ಆರ್‌ಸಿಬಿ ಗೆಲುವಿನ ರಿಯಲ್ ಹೀರೋ ‘DK’ ಸಾಹೇಬ!
'ಆರ್‌ಸಿಬಿ' ಬೆಂಗಳೂರು ತಂಡದ ಮೇಲಿನ ಪ್ರೀತಿಗೆ ಕೋಟಿ ಕೋಟಿ ಅಭಿಮಾನಿಗಳು ಜೀವ ಬಿಡುತ್ತಾರೆ. ಹೀಗೆ ನಿನ್ನೆ ಆರ್‌ಸಿಬಿ ತಂಡ ಐಪಿಎಲ್ 2024 (IPL 2024)ರ ಮೊದಲ ಮ್ಯಾಚ್ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಮತ್ತೊಮ್ಮೆ ದಿನೇಶ್ ಕಾರ್ತಿಕ್ ಅವರು ಕನ್ನಡಿಗರ ಆಸೆ & ಆಕಾಂಕ್ಷೆ ನಿಜ ಮಾಡಿದ್ದಾರೆ. ಈ ಮೂಲಕ ದಿನೇಶ್ ಕಾರ್ತಿಕ್ ಅವರು, ಈಗ ಕನ್ನಡಿಗರಿಗೆ ಮತ್ತೊಮ್ಮೆ ಹೀರೋ ಆಗಿದ್ದಾರೆ! ಆರ್‌ಸಿಬಿ 'ಡಿಕೆ' ಸಾಹೇಬರ ಸಂಪೂರ್ಣ ಸ್ಟೋರಿ ಇಲ್ಲಿದೆ ಮುಂದೆ ಓದಿ.
ಹೌದು, ದಿನೇಶ್ ಕಾರ್ತಿಕ್ ತಮ್ಮ ಜೀವನದಲ್ಲಿ ಎಷ್ಟೆಲ್ಲಾ ನೋವು ಅನುಭವಿಸಿದ್ದರು ಕೂಡ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟಿಗೆ ಕಂಬ್ಯಾಕ್ ಮಾಡಿದ್ದರು. ಅದರಲ್ಲೂ ಇನ್ನೇನು ಡಿಕೆ ಕ್ರಿಕೆಟ್ ಜಗತ್ತಿನಿಂದ ಸಂಪೂರ್ಣವಾಗಿ ಹೊರಗೆ ಹೋದರು ಅನ್ನುವಾಗಲೇ, ಭಾರತ ತಂಡಕ್ಕೆ ಹೀರೋ ಆಗಿದ್ದರು. ಇಂತಿಪ್ಪ ಡಿಕೆ ಸಾಹೇಬರು ಅಂದ್ರೆ ದಿನೇಶ್ ಕಾರ್ತಿಕ್ ಅವರು ಇದೀಗ ಮತ್ತೊಮ್ಮೆ ಆರ್‌ಸಿಬಿ ತಂಡಕ್ಕೆ ನೆರವಾಗಿದ್ದಾರೆ. ನಿನ್ನೆ ದಿನೇಶ್ ಕಾರ್ತಿಕ್ ಅವರು ಆರ್‌ಸಿಬಿ ಪರವಾಗಿ 3 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ ಕೇವಲ 10 ಬಾಲ್‌ಗೆ 28 ರನ್ ಗಳಿಸಿದರು. ