ಏನ್ ಅದೃಷ್ಟ ಗುರು.. ಒಂದೇ ಎಸೆತದಲ್ಲಿ ಎರಡು ಬಾರಿ ಔಟ್ ಆದರೂ, ನಾಟೌಟ್: ಸಖತ್ ವೈರಲ್ ವಿಡಿಯೋ!
ಯಾವುದೇ ಆಟದಲ್ಲಿ ಅದೃಷ್ಟ ಅನ್ನುವುದು ಆಟಗಾರನ ಜೊತೆಗೆ ಇದ್ದಲ್ಲಿ, ಅವನು ಎಷ್ಟೇ ಕೆಟ್ಟದ್ದಾಗಿ ಆಡಿದರೂ ಉತ್ತಮ ಫಲಿತಾಶಂವನ್ನು ಪಡೆಯುತ್ತಾನೆ. ಇದಕ್ಕೆ ಬೆಸ್ಟ್ ಎಕ್ಸಾಮ್‌ಪಲ್ ಈ ವಿಡಿಯೋ. ಈ ವಿಡಿಯೋವನ್ನು ಮೊದಲ ನೋಡಿದರೆ, ಬ್ಯಾಟ್ಸ್‌ಮನ್ ಮಾಡಿದ ತಪ್ಪು ಕಾಣುತ್ತದೆ. ಆ ಮೇಲೆ ಈ ವಿಡಿಯೋ ಸಖತ್ ಮಜವಾಗಿದೆ.
ಸದ್ಯ ವಿಶ್ವದಲ್ಲಿ ಟಿ20 ಕ್ರಿಕೆಟ್ ಹವಾ ಜೋರಾಗಿದೆ. ವೆಸ್ಟ್ ಇಂಡೀಸ್, ಅಮೆರಿಕದಲ್ಲಿ ಟಿ20 ವಿಶ್ವಕಪ್ ಆಯೋಜಿಸಲಾಗುತ್ತಿದೆ. ಇನ್ನೊಂದೆಡೆ ಇಂಗ್ಲೆಂಡ್‌ನಲ್ಲಿ ಜೂನ್‌ನಲ್ಲಿ ಯಾರ್ಕ್‌ಷೈರ್ ಮತ್ತು ಲಂಕಾಶೈರ್ ನಡುವೆ ನಡೆದ ಪಂದ್ಯದ ಟಿ20 ಬ್ಲಾಸ್ಟ್ ಪಂದ್ಯಗಳು ನಡೆಯುತ್ತಿವೆ. ಈ ಪಂದ್ಯದಲ್ಲಿ, ಯಾರ್ಕ್‌ಷೈರ್ ತಂಡದ ಪರ ಆಡುತ್ತಿರುವ ಪಾಕಿಸ್ತಾನಿ ಟೆಸ್ಟ್ ತಂಡದ ನಾಯಕ ಶಾನ್ ಮಸೂದ್ ಎಲ್ಲರ ಚಿತ್ತ ಕದ್ದ ಪ್ಲೇಯರ್.

ಆಗಿದ್ದು ಏನು?
ಅಸಲಿಗೆ ಶಾನ್ ಮಸೂದ್, ಒಂದು ಬಾಲ್‌ನಲ್ಲಿ ಮೊದಲು ಹಿಟ್-ವಿಕೇಟ್ ಆಗಿದ್ದರು. ಚೆಂಡು ಲೆಗ್ ಸೈಡ್‌ಗೆ ಹೋಗುತ್ತಿದ್ದಂತೆ ಓಡಲು ಮುಂದಾಗಿ, ಇದೇ ಎಸೆತದಲ್ಲಿ ರನೌಟ್ ಸಹ ಆದರು. ಆದರೆ ಅವರು ಪೆವಿಲಿಯನ್‌ಗೆ ಮರಳಲಿಲ್ಲ. ಇದರ ಹಿಂದಿನ ಪ್ರಮುಖ ಕಾರಣ. ಕ್ರಿಕೆಟ್ ನಿಯಮ 31.7 ಅವರನ್ನು ಮೈದಾನದಲ್ಲಿ ಉಳಿಸಿತು.
Shan Masood steps on his stumps off a no ball, Lancashire take the bails off at the other end - but Masood remained not out under law 31.7 pic.twitter.com/yQG6gP6Rac
— Vitality Blast (@VitalityBlast) June 20, 2024
ಯಾರ್ಕ್‌ಷೈರ್ ಮತ್ತು ಲಂಕಾಶೈರ್ ನಡುವೆ ನಡೆದ ಟಿ20 ಬ್ಲಾಸ್ಟ್ ಪಂದ್ಯದಲ್ಲಿ ಶಾನ್ ಮಸೂದ್ ಅಬ್ಬರಿಸಿದರು. ಇವರು ಈ ಪಂದ್ಯದಲ್ಲಿ 41 ಎಸೆತಗಳಲ್ಲಿ 61 ರನ್‌ಗಳ ಬಾರಿಸಿದರು. ಏತನ್ಮಧ್ಯೆ, ಮಸೂದ್ ತನ್ನ ಇನ್ನಿಂಗ್ಸ್‌ನ 36 ಎಸೆತವನ್ನು ಎದುರಿಸಿದಾಗ 58 ರನ್ ಗಳಿಸಿ ಮುನ್ನಗುತ್ತಿದ್ದರು. ಆಗ ಮಸೂದ್ ಲಂಕಾಶೈರ್ ವೇಗದ ಬೌಲರ್ ಜಾಕ್ ಬ್ಲಾಥರ್‌ವಿಕ್ ಅವರ ಬಾಲ್‌ನಲ್ಲಿ ಸ್ಕೂಪ್ ಶಾಟ್ ಬಾರಿಸಿದರು.
