Virat Kohli vs Rohit Sharma: ವಿರಾಟ್-ರೋಹಿತ್ ಯಾರಿಗೆ ಹೆಚ್ಚು ಜನಪ್ರಿಯತೆ? ಶಾಕಿಂಗ್ ಫಲಿತಾಂಶ ಇದು
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆದ್ದ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇಬ್ಬರೂ ಕೂಡ ಭಾರತ ಕ್ರಿಕೆಟ್ ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರಿಗೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಇಬ್ಬರಲ್ಲಿ ಯಾರು ಜನಪ್ರಿಯ ಎಂದಾಗ ಎಲ್ಲರೂ ವಿರಾಟ್ ಕೊಹ್ಲಿ ಎನ್ನುತ್ತಾರೆ. ಯಾಕೆಂದರೆ ವಿರಾಟ್ ಕೊಹ್ಲಿ ಕ್ರಿಕೆಟ್‌ನ ಜನಪ್ರಿಯತೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದ ಕ್ರಿಕೆಟಿಗ.

ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿಯನ್ನು ಮೀರಿಸುವ ಕ್ರಿಕೆಟಿಗ ಮತ್ತೊಬ್ಬರಿಲ್ಲ. ಜಾಗತಿಕವಾಗಿ ಕೊಹ್ಲಿ ಹೆಚ್ಚು ಹೆಸರು ಮಾಡಿದ್ದಾರೆ. ಆದರೆ ಟಿ20 ವಿಶ್ವಕಪ್ ಸಂದರ್ಭದಲ್ಲಿ ಮಾತ್ರ ಕೊಹ್ಲಿ ಮತ್ತು ರೋಹಿತ್ ನಡುವಿನ ಜನಪ್ರಿಯತೆ ಸ್ಪರ್ಧೆಯಲ್ಲಿ ಅಚ್ಚರಿ ಫಲಿತಾಂಶ ಹೊರಬಂದಿದೆ.
ರೋಹಿತ್ ಹೆಚ್ಚು ಜನಪ್ರಿಯ
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಪಂದ್ಯಾವಳಿಯುದ್ದಕ್ಕೂ ಭಾರತ ತಂಡದ ಬಗ್ಗೆ ಸಾಕಷ್ಟು ಚರ್ಚೆಗೆ ಸಾಕ್ಷಿಯಾಯಿತು. ಅಚ್ಚರಿ ಎನ್ನುವಂತೆ ವಿರಾಟ್ ಕೊಹ್ಲಿ ವಿರುದ್ಧ ರೋಹಿತ್ ಶರ್ಮಾ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಚರ್ಚಿಸಿದ ಆಟಗಾರ ಎನಿಸಿಕೊಂಡರು.
ಭಾರತ ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಶರ್ಮಾ ಅವರ ಸಂಭ್ರಮಾಚರಣೆ ಸಾಕಷ್ಟು ಗಮನ ಸೆಳೆಯಿತು. ಹಾರ್ದಿಕ್ ಪಾಂಡ್ಯ ಅವರೊಂದಿಗೆ ಹಿಟ್ ಮ್ಯಾನ್ ನಡೆದುಕೊಂಡ ರೀತಿ ಮೆಚ್ಚುಗೆಗೆ ಪಾತ್ರವಾಯಿತು.
ರೋಹಿತ್ ಶರ್ಮಾ ಸಾಮಾಜಿಕ ಮಾಧ್ಯಮಗಳಲ್ಲಿ ಒಟ್ಟಾರೆ 70,222,648 ಎಂಗೇಜ್‌ಮೆಂಟ್‌ಗಳನ್ನು ಗಳಿಸಿದರೆ, ವಿರಾಟ್ ಕೊಹ್ಲಿ 6 ಕೋಟಿ ಎಂಗೇಜ್‌ಮೆಂಟ್‌ಗಳನ್ನು ಗಳಿಸಿದ್ದಾರೆ. ಎಲ್ಲಾ ಆಟಗಾರರಿಗಿಂತ ರೋಹಿತ್ ಶರ್ಮಾ ಮುಂದಿದ್ದಾರೆ.
ಕಪಿಲ್ ದೇವ್ ಮತ್ತು ಎಂಎಸ್ ಧೋನಿ ನಂತರ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಮೂರನೇ ಭಾರತೀಯ ತಂಡದ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.
ಸೂಪರ್ 8 ಹಂತಗಳಲ್ಲಿ ಕೊಹ್ಲಿ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಆದರೆ ಪಂದ್ಯಾವಳಿಯಲ್ಲಿ ರೋಹಿತ್ ಅವರ ನಾಯಕತ್ವ, ಅವರ ನಾಯಕತ್ವದಲ್ಲಿ ಭಾರತವು ವಿಶ್ವಕಪ್ ವಿಜಯದಲ್ಲಿ ಉತ್ತುಂಗಕ್ಕೇರಿದ್ದು, ಅವರನ್ನು ಅಗ್ರಸ್ಥಾನಕ್ಕೆ ತಳ್ಳಿತು.
ಕೊಹ್ಲಿ, ಹಿಂದಿನ ಸುತ್ತುಗಳಲ್ಲಿ ತನ್ನ ಪ್ರಾಬಲ್ಯವನ್ನು ಹೊಂದಿದ್ದರೂ, ಸುಮಾರು 60 ಮಿಲಿಯನ್ ಇಂಪ್ರೆಶನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರು. ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಅವರ ನಂತರ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.
ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯೂ ಅಲ್ಲ. ತಂಡವಾಗಿ ಆಡಿದ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಕೂಡ ಉತ್ತಮ ಗೆಳೆಯರು, ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಎಂದೂ ಶ್ರೇಷ್ಠ ಆಟಗಾರರೇ ಆಗಿರುತ್ತಾರೆ.












Click it and Unblock the Notifications