Shreyanka Patil: ಗಾಯಗೊಂಡಿದ್ದರೂ ಛಲ ಬಿಡದೆ ಆಡಿದ್ದ ಶ್ರೇಯಾಂಕಾ ಪಾಟೀಲ್

ಶ್ರೇಯಾಂಕಾ ಪಾಟೀಲ್ ಸದ್ಯ ಸಖತ್ ಟ್ರೆಂಡಿಂಗ್‌ನಲ್ಲಿರುವ ಹೆಸರು. ಆರ್​ಸಿಬಿ ತಂಡದ ಚಿನಕುರುಳಿ ಪಟಾಕಿ ಫೈನಲ್‌ನಲ್ಲಿ 4 ವಿಕೆಟ್ ಪಡೆದುಕೊಂಡು ಕಪ್ ಗೆಲ್ಲಲು ಪ್ರಮುಖ ಕೊಡುಗೆ ನೀಡಿದರು. ಮಹಿಳಾ ಪ್ರೀಮಿಯರ್ ಲೀಗ್ ಆರಂಭದ ಆವೃತ್ತಿಗೆ ಮುನ್ನ ನಡೆದ ಹರಾಜಿನಲ್ಲಿ 10 ಲಕ್ಷ ರೂಪಾಯಿಗೆ ಆರ್​ಸಿಬಿ ಪಾಲಾಗಿದ್ದ ಹುಡುಗಿ ಬೆಲೆ ಕಟ್ಟಲಾಗದ ಪ್ರದರ್ಶನ ನೀಡಿದ್ದಾರೆ.

ಈ ಬಾರಿ ಮಹಿಳಾ ಪ್ರೀಮಿಯರ್ ಆರಂಭವಾದಾಗ ಮೊದಲ ಎರಡು ಪಂದ್ಯಗಳಲ್ಲಿ ಅವರಿಂದ ಹೇಳಿಕೊಳ್ಳುವ ಉತ್ತಮ ಪ್ರದರ್ಶನ ಬಂದಿರಲಿಲ್ಲ. ಮೊದಲ ಪಂದ್ಯದಲ್ಲೇ ಯುಪಿ ವಾರಿಯರ್ಸ್ ವಿರುದ್ಧ 3 ಓವರ್ ಗಳಲ್ಲಿ ವಿಕೆಟ್ ಪಡೆಯದೆ 32 ರನ್ ಬಿಟ್ಟುಕೊಟ್ಟಿದ್ದರು.

Shreyanka Patil Playing with Finger Injury Helps RCB Lift First-Ever Trophy in WPL

ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಒಂದು ಓವರ್ ಬೌಲಿಂಗ್ ಮಾಡಿ 13 ರನ್ ಬಿಟ್ಟುಕೊಟ್ಟಿದ್ದರು. ಅದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 3 ಓವರ್ ಗಳಲ್ಲಿ 40 ರನ್ ಬಿಟ್ಟುಕೊಟ್ಟ ಶ್ರೇಯಾಂಕಾ 1 ವಿಕೆಟ್ ಪಡೆದರು. ಬಳಿಕ ಮುಂಬೈ ಇಂಡಿಯನ್ಸ್ ವಿರುದ್ದ 2 ಓವರ್ ಗಳಲ್ಲಿ 15 ರನ್ ನೀಡಿ 1 ವಿಕೆಟ್ ಪಡೆದುಕೊಂಡಿದ್ದರು. ಅಂದರೆ ಮೊದಲ ನಾಲ್ಕು ಪಂದ್ಯಗಳಿಂದ ಕೇವಲ ಎರಡು ವಿಕೆಟ್ ಪಡೆದಿದ್ದರು.

ಗಾಯಗೊಂಡ ಶ್ರೇಯಾಂಕ ಪಾಟೀಲ್

ಬೆಂಗಳೂರಿನಲ್ಲಿ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಕೈಬೆರಳಿಗೆ ಗಾಯ ಮಾಡಿಕೊಂಡ ಶ್ರೇಯಾಂಕಾ ಪಾಟೀಲ್ ಪಂದ್ಯದಿಂದ ಹೊರಗುಳಿದರು. ದೆಹಲಿಯಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ ಆಡಲಿಲ್ಲ.

ದೆಹಲಿಯಲ್ಲಿ ಕನ್ನಡತಿಯ ಅಬ್ಬರ

ಅದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರೂ ಕಣಕ್ಕಿಳಿದ ಶ್ರೇಯಾಂಕಾ ಪಾಟೀಲ್ 4 ಓವರ್ ಗಳಲ್ಲಿ 26 ರನ್ ನೀಡಿ 4 ವಿಕೆಟ್ ಪಡೆದರು. ದುರದೃಷ್ಟವಶಾತ್ ಅಂದಿನ ಪಂದ್ಯದಲ್ಲಿ ಆರ್ ಸಿಬಿ ಒಂದು ರನ್‌ಗಳ ರೋಚಕ ಸೋಲು ಕಂಡಿತ್ತು, ಮೈದಾನದಲ್ಲೇ ರಿಚಾ ಘೋಷ್ ಮತ್ತು ಶ್ರೇಯಾಂಕಾ ಕಣ್ಣೀರಾಕಿದ್ದರು.

ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಎಲ್ಲಿಸ್ ಪೆರ್ರಿ 6 ವಿಕೆಟ್ ಪಡೆದರೆ, ಶ್ರೇಯಾಂಕ 1 ಓವರ್ ಬೌಲ್ ಮಾಡಿ ಕೇವಲ ಮೂರು ರನ್ ನೀಡಿ 1 ವಿಕೆಟ್ ಪಡೆದುಕೊಂಡಿದ್ದು. ಆ ಪಂದ್ಯದಲ್ಲಿ ಗೆದ್ದ ಆರ್ ಸಿಬಿ ಎಲಿಮಿನೇಟರ್ ಹಂತಕ್ಕೆ ಅರ್ಹತೆ ಪಡೆದುಕೊಂಡಿತು.

ಎಲಿಮಿನೇಟರ್ ಪಂದ್ಯದಲ್ಲಿ ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಕೇವಲ 135 ರನ್‌ಗಳನ್ನು ಕಲೆಹಾಕಿತು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲುವ ಸೂಚನೆ ಕೊಟ್ಟಿತ್ತು. ಆದರೆ 18 ಓವರ್ ನಲ್ಲಿ ದಾಳಿಗಿಳಿದ ಶ್ರೇಯಾಂಕ 4 ರನ್ ಬಿಟ್ಟುಕೊಟ್ಟು ಎಂಐ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ವಿಕೆಟ್ ಪಡೆದರು. ಅಲ್ಲಿಂದ ಆರ್ ಸಿಬಿ 5 ರನ್‌ಗಳ ರೋಚಕ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿತು.

ಪರ್ಪಲ್ ಕ್ಯಾಪ್‌ ಗೆದ್ದ ಶ್ರೇಯಾಂಕಾ

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪವರ್ ಪ್ಲೇನಲ್ಲಿ ಅಬ್ಬರಿಸಿದರು. ಬೃಹತ್ ಮೊತ್ತದ ಮುನ್ಸೂಚನೆ ನೀಡಿದ್ದ ಡೆಲ್ಲಿಗೆ ಸೋಫಿ ಮೊಲಿನ್ಯೂ ಆಘಾತ ನೀಡಿದರು. ಒಂದೇ ಓವರ್ ನಲ್ಲಿ 3 ವಿಕೆಟ್ ಪಡೆದರು. ಬಳಿಕ ದಾಳಿಗಿಳಿದ ಶ್ರೇಯಾಂಕ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್‌ ಲ್ಯಾನಿಂಗ್ ವಿಕೆಟ್ ಪಡೆದರು. ಫೈನಲ್ ಪಂದ್ಯದಲ್ಲಿ 3.3 ಓವರ್ ಗಳಲ್ಲಿ ಕೇವಲ 12 ರನ್ ನೀಡಿ 4 ವಿಕೆಟ್ ಪಡೆದರು. 8 ಪಂದ್ಯಗಳಲ್ಲಿ 13 ವಿಕೆಟ್ ಪಡೆದ ಶ್ರೇಯಾಂಕ ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲೇ ಅತಿ ಹೆಚ್ಚು ವಿಕೆಟ್ ಪಡೆದು, ಪರ್ಪಲ್ ಕ್ಯಾಪ್ ಗೆದ್ದುಕೊಂಡರು.

ಪಂದ್ಯಾವಳಿಯ ಎಮರ್ಜಿಂಗ್ ಪ್ಲೇಯರ್ ಎನ್ನುವ ಪ್ರಶಸ್ತಿ ಕೂಡ ಅವರದ್ದಾಯಿತು. ಅವರ ಕೈ ಬೆರಳು ಗಾಯಗೊಂಡಿದ್ದರೂ, ಲೆಕ್ಕಿಸದೇ ಆಡಿದ್ದಲ್ಲದೆ ಕಪ್ ಗೆಲ್ಲುವಲ್ಲಿ ಮಹತ್ವದ ಕೊಡುಗೆ ನೀಡಿದರು. ಶ್ರೇಯಾಂಕಾ ಅವರ ಪ್ರದರ್ಶನಕ್ಕೆ ಕ್ರಿಕೆಟಿಗರು, ಅಭಿಮಾನಿಗಳು ಮನಸೋತಿದ್ದು, ಭಾರತ ತಂಡದ ಭವಿಷ್ಯದ ಸೂಪರ್ ಸ್ಟಾರ್ ಎಂದು ಭವಿಷ್ಯ ನುಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+