RCB vs PBKS: ಆರ್‌ಸಿಬಿಯ ಈ ಸ್ಟಾರ್ ಪ್ಲೇಯರ್‌ಗಳು ಅಬ್ಬರಿಸಿದರೆ, ಕಿಂಗ್ಸ್ ಬೋನಿಗೆ ಬೀಳೋದು ಪಕ್ಕಾ!
ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 58ನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯ ಆರ್‌ಸಿಬಿ ಹಾಗೂ ಪಂಜಾಬ್ ತಂಡಕ್ಕೆ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಇರಾದೆಯನ್ನು ಹೊಂದಿದೆ.
ಆರಂಭಿಕ ಪಂದ್ಯಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಆರ್‌ಸಿಬಿ ಈಗ ಭರ್ಜರಿ ಫಾರ್ಮ್‌ಗೆ ಮರಳಿದೆ. ಅಲ್ಲದೆ ಹ್ಯಾಟ್ರಿಕ್ ಗೆಲುವು ತಂಡದ ಬೂಸ್ಟ್ ಹೆಚ್ಚಿಸಿದೆ. ಸ್ಟಾರ್ ಆಟಗಾರರು ಟೂರ್ನಿಯ ಮಹತ್ವದ ಘಟ್ಟದಲ್ಲಿ ಫಾರ್ಮ್‌ಗೆ ಮರಳಿರುವುದು ಟೀಮ್ ಮ್ಯಾನೇಜ್ಮೆಂಟ್ ಚಿಂತೆಯನ್ನು ದೂರ ಮಾಡಿದೆ. ಆರಂಭದಲ್ಲಿ ಕೈ ಕೊಡುತ್ತಿದ್ದ ಬೌಲಿಂಗ್ ವಿಭಾಗ ಈಗ ಟ್ರ್ಯಾಕ್‌ಗೆ ಮರಳಿದೆ.

ಸಖತ್ ಬ್ಯಾಟಿಂಗ್ ಲೈನ್ ಅಪ್
ಆರ್‌ಸಿಬಿ ತಂಡದ ಬ್ಯಾಟಿಂಗ್ ಲೈನ್ ಅಪ್‌ನಲ್ಲಿ ಬರುವ ಆಟಗಾರರ ಹೆಸರನ್ನು ಕೇಳಿದರೆ ಎದುರಾಳಿಗಳಿಗೆ ನಡುಕು ಹುಟ್ಟಬೇಕು. ಆರಂಭಿಕರಾಗಿ ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲೇಸಿಸ್ ಕಾಣಿಸಿಕೊಳ್ಳಲಿದ್ದಾರೆ. ಇವರು ಪವರ್ ಪ್ಲೇನಲ್ಲಿ ಅಬ್ಬರಿಸುವ ಕ್ಷಮತೆಯನ್ನು ಹೊಂದಿದ್ದಾರೆ. ಅಲ್ಲದೆ ವಿರಾಟ್ ಪ್ರಸಕ್ತ ಟೂರ್ನಿಯಲ್ಲಿ ಭರ್ಜರಿ ಟಚ್‌ನಲ್ಲಿ ಕಾಣಿಸಿಕೊಂಡಿದ್ದು, ರನ್‌ಗಳನ್ನು ಕಲೆ ಹಾಕಿ ಅಬ್ಬರಿಸುತ್ತಿದ್ದಾರೆ.
ಪ್ರಸಕ್ತ ಐಪಿಎಲ್‌ನಲ್ಲಿ ರನ್ ಕಲೆ ಹಾಕುವ ಲೆಕ್ಕಾಚಾರದಲ್ಲಿ ವಿರಾಟ್ ನಂಬರ್ ಒನ್ ಬ್ಯಾಟರ್. ಇವರು ಆಡಿರುವ 11 ಪಂದ್ಯಗಳಲ್ಲಿ 67.75 ರ ಸರಾಸರಿಯಲ್ಲಿ 542 ರನ್ ಬಾರಿಸಿದ್ದಾರೆ. ಇವರೊಂದಿಗೆ ಕಾಣಿಸಿಕೊಳ್ಳುವ ಫಾಫ್ ಸಹ ರನ್ ಕಲೆ ಹಾಕುವ ಲೆಕ್ಕಾಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು 352 ರನ್ ಸಿಡಿಸಿ ಭರವಸೆ ಮೂಡಿಸಿದ್ದಾರೆ.

