Get Updates
Get notified of breaking news, exclusive insights, and must-see stories!

ವನ್ಯಜೀವಿ, ಪ್ರಾಣಿ ಅಂಗಾಂಗದ ಟ್ರೋಫಿಗಳಿದ್ದಲ್ಲಿ ಹಿಂತಿರುಗಿಸಲು ಸೂಚನೆ

ಬೆಂಗಳೂರು, ಫೆಬ್ರವರಿ 18; ಜನರು ತಮ್ಮಲ್ಲಿರುವ ಅಘೋಷಿತ ವನ್ಯಜೀವಿ, ಪ್ರಾಣಿಗಳ ಅಂಗಾಂಗಗಳ ಟ್ರೋಫಿಗಳು, ಸಂಸ್ಕರಿಸಿದ ಟ್ರೋಫಿಗಳು ಮತ್ತು ಪದಾರ್ಥಗಳಿದ್ದಲ್ಲಿ ಹಿಂತಿರುಗಿಸಬೇಕು ಎಂದು ಮನವಿ ಮಾಡಲಾಗಿದೆ.

ವನ್ಯಜೀವಿ (ರಕ್ಷಣಾ) ಕಾಯ್ದೆ 1972 ರ ಕಲಂ64(2) (ಎಫ್) (ಹೆಚ್) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿ Wildlife (Protection) and surrender of un declared Wildlife or Animal Article, Trophy and Uncured Trophy (Karnataka) Rules, 2024 ನಿಯಮದಡಿ ದಿ.11-01-2024 ರಿಂದ ಹೊಸ ನಿಯಮವನ್ನು ಜಾರಿ ತರಲಾಗಿದೆ.

ಆದ್ದರಿಂದ ಅಘೋಷಿತ ವನ್ಯಜೀವಿ, ಪ್ರಾಣಿಗಳ ಅಂಗಾಂಗಗಳ ಟ್ರೋಫಿಗಳು, ಸಂಸ್ಕರಿಸಿದ ಟ್ರೋಫಿಗಳು ಮತ್ತು ಪದಾರ್ಥಗಳಿದ್ದಲ್ಲಿ ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು.

Return The Trophies Of Animals Body Parts

ಸರ್ಕಾರಕ್ಕೆ ಮರಳಿಸಲು 90 ದಿನಗಳ ಕಾಲಾವಕಾಶ ನೀಡಿದ್ದು ದಿನಾಂಕ 11/01/2024ರಿಂದ ದಿನಾಂಕ 11/04/2024 ರವರೆಗೂ ಮರಳಿಸಲು ಅವಕಾಶವಿರುತ್ತದೆ.

ಪ್ರಕ್ರಿಯೆ ಹೇಗೆ?; ಮರಳಿಸಲು ನಿಗದಿತ-1 ನಮೂನೆಯಲ್ಲಿ ದ್ವಿ-ಪ್ರತಿಯಲ್ಲಿ 100 ರೂಪಾಯಿಗಳ ನೋಟರಿಗೊಂಡ ಸ್ಟ್ಯಾಂಪ್ ಪೇಪರ್‌ನಲ್ಲಿ ಒಂದು ಅಫಿಡೆವಿಟ್‌ ಅನ್ನು ಮಾಡಿಸಿಕೊಂಡು ಆಧ್ಯರ್ಪಿಸುತ್ತಿರುವ ವನ್ಯಜೀವಿ ಟ್ರೋಫಿಗಳನ್ನು ಅರ್ಜಿದಾರರು ತಾವು ಅದನ್ನು ಪಡೆದ ವಿಧ ಮತ್ತು ವರ್ಷದ ಬಗ್ಗೆ ನಮೂದಿಸಿ ತಮ್ಮ ವ್ಯಾಪ್ತಿಗೆ ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು.