ವಿಕೆಟ್‌ಗಳ ಸಮೀಪ ನಿಂತು ಶಾಟ್ ಪ್ರಯೋಗಿಸಿದ್ದರಿಂದ ಇವರ ಕಾಲು ವಿಕೆಟ್‌ಗಳನ್ನು ಪಡೆದರು ಮತ್ತು ಅದೇ ಸಮಯದಲ್ಲಿ ಫೀಲ್ಡ್ ಅಂಪೈರ್ ಕೂಡ ಈ ಚೆಂಡನ್ನು ನೋ-ಬಾಲ್ ಎಂದು ಘೋಷಿಸಿದರು. ಅಂಪೈರ್ ನೀಡಿದ ನಿರ್ಧಾರವನ್ನು ನೋಡದ ಮಸೂದ್, ಸ್ವತಃ ಔಟ್ ಎಂದು ಪರಿಗಣಿಸಿ ಕ್ರೀಸ್ ತೊರೆದರು. ಆದರೆ ಅಷ್ಟರಲ್ಲಿ ಇನ್ನೊಂದು ತುದಿಯಲ್ಲಿ ನಿಂತಿದ್ದ ಬ್ಯಾಟ್ಸ್‌ಮನ್ ರನ್ ಕದಿಯುವ ಪ್ರಯತ್ನದಲ್ಲಿ ಸ್ಟ್ರೈಕ್ ಎಂಡ್ ತಲುಪಿದರು. ಅಷ್ಟರಲ್ಲಿ ಕ್ರೀಸ್‌ನಿಂದ ಹೊರಗುಳಿದ ಶಾನ್ ಮಸೂದ್ ಅವರನ್ನು ಬೌಲರ್ ರನೌಟ್ ಮಾಡಿದರು.
ನಟೌಟ್ ಏಕೆ?
ಶಾನ್ ಮಸೂದ್ ನೋ ಬಾಲ್ ಎಂಬ ಕಾರಣಕ್ಕೆ ಹಿಟ್ ವಿಕೆಟ್ ಆಗದಿದ್ದರೂ ನಿಯಮದ ಪ್ರಕಾರ ನೋ ಬಾಲ್ ನಲ್ಲಿ ಬ್ಯಾಟ್ಸ್ ಮನ್ ರನ್ ಔಟ್ ಆಗಬಹುದು. ಆದರೂ ಶಾನ್ ಮಸೂದ್ ಸಿಕ್ಕ ಕಾರಣ ಪೆವಿಲಿಯನ್ ಗೆ ಮರಳಲಿಲ್ಲ. MCC ಕಾನೂನುಗಳ 31.7 ರ ಅಡಿಯಲ್ಲಿ ಆಟಗಾರರನ್ನು ಉಳಿಸಲಾಗಿದೆ. ಇದಲ್ಲದೆ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಈ ಟಿ20 ಲೀಗ್‌ನ ನಿಯಮಗಳ ಪ್ರಕಾರ, ಬ್ಯಾಟ್ಸ್‌ಮನ್‌ನ ಹೆಲ್ಮೆಟ್ ಅಥವಾ ತಲೆಗೆ ಚೆಂಡು ಬಡಿದರೆ, ಆ ಚೆಂಡನ್ನು ಡೆಡ್ ಬೌಲ್ ಎಂದು ಘೋಷಿಸಲಾಗುತ್ತದೆ.
ಎಂಸಿಸಿ ನಿಯಮ 31.7 ದಂತೆ ಒಂದೇ ಎಸೆತದಲ್ಲಿ ಎರಡು ಬಾರಿ ಔಟಾದರೂ ಶಾನ್ ಮಸೂದ್ ಪೆವಿಲಿಯನ್‌ಗೆ ಮರಳಲಿಲ್ಲ ಏಕೆಂದರೆ ಬ್ಯಾಟ್ಸ್‌ಮನ್ ಔಟಾಗಿದ್ದೇನೆ ಎಂದು ಭಾವಿಸಿ ಪೆವಿಲಿಯನ್ ಕಡೆಗೆ ಹೋದರೆ, ಅಂತಹ ಪರಿಸ್ಥಿತಿಯಲ್ಲಿ ಅವನು ರನ್ ಔಟ್ ನೀಡಲಾಗುವುದಿಲ್ಲ. ನೋಬಾಲ್ ಕಾರಣ ಮಸೂದ್ ರನ್ ಔಟ್ ಆಗಲಿಲ್ಲ. ನಂತರ ಅಂಪೈರ್‌ಗಳು ಈ ಬಾಲ್ ಡೆಡ್ ಎಂದು ಘೋಷಿಸಿದರು.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್












Click it and Unblock the Notifications