಟು ಬ್ರಾಡ್ ಇವಾನ್ಸ್‌ರನ್ನು ಔಟ್ ಮಾಡಿದರು. ಆದರೆ ಶತಕ ಗಳಿಸಿದ್ದ ಸಿಕಂದರ್ ರಾಜಾ ಇನ್ನು ಕ್ರೀಸ್‌ನಲ್ಲಿದ್ದರು.

49ನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ಶಾರ್ದೂಲ್ ಠಾಕೂರ್ ಕೇವಲ 2 ರನ್ ನೀಡಿ ಸಿಕಂದರ್ ರಜಾ ಅವರನ್ನು ಔಟ್ ಮಾಡುವ ಮೂಲಕ ಭಾರತದ ಸೋಲಿನ ಆತಂಕವನ್ನು ದೂರ ಮಾಡಿದರು. ಅಂತಿಮವಾಗಿ ಜಿಂಬಾಬ್ವೆ 276 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 13 ರನ್‌ಗಳ ಅಂತರದಲ್ಲಿ ಸೋಲನುಭವಿಸಿತು.

ಭಾರತೀಯ ಫುಟ್ಬಾಲ್ ಸಂಸ್ಥೆಗೆ ಆಡಳಿತ ಬಿಟ್ಟುಕೊಟ್ಟ ಸುಪ್ರೀಂ; ಫೀಫಾ ನಿಷೇಧ ವಾಪಸ್?ಭಾರತೀಯ ಫುಟ್ಬಾಲ್ ಸಂಸ್ಥೆಗೆ ಆಡಳಿತ ಬಿಟ್ಟುಕೊಟ್ಟ ಸುಪ್ರೀಂ; ಫೀಫಾ ನಿಷೇಧ ವಾಪಸ್?

ಮೊದಲನೇ ಶತಕ ಗಳಿಸಿ ಸಂಭ್ರಮಿಸಿದ ಗಿಲ್

ಮೊದಲನೇ ಶತಕ ಗಳಿಸಿ ಸಂಭ್ರಮಿಸಿದ ಗಿಲ್

ಭಾರತದ ಭರವಸೆಯ ಯುವ ಆಟಗಾರ ಶುಭ್‌ಮನ್ ಗಿಲ್ ಸೋಮವಾರದ ಪಂದ್ಯದಲ್ಲಿ ತಮ್ಮ ಶತಕದ ಖಾತೆಯನ್ನು ತರೆದರು. ಹಲವು ಪಂದ್ಯಗಳಲ್ಲಿ ಶತಕದ ಸನಿಹ ಬಂದು ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದ ಅವರು, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಯಶಸ್ವಿಯಾಗಿ ಶತಕ ಪೂರೈಸಿದರು.

97 ಎಸೆತಗಳನ್ನು ಎದುರಿಸಿದ ಗಿಲ್ 130 ರನ್‌ ಗಳಿಸಿದರು. ಇದರಲ್ಲಿ 15 ಬೌಂಡರಿ ಮತ್ತು ಸಿಕ್ಸರ್ ಸೇರಿತ್ತು. ಅರ್ಹವಾಗಿವೇ ಶುಭ್‌ಮನ್‌ ಗಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

 ಭರವಸೆ ಮೂಡಿಸಿರುವ ಶುಭ್‌ಮನ್‌ ಗಿಲ್

ಭರವಸೆ ಮೂಡಿಸಿರುವ ಶುಭ್‌ಮನ್‌ ಗಿಲ್

ಕಳೆದ ಎರಡು ತಿಂಗಳಿನಿಂದ ಹಲವು ಅವಕಾಶಗಳನ್ನು ಪಡೆದಿರುವ ಶುಭ್‌ಮನ್ ಗಿಲ್‌ ಭಾರತದ ಭವಿಷ್ಯದ ಪ್ರಮುಖ ಆಟಗಾರನಾಗುವ ಭರವಸೆ ಮೂಡಿಸಿದ್ದಾರೆ. ಜಿಂಬಾಬ್ವೆ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ 245 ರನ್ ಗಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನಾರದರು.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೂ ಶುಭ್‌ಮನ್ ಗಿಲ್ ಉತ್ತಮ ಪ್ರದರ್ಶನ ನೀಡಿದ್ದರು. ಆಡಿದ ಮೂರು ಏಕದಿನ ಪಂದ್ಯಗಳಲ್ಲಿ 205 ರನ್ ಗಳಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಮುಂಬರುವ ವಿಶ್ವಕಪ್‌ನಲ್ಲಿ ಆರಂಭಿಕ ಆಟಗಾರನ ಸ್ಥಾನಕ್ಕೆ ಶುಭ್‌ಮನ್‌ ಗಿಲ್ ಪೈಪೋಟಿ ನೀಡುವುದಂತು ಖಂಡಿತ.

