ಮಳೆಯಿಂದ ಆರ್‌ಸಿಬಿ & ಕೆಕೆಆರ್ ಪಂದ್ಯ ಕ್ಯಾನ್ಸಲ್ ಅಂತಾ... RCB Vs KKR
ಬೆಂಗಳೂರು ಐಪಿಎಲ್ ತಂಡ ಆರ್‌ಸಿಬಿ ಈ ಸಲ ಕಪ್ ಗೆಲ್ಲೋದು ಗ್ಯಾರಂಟಿ... ಹೀಗೆ ನಮ್ಮ ಆರ್‌ಸಿಬಿ ಅಭಿಮಾನಿಗಳು ಖುಷಿಯಲ್ಲಿ ಕುಣಿದಾಡ್ತಿದ್ದಾರೆ. ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಅಂತಾ ಎಲ್ಲೆಲ್ಲೂ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025ರ ಐಪಿಎಲ್ ಕಪ್ ಗೆದ್ದು ಬೀಗುವುದು ಗ್ಯಾರಂಟಿ ಆಗುತ್ತಿದೆ. ಇಂದು ಆರ್‌ಸಿಬಿ ತಂಡ & ಕೆಕೆಆರ್ ನಡುವೆ 2025ರ ಐಪಿಎಲ್ ಟೂರ್ನಿಯ ಮೊದಲನೆಯ ಮ್ಯಾಚ್ ನಡೆಯುತ್ತಿದೆ. ಆದರೆ ಇದೇ ಸಮಯದಲ್ಲಿ ಆಘಾತ ಎದುರಾಗಿದೆ....
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಇಡೀ ಜಗತ್ತಿನಾದ್ಯಂತ ಖ್ಯಾತಿ ಪಡೆದಿದೆ. ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಕ್ರೀಡಾ ಲೋಕದಲ್ಲಿ ಇದೊಂದು ಪದ ಸಾಕು ಇಡೀ ಜಗತ್ತನ್ನೇ ನಡುಗಿಸಿ ಹಾಕಿಬಿಡುತ್ತದೆ. ಯಾಕಂದ್ರೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇರುವಷ್ಟು ಅಭಿಮಾನಿ ಬಳಗ ಇಡೀ ಜಗತ್ತಿನ ಯಾವುದೇ ತಂಡಕ್ಕೂ ಇಲ್ಲವೇ ಇಲ್ಲ ಎನ್ನಬಹುದು. ಹೀಗಿದ್ದಾಗಲೇ ಇಂದಿನ 2025ರ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಇಂತಹ ಸಮಯದಲ್ಲೇ, ಮಳೆಯಿಂದ ಆರ್‌ಸಿಬಿ & ಕೆಕೆಆರ್ ಪಂದ್ಯ ಕ್ಯಾನ್ಸಲ್ ಅಂತಾ...

ಮಳೆಯಿಂದ ಆರ್‌ಸಿಬಿ ಪಂದ್ಯಕ್ಕೆ ಆಘಾತ...
ಬರೋಬ್ಬರಿ 17 ಐಪಿಎಲ್ ಟೂರ್ನಿಗಳು ಮುಗಿದು ಹೋಗಿದ್ದು, ಈಗ 18ನೇ ಐಪಿಎಲ್ ಟೂರ್ನಿ ಹವಾ ಶುರುವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಆರ್‌ಸಿಬಿ ಪಂದ್ಯ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ ಭರ್ಜರಿ ಸುದ್ದಿಯೊಂದನ್ನ ನಮ್ಮ ಆರ್‌ಸಿಬಿ ತಂಡದ ಅಭಿಮಾನಿಗಳು ಹೇಳುತ್ತಿದ್ದಾರೆ. ಆರ್‌ಸಿಬಿ ತಂಡವು ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತೆ ಅಂತಾ...
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಶತ್ರುಗಳಿಗೆ ಸರಿಯಾಗಿ ಉತ್ತರವನ್ನ ನೀಡುವ ಸಮಯ ಬಂದೇ ಬರುತ್ತೆ... ಅಂತಿದ್ದಾರೆ ಫ್ಯಾನ್ಸ್. ಆದರೆ ಆರ್‌ಸಿಬಿ ಅಂದ್ರೆ ನಮ್ಮ ಬೆಂಗಳೂರು ತಂಡದ ಮೊದಲನೇ ಪಂದ್ಯವೇ ದೊಡ್ಡ ಕಂಟಕ ಎದುರಿಸುತ್ತಿದೆ. ಮಳೆಯಿಂದ ಆರ್‌ಸಿಬಿ & ಕೆಕೆಆರ್ ಪಂದ್ಯ ಕ್ಯಾನ್ಸಲ್ ಅಂತಾ...
ಮಳೆ.. ಮಳೆ.. ಭಾರಿ ಮಳೆ!
ಪಶ್ಚಿಮ ಬಂಗಾಳದ ರಾಜಧಾನಿ ಕಲ್ಕತ್ತಾ ನಗರದಲ್ಲಿ ಇಂದು ಆರ್‌ಸಿಬಿ & ಕೆಕೆಆರ್ ನಡುವಿನ ಮ್ಯಾಚ್ ನಡೆಯಲಿದೆ. ಆದರೆ ಮಳೆಯಿಂದ ಆರ್‌ಸಿಬಿ & ಕೆಕೆಆರ್ ಪಂದ್ಯ ಕ್ಯಾನ್ಸಲ್ ಅಂತಾ ಇದೀಗ ಸುದ್ದಿ ಹಬ್ಬಿದೆ. ಅಷ್ಟಕ್ಕೂ ಈ ಸುದ್ದಿ ಹಬ್ಬಲು ಕಾರಣವಾಗಿರುವುದು ಮಳೆ ಮೋಡಗಳ ಅಟ್ಟಹಾಸ, ಭಾರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಇದೀಗ ಕಲ್ಕತ್ತಾ ನಗರ ಒದ್ದೆಯಾಗಿದೆ. ಅಲ್ಲದೆ ಮ್ಯಾಚ್ ಶುರುವಾಗುವ ಸಮಯಕ್ಕೆ ಸರಿಯಾಗಿ ಅಂದ್ರೆ ಸಂಜೆ 7.30ರ ನಂತರ ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ ಅಭಿಮಾನಿಗಳಿಗೆ ಭಯವೂ ಶುರು ಆಗಿದೆ. ಅಕಸ್ಮಾತ್ ಮಳೆ ಶುರುವಾದರೆ ಮ್ಯಾಚ್ ಶುರು ಮಾಡುವುದು ಕೂಡ ಅನುಮಾನವೇ ಆಗಿದೆ.












Click it and Unblock the Notifications