RCB: ಕಪ್ ಜೊತೆ ಬೆಂಗಳೂರಿಗೆ ಬರ್ತಿದ್ದಾರೆ ಆರ್‌ಸಿಬಿ ಹುಡುಗಿಯರು
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಸಿದ ಆರ್‌ಸಿಬಿ ಮೊದಲ ಬಾರಿಗೆ ಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.
16 ವರ್ಷಗಳಿಂದ ಒಮ್ಮೆಯೂ ಕಪ್ ಗೆಲ್ಲದ ಆರ್ ಸಿಬಿ ತಂಡದ ಕೊರತೆಯನ್ನು ಮಹಿಳಾ ತಂಡ ನೀಗಿಸಿದೆ. ಮಹಿಳಾ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯಲ್ಲೇ ಕಪ್ ಗೆದ್ದು ಸಂಭ್ರಮಿಸಿದೆ.

ದೆಹಲಿಯಲ್ಲಿ ಆರ್‌ಸಿಬಿ ಕಪ್ ಗೆದ್ದರೂ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಕಪ್ ಗೆದ್ದ ಆರ್‌ಸಿಬಿ ತಂಡದ ಹುಡುಗಿಯರು ಈಗ ಬೆಂಗಳೂರಿಗೆ ಬರುತ್ತಿದ್ದು, ಕಪ್ ಜೊತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ.
ಚಿನ್ನಸ್ವಾಮಿಗೆ ಬರಲಿದೆ ಮಂಧಾನ ಪಡೆ
ಹೌದು, ಕಪ್ ಗೆದ್ದಿರುವ ಸ್ಮೃತಿ ಮಂಧಾನ ಪಡೆ ಮಾರ್ಚ್ 18 ರಂದು ಬೆಂಗಳೂರಿಗೆ ಬರುತ್ತಿದೆ. ಮಾರ್ಚ್ 19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದ್ದು, ಆರ್‌ಸಿಬಿ ಮಹಿಳಾ ತಂಡ ಹಾಜರಾಗಲಿದೆ, ಮಂಧಾನ ಪಡೆ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಕಪ್ ಎತ್ತಲಿದ್ದಾರೆ.
We’re coming home, we’re coming home, tell the world we’re coming home… 🕺💃🏻🪩🎵#PlayBold #ನಮ್ಮRCB #SheIsBold #WPL2024 pic.twitter.com/BuBNdQZPSy
— Royal Challengers Bangalore (@RCBTweets) March 18, 2024
ಅನ್‌ಬಾಕ್ಸ್ ಕಾರ್ಯಕ್ರಮ
ಐಪಿಎಲ್ 2024ರ ಆರಂಭಕ್ಕೆ ಇನ್ನು 4 ದಿನಗಳು ಬಾಕಿ ಇದೆ. ಮಾರ್ಚ್ 19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದೆ. ಆಟಗಾರರ ಜೆರ್ಸಿ ಅನಾವರಣದ ಜೊತೆಗೆ ಹಲವು ಅಚ್ಚರಿಯ ಘೋಷಣೆಗಳನ್ನು ಮಾಡಲಿದೆ.
ರಾಯಲ್ ಚಾಲೆಂಜರ್ಸ್ Bangalore ಹೆಸರು ರಾಯಲ್ ಚಾಲೆಂಜರ್ಸ್ ಬೆಂಗಳೂರು (Bengaluru) ಆಗಿ ಬದಲಾಗುವುದು ಖಚಿತವಾಗಿದೆ, ಇದನ್ನು ಕೂಡ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಅನಾವರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ವಿರಾಟ್ ಕೊಹ್ಲಿ ಬೆಂಗಳೂರಿಗೆ ಬಂದಿದ್ದು ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಾಯಕ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಕ್ಯಾಮೆರಾನ್ ಗ್ರೀನ್ ಸೇರಿದಂತೆ ಆರ್‌ಸಿಬಿ ಸ್ಟಾರ್ ಆಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಹಿಳಾ ತಂಡ ಕಪ್ ಜೊತೆ ಇರುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೀವು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಬೇಕಾಗುತ್ತದೆ. ಆದರೆ ಅನ್‌ಬಾಕ್ಸ್ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇಲ್ಲ, ಟಿಕೆಟ್ ನಿಮ್ಮ ಬಳಿ ಇದ್ದರೆ ಮಾತ್ರ ಈ ಅವಕಾಶ ಸಿಗಲಿದೆ.
ಮಾರ್ಚ್ 22 ರಂದು ಐಪಿಎಲ್‌ಗೆ ಚಾಲನೆ
ಮಹಿಳಾ ಪ್ರೀಮಿಯರ್ ಲೀಗ್ ಮುಕ್ತಾಯದ ಬಳಿಕ ಐಪಿಎಲ್ ಹಬ್ಬ ಶುರುವಾಗಲಿದೆ. ಮಾರ್ಚ್ 22ರಂದು ಐಪಿಎಲ್ ಮೊದಲ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡವನ್ನು ಎದುರಿಸಲಿದೆ.












Click it and Unblock the Notifications