Get Updates
Get notified of breaking news, exclusive insights, and must-see stories!

Virat Kohli: ಕೊಹ್ಲಿ ಶತಕದ ಬಗ್ಗೆ ಸಚಿನ್, ಅನುಷ್ಕಾ ಹೇಳಿದ್ದೇನು? ಇನ್ನಿಂಗ್ಸ್ ಬಳಿಕ ಕೊಹ್ಲಿ ಏನಂದ್ರು?

ಭಾರತೀಯ ಕ್ರಿಕೆಟ್ ಅಭಿಮಾನಿಗಳ ಬಹಳ ದಿನದ ಕನಸು ಕೊನೆಗೂ ನನಸಾಗಿದೆ. ಕ್ರಿಕೆಟ್‌ ದೇವರ 49 ಶತಕಗಳ ದಾಖಲೆಯನ್ನು ಕಿಂಗ್ ಕೊಹ್ಲಿ ಸರಿಗಟ್ಟಿದ್ದಾರೆ. ಹೌದು, ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಅಂಗಳದಲ್ಲಿ ತಮ್ಮ ಹುಟ್ಟು ಹಬ್ಬದ ದಿನವೇ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿ ಮಿಂಚಿದರು.

ವಿರಾಟ್ ಕೊಹ್ಲಿ ಶತಕ ಗಳಿಸಿದ ನಂತರ ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಹಲವು ಮಾಜಿ ಕ್ರಿಕೆಟಿಗರು ಕೊಹ್ಲಿ ಸಾಧನೆಯನ್ನು ಹಾಡಿ ಹೊಗಳಿದ್ದಾರೆ, ಇನ್ನು ಸ್ವತಃ ಸಚಿನ್ ತೆಂಡೂಲ್ಕರ್ ಕೂಡ ವಿರಾಟ್ ಕೊಹ್ಲಿ ಶತಕ ಗಳಿಸಿದ ನಂತರ ಅಭಿನಂದನೆ ತಿಳಿಸಿದ್ದಾರೆ.

 Virat Kohli

50ನೇ ಶತಕ ಗಳಿಸಲು ಹಾರೈಕೆ

ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಿದರು. "ವಿರಾಟ್ ಚೆನ್ನಾಗಿ ಆಡಿದ್ದಾರೆ. ಈ ವರ್ಷದ ಆರಂಭದಲ್ಲಿ 49 ರಿಂದ 50 ಕ್ಕೆ ಹೋಗಲು ನನಗೆ 365 ದಿನಗಳು ಬೇಕಾಯಿತು. ನೀವು 49 ರಿಂದ 50 ಕ್ಕೆ ಹೋಗಿ ಮುಂದಿನ ಕೆಲವು ದಿನಗಳಲ್ಲಿ ನನ್ನ ದಾಖಲೆಯನ್ನು ಮುರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ. ಅಭಿನಂದನೆಗಳು!!" ಎಂದು ಹೇಳಿದ್ದಾರೆ.

ಸಚಿನ್ ಏಪ್ರಿಲ್ 24, 2023ರಂದು 50ನೇ ವರ್ಷಕ್ಕೆ ಕಾಲಿಟ್ಟಿದ್ದನ್ನು ಇಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಾಸ್ಯದ ಸಂದೇಶವನ್ನು ಕಳುಹಿಸಿದ್ದಾರೆ. 49 ರಿಂದ 50 ವರ್ಷ ತುಂಬಲು ತನಗೆ 365 ದಿನಗಳು ಬೇಕಾಯಿತು ಎಂದು ಅವರು ಹೇಳಿಕೊಂಡರು. ಕೊಹ್ಲಿ ಶೀಘ್ರದಲ್ಲೇ 50ನೇ ಶತಕ ಸಿಡಿಸಲಿ ಎಂದು ಹಾರೈಸಿದ್ದಾರೆ.

ಪತ್ನಿ ಅನುಷ್ಕಾರಿಂದ ಕೂಡ ಅಭಿನಂದನೆ

ಇನ್ನು ವಿರಾಟ್ ಕೊಹ್ಲಿ ಶತಕ ಗಳಿಸಿದ ನಂತರ ಪತ್ನಿ ಅನುಷ್ಕಾ ಶರ್ಮಾ ಕೂಡ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೊಹ್ಲಿ ಫೋಟೊ ಹಂಚಿಕೊಂಡಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. 'ನಿಮ್ಮ ಜನ್ಮದಿನದಂದು ನಿಮಗಾಗಿ ನಿಮ್ಮದೇ ಉಡುಗೊರೆ' ಎಂದು ಕೊಹ್ಲಿ ಶತಕವನ್ನು ಸಂಭ್ರಮಿಸಿದ್ದಾರೆ.

ಶತಕ ಸಿಡಿಸಿದ ಬಳಿಕ ಕೊಹ್ಲಿ ಹೇಳಿದ್ದೇನು?

ಇನ್ನು ಭಾರತದ ಇನ್ನಿಂಗ್ಸ್ ಮುಗಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, "ನನಗೆ ಆಡಲು ಅವಕಾಶ ನೀಡಿದ್ದಕ್ಕಾಗಿ ಮತ್ತು ತಂಡದ ಯಶಸ್ಸಿಗೆ ಕೊಡುಗೆ ನೀಡಿದ ದೇವರಿಗೆ ನಾನು ಆಭಾರಿಯಾಗಿದ್ದೇನೆ. ಈ ಮಹಾನ್ ಸ್ಥಳದಲ್ಲಿ ಈ ದೊಡ್ಡ ಗುಂಪಿನ ಮುಂದೆ ನನ್ನ ಜನ್ಮದಿನದಂದು ನೂರು ರನ್ ಗಳಿಸುವುದು ಅದ್ಭುತವಾಗಿದೆ. ಪಿಚ್ ನಿಧಾನವಾಗಿದೆ, ನಾವು ಗುಣಮಟ್ಟದ ಬೌಲಿಂಗ್ ಲೈನ್-ಅಪ್ ಅನ್ನು ಹೊಂದಿದ್ದೇವೆ, ನಾವು ಉತ್ತಮವಾಗಿ ಆಡಬೇಕಾಗಿವೆ, ವಿಕೆಟ್ ಪಡೆಯುವುದು ಪ್ರಮುಖವಾಗಿವೆ, ಜೋಡಿಯನ್ನು ಬೇಗ ಪಡೆಯುವುದು ಈ ಪಿಚ್‌ನ ವರ್ತನೆಯೊಂದಿಗೆ ಅವರನ್ನು ಒತ್ತಡಕ್ಕೆ ಒಳಪಡಿಸುತ್ತದೆ," ಎಂದು ವಿರಾಟ್ ಕೊಹ್ಲಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+