IPL 2025: ಪಂಜಾಬ್ ಕಿಂಗ್ಸ್‌ಗೆ ನಾಯಕನ ಹೆಸರು ಘೋಷಿಸಿದ ಸಲ್ಮಾನ್ ಖಾನ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಯಲ್ಲಿ ಸಂಪೂರ್ಣ ಹೊಸ ತಂಡವನ್ನು ಆಯ್ಕೆ ಮಾಡಿದೆ. ಹೊಸ ತಂಡಕ್ಕೆ ನಾಯಕ ಯಾರು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕೆಕೆಆರ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಈ ಬಾರಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಜನಪ್ರಿಯ ರಿಯಾಲಿಟಿ ಶೋ ಹಿಂದಿ ಬಿಗ್ ಬಾಸ್ 18ನೇ ಆವೃತ್ತಿಯಲ್ಲಿ ನಡೆದ ವಿಶಿಷ್ಟವಾದ ಬೆಳವಣಿಗೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಬಾಲಿವುಡ್ ಮೆಗಾ ಸ್ಟಾರ್ ಸಲ್ಮಾನ್ ಖಾನ್ ಪಂಜಾಬ್ ಕಿಂಗ್ಸ್ ತಂಡದ ಹೊಸ ನಾಯಕನ ಹೆಸರನ್ನು ಘೋಷಿಸಿದರು.

ಎರಡನೇ ದುಬಾರಿ ಆಟಗಾರ
ಐಪಿಎಲ್ ಇತಿಹಾಸದಲ್ಲೇ ರಿಷಬ್ ಪಂತ್ ಬಳಿಕ ಎರಡನೇ ದುಬಾರಿ ಆಟಗಾರ ಶ್ರೇಯಸ್ ಅಯ್ಯರ್. ₹26.75 ಕೋಟಿಗೆ ಹರಾಜಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಅತಿ ಹೆಚ್ಚು ಪರ್ಸ್ ಜೊತೆ ಹರಾಜಿಗೆ ಬಂದಿದ್ದ ಪಂಜಾಬ್ ಕಿಂಗ್ಸ್ ಯಾವುದೇ ಕಾರಣಕ್ಕೂ ಶ್ರೇಯಸ್ ಅಯ್ಯರ್ ಅವರನ್ನು ಬಿಟ್ಟುಕೊಡಲು ಸಿದ್ದರಿರಲಿಲ್ಲ. ಆಗಲೇ ಪಂಜಾಬ್ ಕಿಂಗ್ಸ್ ನಾಯಕನ ಸ್ಥಾನಕ್ಕಾಗಿಯೇ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ನಿರೀಕ್ಷೆ ಮಾಡಲಾಗಿತ್ತು.
ಶ್ರೇಯಸ್ ಅಯ್ಯರ್ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡುವುದಷ್ಟೇ ಬಾಕಿಯಿತ್ತು. ಈಗ ಪಂಜಾಬ್ ಕಿಂಗ್ಸ್ ಅಧಿಕೃತವಾಗಿ ನಾಯಕನ ಹೆಸರು ಘೋಷಿಸಿದೆ. ಈವರೆಗೂ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಪಂಜಾಬ್ ಕಿಂಗ್ಸ್ ಮೊದಲ ಪ್ರಶಸ್ತಿಯ ಹುಡುಕಾಟದಲ್ಲಿದ್ದು ಶ್ರೇಯಸ್ ಅಯ್ಯರ್ ಆ ಕನಸನ್ನು ನನಸು ಮಾಡುತ್ತಾರೆ ಎನ್ನುವ ಆತ್ಮವಿಶ್ವಾಸದಲ್ಲಿದೆ.
ಶ್ರೇಯಸ್ ಅಯ್ಯರ್ ಜೊತೆ ಈ ಮೊದಲು ಕೆಲಸ ಮಾಡಿರುವ ರಿಕಿ ಪಾಂಟಿಂಗ್ ಈಗ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿದ್ದು, ಅಯ್ಯರ್ ತಂಡಕ್ಕೆ ಉತ್ತಮ ಆಯ್ಕೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಶ್ರೇಯಸ್ ಅಯ್ಯರ್ ಒಬ್ಬ ಉತ್ತಮ ವ್ಯಕ್ತಿ ಮತ್ತು ಉತ್ತಮ ಆಟಗಾರ, ಅವರು ತಂಡಕ್ಕೆ ಅತ್ಯುತ್ತಮ ನಾಯಕರಾಗುತ್ತಾರೆ ಎಂದು ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2025ರ ಮೆಗಾ ಹರಾಜಿನಲ್ಲಿ 110.50 ಕೋಟಿ ರೂಪಾಯಿಗಳ ಪರ್ಸ್ ಜೊತೆ ಬಂದ ಪಂಜಾಬ್ ಕಿಂಗ್ಸ್, ಯುಜ್ವೇಂದ್ರ ಚಾಹಲ್ ಮತ್ತು ಅರ್ಶ್‌ದೀಪ್ ಸಿಂಗ್ ಅವರನ್ನು ಬರೋಬ್ಬರಿ 18 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಯಶ್ ಠಾಕೂರ್, ಲಾಕಿ ಫರ್ಗುಸನ್, ಮಾರ್ಕೋ ಯಾನ್ಸೆನ್ ಪ್ರಮುಖ ಬೌಲರ್ ಆಗಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೆ ಪಂಜಾಬ್ ಸೇರಿರುವುದು ವಿಶೇಷ.
2025ರ ಐಪಿಎಲ್‌ಗೆ ಪಂಜಾಬ್ ಕಿಂಗ್ಸ್ ತಂಡ
ಶಶಾಂಕ್ ಸಿಂಗ್, ಪ್ರಭ್‌ಸಿಮ್ರಾನ್ ಸಿಂಗ್, ಅರ್ಶ್‌ದೀಪ್ ಸಿಂಗ್, ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಾಹಲ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ನೆಹಾಲ್ ವಧೇರಾ, ಹರ್‌ಪ್ರೀತ್ ಬ್ರಾರ್, ವಿಷ್ಣು ವಿನೋದ್, ವಿಜಯ್‌ಕುಮಾರ್ ವೈಶಾಕ್, ಯಶ್ ಠಾಕೂರ್, ಮಾರ್ಕೊ ಯಾನ್ಸೆನ್, ಜೋಶ್ ಇಂಗ್ಲಿಸ್, ಲಾಕಿ ಫರ್ಗುಸೆಮ್, ಅಜ್ಮತುಲ್ಲಾ ಒಮರ್ಜಾಯ್, ಕುಲದೀಪ್ ಸೇನ್, ಪ್ರಿಯಾಂಶ್ ಆರ್ಯ, ಆರನ್ ಹಾರ್ಡಿ, ಮುಶೀರ್ ಖಾನ್, ಸೂರ್ಯಾಂಶ್, ಕ್ಸೇವಿಯರ್ ಬಾರ್ಟ್ಲೆಟ್, ಪೈಲಾ ಅವಿನಾಶ್, ಪ್ರವೀಣ್ ದುಬೆ.












Click it and Unblock the Notifications