World Cup: ಕ್ರಿಕೆಟ್ ದೇವರ ಆಶೀರ್ವಾದ, 125 ಕೋಟಿ ರೂಪಾಯಿ ಬಹುಮಾನ ಗ್ಯಾರಂಟಿ...
ಭಾರತೀಯ ಕ್ರಿಕೆಟ್ ಮಹಿಳಾ ತಂಡದ ಆಟಗಾರರು ಇಂದು ಹೊಸ ಇತಿಹಾಸ ನಿರ್ಮಾಣ ಮಾಡಲು ಮುಂದೆ ನುಗ್ಗಿದ್ದಾರೆ. 150 ಕೋಟಿ ಭಾರತೀಯರ ಆಶೀರ್ವಾದ & ಬೆಂಬಲದ ಮೂಲಕ ಮಹಿಳಾ ತಂಡ ಭಾರತಕ್ಕಾಗಿ ಏಕದಿನ ವಿಶ್ವಕಪ್ ಗೆಲ್ಲಲು ಅಬ್ಬರಿಸುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಮ್ಯಾಚ್ ಆಡುತ್ತಿರುವ ಭಾರತ ತಂಡ, ಆರಂಭದಲ್ಲೇ ಅಬ್ಬರಿಸಲು ಶುರು ಮಾಡಿದೆ. ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಟೀಂ ನಾಯಕಿ ಆರ್ಭಟಕ್ಕೆ ದಕ್ಷಿಣ ಆಫ್ರಿಕಾ ಬೆಚ್ಚಿಬಿದ್ದಿದೆ. ಇಂತಹ ಸಮಯದಲ್ಲೇ, ಕ್ರಿಕೆಟ್ ದೇವರ ಆಶೀರ್ವಾದ, 125 ಕೋಟಿ ರೂಪಾಯಿ ಬಹುಮಾನ ಗ್ಯಾರಂಟಿ...
ಹೌದು, ಕ್ರಿಕೆಟ್ ದೇವರು ಅಂತಾನೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರು ಭಾರತೀಯ ಮಹಿಳಾ ತಂಡಕ್ಕೆ ಬೆನ್ನುತಟ್ಟಿ ಸ್ಪೂರ್ತಿ ತುಂಬಲು ಬಂದಿದ್ದರು. 2025 ಮಹಿಳಾ ವಿಶ್ವಕಪ್ ಫೈನಲ್ ಮ್ಯಾಚ್ ನೋಡಲು ಬಂದಿದ್ದ ಸಚಿನ್ ತೆಂಡೂಲ್ಕರ್ ಅವರು, ಧೈರ್ಯ ತುಂಬಿದ್ದರು. ಅಲ್ಲದೇ ಹೀಗೆ ಸಚಿನ್ ತೆಂಡೂಲ್ಕರ್ ಅವರ ಸರ್ಪ್ರೈಸ್ ಎಂಟ್ರಿ ಕಂಡು ಕೋಟಿ ಕೋಟಿ ಅಭಿಮಾನಿಗಳಿಗೂ ಖುಷಿ ಆಗಿತ್ತು. ಪಂದ್ಯ ಆರಂಭ ಆಗುವ ಮೊದಲೇ ಎಂಟ್ರಿ ಕೊಟ್ಟಿದ್ದ ಕ್ರಿಕೆಟ್ ಲೋಕದ ದೇವರು ಸಚಿನ್ ತೆಂಡೂಲ್ಕರ್, ಪಂದ್ಯಕ್ಕೆ ಮೊದಲು ಶುಭ ಕೋರಿದರು. ಈ ಮೂಲಕ ಭಾರತೀಯ ಮಹಿಳಾ ತಂಡದ ಆತ್ಮವಿಶ್ವಾಸ ಡಬಲ್ ಆಗಿತ್ತು.

ಮಳೆ ಕಾಟದ ನಡುವೆ ಮ್ಯಾಚ್ ಶುರು!
