India vs Ireland: ಆ ತಪ್ಪು ಮಾಡಬೇಡಿ! ಅಭಿಮಾನಿಗಳಿಗೆ ರೋಹಿತ್ ಶರ್ಮಾ ಎಚ್ಚರಿಕೆ
ಟಿ20 ಐಪಿಎಲ್ 2024ರ ತನ್ನ ಮೊದಲ ಪಂದ್ಯವನ್ನಾಡಲು ಭಾರತ ತಂಡ ಸಜ್ಜಾಗಿದೆ. ಇಂದು (ಬುಧವಾರ) ಭಾರತೀಯ ಕಾಲಮಾನ ಸಂಜೆ 8 ಗಂಟೆಗೆ ಆರಂಭವಾಗುವ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ.
ಪಂದ್ಯಕ್ಕೆ ಮುನ್ನಾ ದಿನ ಮಾಧ್ಯಮಗಳ ಜೊತೆ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಅಭಿಮಾನಿಗಳಿಗೆ ವಿಶೇಷ ಎಚ್ಚರಿಕೆ ನೀಡಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯ ನಡೆಯುವಾಗ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ, ನೆಚ್ಚಿನ ಕ್ರಿಕೆಟಿಗನ ಕಾಲಿಗೆ ಬೀಳುವುದು, ತಬ್ಬಿಕೊಳ್ಳುವುದನ್ನು ನೋಡಿದ್ದೇವೆ. ಯುಎಸ್‌ಎನಲ್ಲಿ ಆ ರೀತಿ ಮಾಡದಂತೆ ಮನವಿ ಮಾಡಿದ್ದಾರೆ.

ಅಭಿಮಾನಿಗಳು ಪಿಚ್‌ಗೆ ನುಗ್ಗದಂತೆ ಎಚ್ಚರಿಕೆ ನೀಡಿದ್ದು, ದೇಶದ ನಿಯಮವನ್ನು ಗೌರವಿಸುವಂತೆ ಕೇಳಿಕೊಂಡಿದ್ದಾರೆ. ಆಟಗಾರರು ಮತ್ತು ಬೆಂಬಲಿಗರ ಸುರಕ್ಷತೆಗೆ ಒತ್ತು ನೀಡುವ ಮೂಲಕ ಮೈದಾನಕ್ಕೆ ಪ್ರವೇಶಿಸದಂತೆ ಅಭಿಮಾನಿಗಳನ್ನು ಒತ್ತಾಯಿಸಿದರು.
ಬಾಂಗ್ಲಾದೇಶದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿದ್ದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ. ಭಾರತದಲ್ಲಾದರೆ ಅಭಿಮಾನಿಗೆ ಎಚ್ಚರಿಕೆ ನೀಡಿ ಅಥವಾ ದಂಡ ಹಾಕಿ ಬಿಡಲಾಗುತ್ತದೆ ಆದರೆ ಯುಎಸ್‌ಎ ನಲ್ಲಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಅಭಿಮಾನಿಗಳಿಗೆ ಮನವಿ
"ಯಾರೂ ಮೈದಾನದ ಒಳಗೆ ಹೋಗಬಾರದು. ಆಟಗಾರರ ಭದ್ರತೆ ಮುಖ್ಯ. ಅಭಿಮಾನಿಗಳ ಭದ್ರತೆಯೂ ಮುಖ್ಯ. ನಿರ್ದಿಷ್ಟ ದೇಶದ ನಿಯಮವನ್ನು ನೀವು ಗೌರವಿಸಬೇಕು" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ವರದಿಗಳ ಪ್ರಕಾರ, ಸ್ಪೆಷಲಿಸ್ಟ್ ಸ್ನೈಪರ್‌ಗಳು ಮತ್ತು ಪೊಲೀಸರನ್ನು ಹೊಂದಿರುವ SWAT ತಂಡಗಳು ಮೈದಾನದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಲಿವೆ. ಪಿಚ್ ಆಕ್ರಮಣಕಾರರು ಮತ್ತು ಆಟಗಾರರಿಗೆ ಅಪಾಯಕಾರಿ ಎಂದು ಭಾವಿಸಲಾಗಿದ್ದು ಭದ್ರತೆ ಹೆಚ್ಚಿಸಲಾಗಿದೆ.
ಬಾಂಗ್ಲಾದೇಶದ ವಿರುದ್ಧದ ಭಾರತದ ಅಭ್ಯಾಸ ಪಂದ್ಯದಲ್ಲಿ, ರೋಹಿತ್ ಶರ್ಮಾ ಅವರನ್ನು ಭೇಟಿಯಾಗಲು ಪಿಚ್‌ಗೆ ನುಗ್ಗಿದ ಅಭಿಮಾನಿಯೊಬ್ಬರನ್ನು ತಡೆದು, ನೆಲಕ್ಕೆ ಬೀಳಿಸಿ ಅಧಿಕಾರಿಗಳು ಕೈಕೋಳ ಹಾಕಿದ್ದರು.
ಭಾರತ - ಪಾಕಿಸ್ತಾನ ಪಂದ್ಯಕ್ಕೆ ಭಯೋತ್ಪಾದಕರ ಭದ್ರತೆ ಇರುವುದರಿಂದ ಭಾರತ ತಂಡದ ಆಟಗಾರರಿಗೆ ಭಾರಿ ಭದ್ರತೆ ನೀಡಲಾಗಿದೆ. ಅಭಿಮಾನಿಗಳಾಗಿ ಮೈದಾನಕ್ಕೆ ನುಗ್ಗಿದರೂ ನೀವು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.












Click it and Unblock the Notifications