Rohit Sharma: ಅರ್ಧಶತಕ ಸಿಡಿಸಿ ದ್ವೀಪರಾಷ್ಟ್ರದ ವಿರುದ್ಧ ಅಬ್ಬರಿಸಿದ ನಾಯಕ ರೋಹಿತ್ ಶರ್ಮಾ
ಟೀಮ್ ಇಂಡಿಯಾ ಹಾಗೂ ಶ್ರೀಲಂಕಾ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಯಾವೊಬ್ಬ ನಾಯಕ ಮಾಡದ ದಾಖಲೆಯನ್ನು ರೋಹಿತ್ ಶರ್ಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 230 ರನ್ ಕಲೆ ಹಾಕಿತು. ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾ ನಾಯಕ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದರು.

ಶ್ರೀಲಂಕಾ ವಿರುದ್ಧ ಮೂರು ಸಿಕ್ಸರ್
ಶನಿವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ನಾಯಕ, ಶ್ರೀಲಂಕಾ ಬೌಲರ್‌ಗಳನ್ನು ದಂಡಿಸುತ್ತಾ ಸಾಗಿದರು. ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಪವರ್ ಫುಲ್ ಆಟಕ್ಕೆ ಲಂಕಾ ಬೌಲರ್‌ಗಳು ಕಂಗಾಲಾದರು. ತಮ್ಮ ನೈಜ ಆಟವನ್ನು ಆಡಿದ ರೋಹಿತ್ ಅಬ್ಬರಿಸಿದರು.
ಆರಂಭಿಕರಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ 47 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸೇರಿದಂತೆ 58 ರನ್ ಬಾರಿಸಿದರು. ರೋಹಿತ್ ಶರ್ಮಾ ಅವರ ಈ ಇನ್ನಿಂಗ್ಸ್ ಇತಿಹಾಸದ ಪುಟ ಸೇರಿದೆ. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಈಗ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ.
ಅಧಿಕ ಸಿಕ್ಸರ್ ಬಾರಿಸಿದ ನಾಯಕ
ರೋಹಿತ್ ಶರ್ಮಾ ನಾಯಕನಾಗಿ ಇದುವರೆಗೆ ಒಟ್ಟು 124 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ, ಒಟ್ಟು 234 ಸಿಕ್ಸರ್ ಸಿಡಿಸುವ ಮೂಲಕ, ಅತಿ ಹೆಚ್ಚು ಸಿಕ್ಸರ್ ಬಾರಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೊದಲು ಈ ದಾಖಲೆ ಇಂಗ್ಲೆಂಡ್ ತಂಡದ ಇಯಾನ್ ತಂಡದ ಇಯಾನ್ ಮಾರ್ಗನ್ ಹೆಸರಿನಲ್ಲಿತ್ತು. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 233 ಸಿಕ್ಸರ್ ಬಾರಿಸಿದ ದಾಖಲೆಯನ್ನು ಹೊಂದಿದ್ದರು. ಮಾರ್ಗನ್ 198 ಪಂದ್ಯಗಳಲ್ಲಿ ಇಂಗ್ಲೆಂಡ್‌ನ ನಾಯಕತ್ವ ವಹಿಸಿದ್ದರು ಮತ್ತು 233 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಇನ್ನು ನಾಯಕನಾಗಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಪಟ್ಟಿಯಲ್ಲಿ ಎಂ ಎಸ್ ಧೋನಿ ಅವರಿಗೂ ಸ್ಥಾನ ವಿದೆ. ಇವರು 332 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, 211 ಸಿಕ್ಸರ್ ಬಾರಿಸಿದ್ದಾರೆ. ನಂತರ ಆಸ್ಟ್ರೇಲಿಯಾ ಸ್ಟಾರ್ ನಾಯಕ ರಿಕ್ಕಿ ಪಾಂಟಿಂಗ್ ಕಾಣಿಸಿಕೊಳ್ಳುತ್ತಾರೆ. ಇವರು 324 ಪಂದ್ಯಗಳಲ್ಲಿ 171 ಸಿಕ್ಸರ್ ಸಿಡಿಸಿದ್ದಾರೆ.
ರೋಹಿತ್ ವೃತ್ತಿ ಜೀವನ
ರೋಹಿತ್ ಶರ್ಮಾ ಅವರ ವೃತ್ತಿ ಜೀವನದಲ್ಲಿ ಹಲವು ದಾಖಲೆಗಳು ಸೇರಿವೆ. ಆಟಗಾರನಾಗಿ ರೋಹಿತ್ ಶರ್ಮ ದಾಖಲೆಗಳ ಪಟ್ಟಿಗೆ ಈಗ ಇನ್ನೊಂದು ದಾಖಲೆ ಸೇರಿಕೊಂಡಿದೆ. ರೋಹಿತ್ ಶರ್ಮಾ 59 ಟೆಸ್ಟ್‌ನಲ್ಲಿ 84 ಸಿಕ್ಸರ್, 262 ಏಕದಿನ ಕ್ರಿಕೆಟ್‌ನಲ್ಲಿ 234 ಸಿಕ್ಸರ್ ಸೇರಿವೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ 121 ಸಿಕ್ಸರ್ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ.












Click it and Unblock the Notifications