Get Updates
Get notified of breaking news, exclusive insights, and must-see stories!

SA Vs Ned: ವಿಶ್ವಕಪ್‌ನಲ್ಲಿ ಮತ್ತೊಂದು ಆಘಾತ! ದಕ್ಷಿಣ ಆಫ್ರಿಕಾ ಮಣಿಸಿದ ನೆದರ್ಲ್ಯಾಂಡ್ಸ್

ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಎರಡನೇ ದೊಡ್ಡ ಆಘಾತ ಸಿಕ್ಕಿದೆ. ಮೊದಲ ಎರಡು ಪಂದ್ಯಗಳಲ್ಲಿ ಬಲಿಷ್ಠ ತಂಡಗಳ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸಿದ್ದ ದಕ್ಷಿಣ ಆಫ್ರಿಕಾ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ಸೋತು ಮುಖಭಂಗ ಅನುಭವಿಸಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಕಾಡಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದೆ. ಇದೇ ಮೊದಲ ಬಾರಿಗೆ ನೆದರ್ಲ್ಯಾಂಡ್ಸ್ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಮಾದರಿಯಲ್ಲಿ ಗೆಲುವು ಸಾಧಿಸಿದೆ.

 Sa vs Ned: Netherlands Shocks South Africa in ODI World Cup 2023

ಈ ಮೊದಲು ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಕೂಡ ನೆದರ್ಲ್ಯಾಂಡ್ಸ್ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ತಪ್ಪಿಸಿತ್ತು.

ಭಾನುವಾರ ತಾನೆ ಅಫ್ಘಾನಿಸ್ತಾನ ತಂಡ ಹಾಲಿ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿತ್ತು, ಈಗ ನೆದರ್ಲ್ಯಾಂಡ್ಸ್ ದಕ್ಷಿಣ ಆಫ್ರಿಕಾವನ್ನು ಮಣಿಸಿ ಮತ್ತೊಂದು ಅಚ್ಚರಿ ನೀಡಿದ್ದಾರೆ.

ರೋಚಕ ಹೋರಾಟದಲ್ಲಿ ಗೆಲುವು

ಮಳೆಯಿಂದ ಪಂದ್ಯ ತಡವಾಗಿ ಆರಂಭವಾಯಿತು, 43 ಓವರ್ ಗಳಿಗೆ ಪಂದ್ಯವನ್ನು ಸೀಮಿತಗೊಳಿಸಲಾಗಿತ್ತು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಅದಕ್ಕೆ ತಕ್ಕಂತೆ ಆರಂಭದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡುವ ಮೂಲಕ ನೆದರ್ಲ್ಯಾಂಡ್ಸ್ ತಂಡವನ್ನು ಕಟ್ಟಿಹಾಕಿತು.

33.5 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿದ್ದ ನೆದರ್ಲ್ಯಾಂಡ್ಸ್ ಕಡಿಮೆ ಮೊತ್ತಕ್ಕೆ ಆಲೌಟ್ ಆಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ನಾಯಕ ಎಡ್ವರ್ಡ್ಸ್ 78 ರನ್, ವ್ಯಾನ್ ಡೀರ್ ಮರ್ವೆ 29 ರನ್ , ಆರ್ಯನ್ ದತ್ 23 ರನ್, ಅಮೋಘ ಬ್ಯಾಟಿಂಗ್ ನೆರವಿನಿಂದ 43 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 245 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ವೈಡ್, ನೋಬಾಲ್ ಸೇರಿದಂತೆ 31 ಇತರೆ ರನ್ ಬಿಟ್ಟುಕೊಟ್ಟಿದ್ದು ನೆದರ್ಲ್ಯಾಂಡ್ಸ್‌ಗೆ ವರದಾನವಾಯಿತು.

ಶಿಸ್ತಿನ ಬೌಲಿಂಗ್ ಎದುರು ಮಂಡಿಯೂರಿದ ಹರಿಣಗಳು

ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ, ಬ್ಯಾಟಿಂಗ್ ಬಲಿಷ್ಠವಾಗಿದ್ದರಿಂದ ಸುಲಭ ಜನ ಸಾಧಿಸುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ನೆದರ್ಲ್ಯಾಂಡ್ಸ್ ಶಿಸ್ತಿನ ಬೌಲಿಂಗ್ ದಾಳಿ ದಕ್ಷಿಣ ಆಫ್ರಿಕಾ ಲೆಕ್ಕಾಚಾರವನ್ನು ಉಲ್ಟಾ ಮಾಡಿತು.

44 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಕ್ಲಾಸೆನ್ ಮತ್ತು ಮಿಲ್ಲರ್ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾಗೆ ಭರವಸೆ ಮೂಡಿಸಿದರು, ಆದರೆ ದಕ್ಷಿಣ ಆಫ್ರಿಕಾ ಮೊತ್ತ 89 ರನ್ ಆಗಿದ್ದಾಗ ಕ್ಲಾಸೆನ್ ಔಟಾಗುವ ಮೂಲಕ ದಕ್ಷಿಣ ಆಫ್ರಿಕಾ ಸೋಲಿನ ದಾರಿ ಹಿಡಿಯಿತು.

ಮಿಲ್ಲರ್ 43 ರನ್ ಗಳಿಸಿ ಔಟಾದರೆ, ಕೇಶವ್ ಮಹಾರಾಜ್ ಕೊನೆಯಲ್ಲಿ 27 ಎಸೆತಗಳಲ್ಲಿ 40 ರನ್ ಗಳಿಸಿದರು ಸೋಲನ್ನು ತಪ್ಪಿಸಲು ಆಗಲಿಲ್ಲ. 42.5 ಓವರ್ ಗಳಲ್ಲಿ 207 ರನ್ ಗಳಿಸಿದ ದಕ್ಷಿಣ ಆಫ್ರಿಕಾ ಆಲೌಟ್ ಆಗುವ ಮೂಲಕ 38 ರನ್‌ಗಳಿಂದ ಸೋಲನುಭವಿಸಿತು.

ಲೋಗನ್ ವ್ಯಾನ್ ಬೀಕ್ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಪೌಲ್ ವ್ಯಾನ್ ಮೀಕರನ್, ವ್ಯಾನ್ ಡರ್ ಮರ್ವೆ ಮತ್ತು ಬಾಸ್ ಡಿ ಲೀಡ್ ತಲಾ ಎರಡು ವಿಕೆಟ್ ಪಡೆದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+