ಇವರೇ ರಾಹುಲ್ ದ್ರಾವಿಡ್ ಸ್ಥಾನ ತುಂಬ ಬಲ್ಲ ಆಟಗಾರ ಎಂದ ಕೈಫ್
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಆರಂಭವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕರು ಭರ್ಜರಿ ಬುನಾದಿಯನ್ಜು ತಂಡಕ್ಕೆ ಹಾಕಿಕೊಟ್ಟಿದ್ದಾರೆ. ಆದರೆ ಚ್ಚೊಚ್ಚಲ ಪಂದ್ಯವನ್ನು ಅಡುವ ಅವಕಾಶವನ್ನು ಪಡೆದ ತಮಿಳುನಾಡಿನ ಬಿ ಸಾಯಿ ಸುದರ್ಶನ್ ನಿರಾಸೆ ಅನುಭವಿಸಿದ್ದಾರೆ.
ಐಪಿಎಲ್‌ನಲ್ಲಿ ರನ್‌ಗಳನ್ನು ಗುಡ್ಡೆ ಹಾಕಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಆಡಲು ಅವಕಾಶ ಪಡೆದ ಆಟಗಾರರಲ್ಲಿ ಸಾಯಿ ಸುದರ್ಶನ್ ಒಬ್ಬರು. ಇವರು ದೇಶೀಯ ಟೂರ್ನಿ ಹಾಗೂ ಐಪಿಎಲ್‌ನಲ್ಲಿ ರನ್ ಗುಡ್ಡೆ ಹಾಕಿದ್ದರು. ಇದರಿಂದ ಇವರಿಗೆ ಟೆಸ್ಟ್ ತಂಡದಲ್ಲಿ ಆಡಲು ಅವಕಾಶ ಸಿಕ್ಕಿತು. ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಇವರು ಆರಂಭದಲ್ಲಿ ವಿಫಲರಾದರು. ಆದರೆ ಇವರ ಕ್ಷಮತೆಯ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ದೊಡ್ಡ ಹೇಳಿಕೆ ನೀಡಿದ್ದಾರೆ.

ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಸಾಯಿ ಸುದರ್ಶನ್ ಅವರನ್ನು ಹಾಡಿ ಹೊಗಳಿದ್ದಾರೆ. ಸಾಯಿ ಸುದರ್ಶನ್ ಮುಂಬರುವ ದಿನಗಳಲ್ಲಿ ರಾಹುಲ್ ದ್ರಾವಿಡ್ ಸ್ಥಾನವನ್ನು ತುಂಬ ಬಲ್ಲ ಪ್ಲೇಯರ್ ಎಂದು ತಿಳಿಸಿದ್ದಾರೆ. ಸಾಯಿ ಸುದರ್ಶನ್ ಒಬ್ಬ ಉತ್ತಮ ಬ್ಯಾಟರ್. ಅವರ ಡಿಫೆನ್ಸ್ ಉತ್ತಮವಾಗಿದೆ. ಸಾಯಿ ಬ್ಯಾಟ್ ಮಾಡುವಾಗ ಕಡಿಮೆ ರಿಸ್ಕ್ ತೆಗೆದುಕೊಳ್ಳುತ್ತಾರೆ. ಐಪಿಎಲ್‌ನಂತಹ ಲೀಗ್‌ನಲ್ಲೂ ಸಾಯಿ ಗ್ರೌಂಡ್ ಶಾಟ್‌ಗಳನ್ನೇ ಹೆಚ್ಚಾಗಿ ಆಡಿ ಗಮನ ಸೆಳೆದಿದ್ದರು. ಅವರು ಭವಿಷ್ಯದಲ್ಲಿ ರಾಹುಲ್ ದ್ರಾವಿಡ್ ಅಥವಾ ಚೇತೇಶ್ವರ್ ಪೂಜಾರ ರೀತಿ ಆಗಬಹುದು ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.
ಕರುಣ್ ನಾಯರ್ ಬಗ್ಗೆ ಕೈಫ್ ಹೇಳಿದ್ದೇನು?
ಕರುಣ್ ನಾಯರ್ ದೇಶೀಯ ಟೂರ್ನಿಗಳಲ್ಲಿ ಸ್ಥಿರವಾಗಿ ರನ್ ಕಲೆ ಹಾಕಿದ್ದಾರೆ. ಇವರು ರಣಜಿ ಟೂರ್ನಿಗಳಲ್ಲಿ ದೊಡ್ಡ ಇನಿಂಗ್ಸ್ ಕಟ್ಟಿ ಸೈ ಎನಿಸಿಕೊಂಡಿದ್ದಾರೆ. ಇವರು ದಿನವಿಡೀ ಬ್ಯಾಟ್ ಮಾಡುವ ಕ್ಷಮತೆ ಹೊಂದಿದ್ದಾರೆ. ಇವರು ಸಹ ಗ್ರೌಂಡ್ ಶಾಟ್‌ಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ ಎಂದು ಮೊಹಮ್ಮದ್ ಕೈಫ್ ತಿಳಿಸಿದ್ದಾರೆ. ಕರುಣ್ ನಾಯರ್ 8 ವರ್ಷದ ಬಳಿಕ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡಿದ್ದಾರೆ.
ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಪರ ಮೂರನೇ ಕ್ರಮಾಂಕದಲ್ಲಿ ದಶಕಗಳ ಕಾಲ ಆಡಿದ ಆಟಗಾರ. ಸ್ಟಾರ್ ಬೌಲರ್‌ಗಳನ್ನು ಸಹ ಬೆನ್ನಟ್ಟಿ ಕಾಡುತ್ತಿದ್ದ ಪ್ಲೇಯರ್‌ಗಳಲ್ಲಿ ಇವರಿಗೂ ಸ್ಥಾನ. ಇವರ ಸ್ಥಿರ ಆಟದ ಫಲಿತಾಂಶವೇ ಭಾರತ 2007ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದು ಇತಿಹಾಸವನ್ನು ನಿರ್ಮಿಸಿತ್ತು. ವಿದೇಶಿ ಪಿಚ್‌ಗಳಲ್ಲೂ ರಾಹುಲ್ ದ್ರಾವಿಡ್ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ, ವೇಗದ ಬೌಲರ್‌ಗಳನ್ನು ಕಾಡುತ್ತಿದ್ದರು. ಹೀಗಾಗಿಯೇ ಇವರಿಗೆ ಅಭಿಮಾನಿಗಳು ದಿ ವಾಲ್ ಎಂದು ಕರೆಯಲು ಆರಂಭಿಸಿದರು. ಇವರ ಬಳಿಕ ಈ ಸ್ಥಾನವನ್ನು ಚೇತೇಶ್ವರ್ ಪೂಜಾರ್ ತುಂಬಿದ್ದರು.












Click it and Unblock the Notifications