ಮೊದಲ ಮ್ಯಾಚ್ ದೇವರಿಗಲ್ಲ, ಅಭಿಮಾನಿ ದೇವರಿಗೆ... RCB Vs KKR
ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ, ಕನ್ನಡ ನಾಡಿನ ಕ್ರಿಕೆಟ್ ತಂಡ ಆರ್‌ಸಿಬಿ ಅಂದ್ರೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿಯಾಗಿ ಗೆದ್ದು ಬೀಗಿದೆ. ಕೊಲ್ಕತ್ತಾ ಟೀಂ ಹೆಡೆಮುರಿ ಕಟ್ಟಿ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು ಸಾಧಿಸಿರುವ ನಮ್ಮ ಬೆಂಗಳೂರು ತಂಡ ಕೋಟಿ ಕೋಟಿ ಅಭಿಮಾನಿಗಳಿಗೆ ಸಖತ್ ಸುದ್ದಿ ಕೊಟ್ಟಿದೆ. ಹಾಗೇ ಮೊದಲ ಮ್ಯಾಚ್ ದೇವರಿಗೆ, ಮೊದಲ ಮ್ಯಾಚ್ ದೇವರಿಗೆ.. ಅಂತಾ ಹೇಳುತ್ತಿದ್ದವರು ಈಗ ಸೈಲೆಂಟ್ ಆಗಿದ್ದಾರೆ!
ಆರ್‌ಸಿಬಿ ತಂಡದ ಅಬ್ಬರದ ಎದುರು ಯಾವುದೇ ತಂಡ ಕೂಡ ನಿಲ್ಲುವುದಿಲ್ಲ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಯಾಕಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೆಪಾಸಿಟಿ ಮುಂದೆ ಮಿಕ್ಕ ಎಲ್ಲಾ ತಂಡಗಳು ಕೂಡ ಡಮ್ಮಿ. ಒಂದೇ ಒಂದು ಬಾರಿಯೂ ಕಪ್ ಗೆಲ್ಲದ ನಮ್ಮ ಆರ್‌ಸಿಬಿ ತಂಡಕ್ಕೆ ಹತ್ತಾರು ಕೋಟಿ ಅಭಿಮಾನಿಗಳು ಇದ್ದಾರೆ. ಇಂತಹ ಸಮಯದಲ್ಲೇ 2025ರ ಐಪಿಎಲ್ ಕಪ್ ನಮಗೆ ಗ್ಯಾರಂಟಿ ಅಂತಾ ಅಭಿಮಾನಿಗಳು ಕೂಡ ಫಿಕ್ಸ್ ಆಗಿದ್ದಾರೆ. ಅಭಿಮಾನಿಗಳ ಮಾತು ನಿಜ ಮಾಡುವಂತೆ ಇದೀಗ ಆರ್‌ಸಿಬಿ ಕೂಡ ಆಟ ಆಡುತ್ತಿದೆ. ಇದೇ ಸಮಯದಲ್ಲಿ ನಟ ಶಿವಣ್ಣ ಕೂಡ...

ನಟ ಶಿವಣ್ಣ & ಆರ್‌ಸಿಬಿ ತಂಡ....
ಕೊಲ್ಕತ್ತಾ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ 7 ವಿಕೆಟ್ ಅಂತರದ ಗೆಲುವು ಸಾಧಿಸಿದ ನಂತರ ಸಂಚಲನ ಸೃಷ್ಟಿಯಾಗಿದೆ. ಈ ಮೂಲಕ ಮೊದಲ ಪಂದ್ಯದಲ್ಲೇ ಭರ್ಜರಿ ಆರಂಭ ಸಾಧಿಸಿರುವ ಆರ್‌ಸಿಬಿ ತಂಡ ಮೊದಲ ಮ್ಯಾಚ್ ದೇವರಿಗಲ್ಲ, ಅಭಿಮಾನಿ ದೇವರಿಗೆ... ಅನ್ನೋದನ್ನ ಪ್ರೂವ್ ಮಾಡಿದೆ. ಹೀಗಿದ್ದಾಗಲೇ ಹ್ಯಾಟ್ರಿಕ್ ಹೀರೋ & ಕನ್ನಡ ನಾಡಿನ ನೆಚ್ಚಿನ ನಟ ಶಿವಣ್ಣ ಕೂಡ ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಿದ್ದಾರೆ!
ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ...
ಹೌದು, ನಟ ಶಿವಣ್ಣ ಅವರು ಆರ್‌ಸಿಬಿ ಗೆದ್ದ ಖುಷಿಯಲ್ಲಿ ಇದೀಗ ಒಂದು ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಆರ್‌ಸಿಬಿ ಟೀ-ಶರ್ಟ್ ಹಾಕಿ ಮಿಂಚಿರುವ ನಟ ಶಿವಣ್ಣ, ಆರ್‌ಸಿಬಿ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. ವಿಶೇಷ ಪೋಸ್ಟ್ ಮೂಲಕ, ಮೊದಲ ಮ್ಯಾಚ್ ದೇವರಿಗಲ್ಲ, ಅಭಿಮಾನಿ ದೇವರಿಗೆ ಅಂತಾ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಈಗ ಮೊದಲ ಮ್ಯಾಚ್ ಗೆದ್ದಿರುವ ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಚೆನ್ನೈ ವಿರುದ್ಧ ಆಡಲಿದ್ದು, ಆ ಪಂದ್ಯ ಗೆದ್ದೇ ಗೆಲ್ಲಬೇಕು ಅಂತಾ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ಇದೀಗ ಕುತೂಹಲ ಡಬಲ್ ಆಗಿದ್ದು, ಮುಂದಿನ ಮ್ಯಾಚ್‌ನಲ್ಲೂ ಪಟಾಕಿ ಹಚ್ಚೋದು ಪಕ್ಕಾ ಆಗ್ತಿದೆ.












Click it and Unblock the Notifications