ಅಬ್ಬರವೇ ಜಾಕ್ಸ್ ಪ್ರೀತಿ
ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ವಿಲ್ ಜಾಕ್ಸ್ ಅಬ್ಬರದ ಆಟಕ್ಕೆ ಹೆಸರುವಾಸಿಯಾದ ಆಟಗಾರ. ಇತ್ತೀಚಿನ ಪಂದ್ಯಗಳಲ್ಲಿ ಅವರು ಆಡುವ ಬ್ಯಾಟಿಂಗ್ ಧಾಟಿಯನ್ನು ಕಂಡರೆ, ಎದುರಾಳಿಗಳಿಗೆ ನಡುಕು ಹುಟ್ಟಿಸುವ ಹಾಗೆ ಇದೆ. ದಿನೇಶ್ ಕಾರ್ತಿಕ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಅಲ್ಲದೆ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.
ಗ್ಲೇನ್ ಫ್ಲಾಪ್
ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಇನ್ನೂ ಪಾರ್ಟಿಗೆ ಜಾಯಿನ್ ಆಗಿಲ್ಲ. ಒಂದೊಮ್ಮೆ ಇವರು ಸಹ ಲಯಕ್ಕೆ ಮರಳಿದರೆ, ಗೆಲುವಿನಲ್ಲಿ ಅಬ್ಬರಿಸಬಲ್ಲರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಫೇಲ್ ಆಗುತ್ತಿರುವ ಮ್ಯಾಕ್ಸ್‌ವೆಲ್ ಮ್ಯಾನೇಜ್ಮೆಂಟ್‌ಗೆ ನುಂಗಲಾರದ ತುತ್ತಾಗಿದ್ದಾರೆ. ಇವರದ್ದೇ ದೇಶದ ಕ್ಯಾಮರೂನ್ ಗ್ರೀನ್ ತಮ್ಮ ಜವಾಬ್ದಾರಿಯನ್ನು ಅರಿತು ಕೊಂಡು ಆಡಿದರೆ, ಆರ್‌ಸಿಬಿ ಪ್ಲೇ ಆಫ್ ಸನಿಹಕ್ಕೆ ಬಂದು ನಿಲ್ಲಲಿದೆ.

ಲಯ ಕಂಡುಕೊಂಡ ಪೇಸರ್ಸ್
ಗುಜರಾತ್ ವಿರುದ್ಧ ಚಿನ್ನಸ್ವಾಮಿ ಅಂಗಳದಲ್ಲಿ ಬೆಂಗಳೂರು ತಂಡದ ಪೇಸ್ ಬೌಲರ್ಸ್ ಲಯಕ್ಕೆ ಮರಳಿದ್ದಾರೆ. ಇದೇ ಪ್ರದರ್ಶನವನ್ನು ಧರ್ಮಶಾಲಾದಲ್ಲಿ ನೀಡುವ ಅವಶ್ಯಕತೆ ಇದೆ. ಯಶ್ ದಯಾಳ್ ಹಿಂದಿನ ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸಿ, ರನ್ ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಸಿರಾಜ್ ತಮ್ಮ ಶಿಸ್ತು ಬದ್ಧ ದಾಳಿ ಸಂಘಟಿಸುವ ಅನಿವಾರ್ಯತೆ ಇದೆ.
ಆರಂಭದಲ್ಲಿ ಸ್ಪಿನ್ ಬೌಲಿಂಗ್‌ನಲ್ಲಿ ಕೊಂಚ ವೀಕ್ ಆಗಿದ್ದ ಆರ್‌ಸಿಬಿ ಈಗ ಬ್ಯಾಲೆನ್ಸ್ ರೀತಿ ಕಾಣುತ್ತಿದೆ. ಸ್ವಪ್ಮಿಲ್ ಸಿಂಗ್, ಕರಣ್ ಶರ್ಮಾ, ಗ್ಲೇನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್ ಚೆಂಡನ್ನು ತಿರುಗಿಸುವ ಕ್ಷಮತೆ ಹೊಂದಿದ್ದಾರೆ. ಈ ಎಲ್ಲ ಆಟಗಾರರು ಮಿಂಚಿದರೆ ಆರ್‌ಸಿಬಿ ಪ್ಲೇ ಆಫ್












Click it and Unblock the Notifications