ನಿರೀಕ್ಷಿತ ಪ್ರದರ್ಶನ ನೀಡದ ಕೆ.ಎಲ್‌. ರಾಹುಲ್

ನಿರೀಕ್ಷಿತ ಪ್ರದರ್ಶನ ನೀಡದ ಕೆ.ಎಲ್‌. ರಾಹುಲ್

ಐಪಿಎಲ್‌ ನಂತರ ಗಾಯಗೊಂಡು ಕ್ರಿಕೆಟ್‌ನಿಂದ ದೂರಾಗಿದ್ದ ಕೆ.ಎಲ್‌.ರಾಹುಲ್ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತದ ನಾಯಕನಾಗಿ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತಿದ್ದರು. ಮೊದಲ ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ.

ಎರಡನೇ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕೆ.ಎಲ್‌.ರಾಹುಲ್‌ ಕೇವಲ ಒಂದು ರನ್ ಗಳಿಸಿ ಔಟಾಗಿದ್ದರು. ರಾಹುಲ್ ಕೊನೆಯ ಪಂದ್ಯದಲ್ಲಿ ಒಟ್ಟು 46 ಎಸೆತಗಳನ್ನು ಆಡುವಲ್ಲಿ ಯಶಸ್ವಿಯಾದರು ಆದರೆ ಕೇವಲ 30 ರನ್ ಗಳಿಸಿದರು.

ಟೀಂ ಇಂಡಿಯಾಕ್ಕೆ ಕಾಡಲಿದೆ ಬುಮ್ರಾ ಅನುಪಸ್ಥಿತಿ

ಟೀಂ ಇಂಡಿಯಾಕ್ಕೆ ಕಾಡಲಿದೆ ಬುಮ್ರಾ ಅನುಪಸ್ಥಿತಿ

ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಗಾಯಗೊಂಡಿದ್ದು ಅವರು ಮತ್ತೆ ಯಾವಾಗ ಮೈದಾನಕ್ಕಿಳಿಯಲಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಬುಮ್ರಾ ಏಷ್ಯಾಕಪ್‌ನಿಂದ ಹೊರಬಿದ್ದಿದ್ದಾರೆ. ಈ ಸಮಯದಲ್ಲಿ ಭಾರತದ ಬೌಲಿಂಗ್ ವಿಭಾಗ ಕೊಂಚ ದುರ್ಬಲವಾದಂತೆ ಕಂಡಿದೆ.

ಜಿಂಬಾಬ್ವೆ ವಿರುದ್ಧದ ಮೂರನೇ ಪಂದ್ಯದಲ್ಲಿ ಆವೇಶ್ ಖಾನ್‌ ವಿಕೆಟ್ ತೆಗೆದರು ಹೆಚ್ಚಿನ ರನ್ ಬಿಟ್ಟುಕೊಟ್ಟರು. ಮತ್ತೊಂದೆಡೆ, ಏಷ್ಯಾಕಪ್ ತಂಡದಲ್ಲಿ ಸ್ಟ್ಯಾಂಡ್‌ಬೈ ಆಗಿರುವ ದೀಪಕ್ ಚಹಾರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಗಾಯದ ಕಾರಣ ಆರು ತಿಂಗಳ ಅನುಪಸ್ಥಿತಿಯ ನಂತರ ಮರಳಿದ ಅವರು ಮೊದಲ ಪಂದ್ಯದಲ್ಲಿ 3 ವಿಕೆಟ್ ಪಡೆದರು.

English summary
After two one-sided matches, the final ODI of the India-Zimbabwe series ended with the visitors winning a nail-biting tie by a margin of just 13 runs. Sikander Raza produced one of the finest innings in recent times by a Zimbabwe batter while Shubman Gill registered his first century in international cricket for the nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X