ನಮ್ಮ ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್ ಅಖಾಡದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ನೀಡಿದ್ದ ಭರ್ಜರಿ 339 ರನ್‌ಗಳ ಗುರಿಯನ್ನ ಸುಲಭವಾಗಿ ಬೆನ್ನುಹತ್ತಿ ಗೆದ್ದು ಬೀಗಿತ್ತು. ಈ ಮೂಲಕವೇ ಹೊಸ ಇತಿಹಾಸ ಕೂಡ ನಿರ್ಮಾಣ ಮಾಡಿತ್ತು. ಆದ್ರೆ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಮ್ಯಾಚ್ ಆಡಲು ಇಂಡಿಯನ್ ವುಮೆನ್ಸ್ ಕ್ರಿಕೆಟ್ ಟೀಂ ಸಜ್ಜಾಗಿತ್ತು. ಆದರೆ ಇಂತಹ ಸಮಯದಲ್ಲೇ 2025 ಮಹಿಳೆಯರ ಕ್ರಿಕೆಟ್ ವರ್ಲ್ಡ್ ಕಪ್ ಫೈನಲ್ ಪಂದ್ಯಕ್ಕೆ ಮಳೆ ಕಾಟ ಎದುರಾಗಿತ್ತು. ಆದರೆ ಅಂತಿಮವಾಗಿ ಮಳೆ ಬ್ರೇಕ್ ಕೊಟ್ಟ ಕಾರಣಕ್ಕೆ ಮ್ಯಾಚ್ ಶುರುವಾಗಿತ್ತು. ಕ್ರಿಕೆಟ್ ದೇವರು ಸಚಿನ್ ಬಂದ ಕಾರಣಕ್ಕೆ ಈ ರೀತಿ ಮಳೆ ನಿಂತಿದೆ ಅನ್ನೋ ಮಾತನ್ನೂ ಅಭಿಮಾನಿಗಳು ಹೇಳಿದರು...
ಆರ್‌ಸಿಬಿ ನಾಯಕಿ ಅಬ್ಬರದ ಬ್ಯಾಟಿಂಗ್!
ಅಂದಹಾಗೆ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರ ಬ್ಯಾಟಿಂಗ್ ಅಬ್ಬರಕ್ಕೆ ಇದೀಗ ದಾಖಲೆಗಳೂ ಧೂಳ್ ಧೂಳ್ ಆಗಿ ಹೋಗಿವೆ. ಅದರಲ್ಲೂ 45 ರನ್ ಬಾರಿಸಿ 8 ಬೌಂಡರಿ ಚಚ್ಚಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರು ಭರ್ಜರಿಯಾಗಿ ಆರಂಭವೇ ಶತಕದ ಜೊತೆಯಾಟ ಆಡಿ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ಮೂಲಕ ಅಂತಿಮವಾಗಿ ಟೀಂ ಇಂಡಿಯಾ 298 ರನ್ ಗಳಿಸಿ ಸವಾಲಿನ ಮೊತ್ತವನ್ನೇ ದಕ್ಷಿಣ ಆಫ್ರಿಕಾಗೆ ನೀಡಿತ್ತು. ಮಳೆ ನಡುವೆ ಇನ್ನೇನು ಮ್ಯಾಚ್ ನಿಂತು ಹೋಗುತ್ತದೆ ಎನ್ನುವಾಗ ಇದು ಅಭಿಮಾನಿಗಳಿಗೆ ನೆಮ್ಮದಿ ನೀಡಿತ್ತು. ಹಾಗೇ ಈ ಪಂದ್ಯ ಗೆದ್ದು ವಿಶ್ವಕಪ್ ಟ್ರೋಫಿ ತಂದರೆ ಭಾರತೀಯ ಮಹಿಳಾ ತಂಡಕ್ಕೆ ಸುಮಾರು 125 ಕೋಟಿ ರೂಪಾಯಿ ಬಹುಮಾನ ಸಿಗಲಿದೆ ಎನ್ನಲಾಗಿದೆ.












Click it and Unblock the Notifications