ಈ ನಿಯಮಗಳನ್ವಯ ವನ್ಯಜೀವಿ (ರಕ್ಷಣಾ) ಕಾಯಿದೆ, 1972 ಅಡಿಯಲ್ಲಿ ಈಗಾಗಲೇ ನೀಡಲಾದ ಮಾಲೀಕತ್ವದ ಪ್ರಮಾಣ ಪತ್ರ ಹೊಂದಿದ ವಸ್ತುಗಳಿಗೆ ಅನ್ವಯವಾಗುವುದಿಲ್ಲ. ಆಧ್ಯರ್ಪಿಸಿದ ವನ್ಯಜೀವಿ ವಸ್ತುಗಳ ಕುರಿತಂತೆ ಸ್ವೀಕಾರ ಮಾಡಿದ ಅಧಿಕಾರಿಯು ಸದರಿ ವಸ್ತುಗಳು ಯಾವುದೇ ಕಾಡು ಪ್ರಾಣಿಗಳ ಅಕ್ರಮ ಬೇಟೆಯಿಂದ ಬಂದಿಲ್ಲವೆಂದು ಹಾಗೂ ವನ್ಯಜೀವಿ (ರಕ್ಷಣೆ) ಕಾಯಿದೆ 1972 ರ ಕಾಯ್ದೆ ಬಂದ ನಂತರ ಯಾವುದೇ ಅಕ್ರಮ ಬೇಟೆಯಿಂದ ಬಂದಂತಹ ವಸ್ತುಗಳಲ್ಲವೆಂದು ವಿಚಾರಣೆ ಮುಖಾಂತರ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಒಂದು ವೇಳೆ ವನ್ಯಜೀವಿ (ರಕ್ಷಣೆ) ಕಾಯಿದೆ 1972ರ ಕಾಯ್ದೆ ನಂತರ ಬೇಟೆಯಿಂದ ಪಡೆದ ವಸ್ತುಗಳಾಗಿದ್ದಲ್ಲಿ ನಿಯಮಾನುಸಾರ ಅಭ್ಯರ್ಥಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಇದು ಸುಳ್ಳು ಅಫಿಡೆವಿಟ್‍ ಅನ್ನು ಪ್ರಾಮಾಣಿಕರಿಸಿದ ಪ್ರಕರಣವು ಎಂದು ಭಾವಿಸಲಾಗುವುದು.

ಅಧ್ಯರ್ಪಿಸಿದೆಲ್ಲಾ ವೈಲ್ಡ್ ಲೈಫ್ ಅಥವಾ ಅನಿಮಲ್ ಆರ್ಟಿಕಲ್, ಟ್ರೋಫಿ ಮತ್ತು ಅನ್ ಕ್ಯೂರ್ಡ್ ಟ್ರೋಫಿಗಳ ಎಲ್ಲಾ ವಿಚಾರಣೆಗಳನ್ನು ಅಧಿಕೃತ ಅಧಿಕಾರಿಗಳ ಮುಂದೆ ಆಧ್ಯರ್ಪಿಸಿದ ದಿನಾಂಕದಿಂದ 90 ದಿನಗಳ ಒಳಗೆ ಅಥವಾ ಮೊದಲು ಪೂರ್ಣಗೊಳಿಸಬೇಕು.

ವಿಚಾರಣೆಯು ಹೇಳಿದ ಅವಧಿಯೊಳಗೆ ನಿರ್ಣಾಯಕವಾಗದಿದ್ದಲ್ಲಿ ಅಘೋಷಿತ ವನ್ಯಜೀವಿ ಅಥವಾ ಪ್ರಾಣಿಗಳ ವಸ್ತುಗಳ ಶರಣಾಗತಿಯನ್ನು ಮಾಡುವ ವ್ಯಕ್ತಿ, ಟ್ರೋಫಿ ಮತ್ತು ಅನಿಯಂತ್ರಿತ ಟ್ರೋಫಿ ಕುರಿತು ಅನುಮಾನದ ಪ್ರಯೋಜನವನ್ನು ನೀಡಬಹುದು. ನಂತರ ಯಾವುದೇ ಪುರಾವೆಗಳು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಮರಳಿಸಿದ ಎಲ್ಲಾ ವೈಲ್ಡ್ ಲೈಫ್ ಅಥವಾ ಅನಿಮಲ್ ಆರ್ಟಿಕಲ್, ಟ್ರೋಫಿ ಮತ್ತು ಅನ್ ಕ್ಯೂರ್ಡ್ ಟ್ರೋಫಿಗಳು ಅಧ್ಯರ್ಪಣಿ ಮಾಡಿದ ವ್ಯಕ್ತಿಗಳು ನಿಯಮಾನುಸಾರವಾಗಿದಲ್ಲಿ ಅವುಗಳ ಸರ್ಕಾರಿ ಆಸ್ತಿಯಾಗಿರುತ್ತದೆ.

ಅವುಗಳನ್ನು DISPOSAL OF WILD ANIMAL ARTICLES RULE 2023 ರನ್ವಯ ನಿಯಮಾನುಸಾರ ವಿಲೇ ಮಾಡಲಾಗುವುದು. ವಿಚಾರಣೆಯಲ್ಲಿ ಉಳಿದಂತಹ ವನ್ಯಜೀವಿ ವಸ್ತುಗಳನ್ನು ನ್ಯಾಯವ್ಯಾಪ್ತಿಯ ನ್ಯಾಯಾಲಯಗಳ ನಿರ್ದೇಶನಗಳ ಪ್ರಕಾರ ವಿಲೇ ಮಾಡಲಾಗುವುದು.

ಇತರೆ ಮಾಹಿತಿ ಬೇಕಾದಲ್ಲಿ ಕರ್ನಾಟಕ ಸರ್ಕಾರದ ವೆಬ್‍ಸೈಟ್ ವಿಳಾಸ https://aranya.gov.in ಗೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+