Ind vs Eng: ಆಂಗ್ಲರ ವಿರುದ್ಧ ಸರಣಿ ಗೆದ್ದ ಭಾರತ; ಸಚಿನ್, ಕೊಹ್ಲಿ ಹೇಳಿದ್ದೇನು?
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ 3-1 ಅಂತರದಲ್ಲಿ ಸರಣಿಯನ್ನು ಗೆದ್ದಿದೆ.
ರಾಂಚಿಯಲ್ಲಿ ನಡೆದ ಟೆಸ್ಟ್ ಪಂದ್ಯ ನಾಲ್ಕನೇ ದಿನ ಮುಕ್ತಾಯವಾಗಿದೆ. ಇಂಗ್ಲೆಂಡ್ ನೀಡಿದ 192 ರನ್‌ಗಳ ಗುರಿಯನ್ನು 5 ವಿಕೆಟ್ ಕಳೆದುಕೊಂಡು ಬೆನ್ನಟ್ಟಿದ ಭಾರತ ಗೆದ್ದು ಬೀಗಿತು. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಪಡೆಯ ಜೊತೆ ರೋಹಿತ್ ಶರ್ಮಾ ಬಲಿಷ್ಠ ಇಂಗ್ಲೆಂಡ್ ಪಡೆಯನ್ನು ಮಣಿಸಿದೆ.

ಶುಭಮನ್ ಗಿಲ್ ಮತ್ತು ಧ್ರುವ್ ಜುರೆಲ್ ತಾಳ್ಮೆಯ ಬ್ಯಾಟಿಂಗ್ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದ್ದ ಜುರೆಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 39 ರನ್ ಗಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅತ್ಯುತ್ತಮ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.
The score is 3-won! 😉
— Sachin Tendulkar (@sachin_rt) February 26, 2024
India once again came back from a pressure situation and fought back to win the match. It shows the character and the mental strength of our players.
A great first spell in Test cricket for Akashdeep. @dhruvjurel21 was terrific at reading the length in… pic.twitter.com/DgaFoqMiTa
ಭಾರತ ತಂಡಕ್ಕೆ ಸಚಿನ್ ಮೆಚ್ಚುಗೆ
ಭಾರತ ಸರಣಿ ಗೆಲ್ಲುತ್ತಿದ್ದಂತೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದು, ಭಾರತ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಭಾರತ ಮತ್ತೊಮ್ಮೆ ಒತ್ತಡದ ಪರಿಸ್ಥಿತಿಯಿಂದ ಮರಳಿತು ಮತ್ತು ಪಂದ್ಯವನ್ನು ಗೆಲ್ಲಲು ಮತ್ತೆ ಹೋರಾಡಿತು. ಇದು ನಮ್ಮ ಆಟಗಾರರ ಗುಣ ಮತ್ತು ಮಾನಸಿಕ ಶಕ್ತಿಯನ್ನು ತೋರಿಸುತ್ತದೆ" ಎಂದು ಸಚಿನ್ ತೆಂಡೂಲ್ಕರ್ ಟ್ವಿಟರ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಈ ಸರಣಿಯಲ್ಲಿ ನಾಲ್ವರು ಆಟಗಾರರು ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು, ಆದರೂ ಎಲ್ಲರೂ ಉತ್ತಮ ಪ್ರದರ್ಶನ ನೀಡಿದರು. ವೇಗದ ಬೌಲರ್ ಆಕಾಶ್ ದೀಪ್ ಅದ್ಭುತ ಬೌಲಿಂಗ್ ಮಾಡಿದರು ಮತ್ತು ಧ್ರುವ್ ಜುರೆಲ್ ಅವರು ತಮ್ಮ ಎರಡನೇ ಟೆಸ್ಟ್ ಪಂದ್ಯವನ್ನಷ್ಟೇ ಆಡುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
"ಆಕಾಶ್ ದೀಪ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಮೊದಲ ಸ್ಪೆಲ್. ಧ್ರುವ್ ಜುರೆಲ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಅದ್ಭುತವಾಗಿದ್ದರು ಮತ್ತು ಅವರ ಫುಟ್‌ವರ್ಕ್ ನಿಖರವಾಗಿತ್ತು. ಕುಲದೀಪ್ ಯಾದವ್ ಜೊತೆಗಿನ ಅವರ ಜೊತೆಯಾಟವು 1 ನೇ ಇನ್ನಿಂಗ್ಸ್‌ನಲ್ಲಿ ನಮ್ಮನ್ನು ಆಟದಲ್ಲಿ ಉಳಿಸಿಕೊಂಡಿತು ಮತ್ತು 2 ನೇ ಇನ್ನಿಂಗ್ಸ್‌ನಲ್ಲಿ ಅವರ ನಾಕ್ ನಮಗೆ ಗೆಲುವಿನತ್ತ ಸಾಗಲು ಸಹಾಯ ಮಾಡಿತು. 2ನೇ ಇನಿಂಗ್ಸ್‌ನಲ್ಲಿ ಕುಲ್‌ದೀಪ್ ಅವರ ಸ್ಪೆಲ್ ಬಹುಮುಖ್ಯವಾಗಿತ್ತು" ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
"ಅಶ್ವಿನ್, ಜಡೇಜಾ ಮತ್ತು ರೋಹಿತ್ ಅವರಂತಹ ಹಿರಿಯರು ತಮ್ಮ ಕೆಲಸವನ್ನು ಮಾಡಿದ್ದಾರೆ. ಚೇಸಿಂಗ್‌ನಲ್ಲಿ ತಮ್ಮ ಪ್ರವೃತ್ತಿಯನ್ನು ನಿಗ್ರಹಿಸುವಲ್ಲಿ ಶುಭಮನ್ ಉತ್ತಮ ಮನೋಧರ್ಮವನ್ನು ತೋರಿಸಿದರು ಮತ್ತು ಪ್ರಮುಖ 50 ರನ್ ಗಳಿಸಿದರು. ಪಂದ್ಯ ಮತ್ತು ಸರಣಿಯು ನಮ್ಮದಾಗಿದೆ ಎಂದು ತುಂಬಾ ಸಂತೋಷವಾಗಿದೆ," ಸಚಿನ್ ತೆಂಡೂಲ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ.
YES!!! 🇮🇳
— Virat Kohli (@imVkohli) February 26, 2024
Phenomenal series win by our young team. Showed grit, determination and resilience.@BCCI
ವಿರಾಟ್ ಕೊಹ್ಲಿ ಟ್ವೀಟ್
ವೈಯಕ್ತಿಕ ಕಾರಣಗಳಿಂದ ಸರಣಿಯಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಕೂಡ ಭಾರತ ತಂಡದ ಗೆಲುವಿನ ಬಳಿಕ ಟ್ವೀಟ್ ಮಾಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. "ಯೆಸ್! ಭಾರತದ ಯುವ ತಂಡದಿಂದ ಅದ್ಭುತವಾದ ಗೆಲುವು. ಧೈರ್ಯ ಮತ್ತು ದೃಢತೆಯನ್ನು ತೋರಿಸಿದರು." ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications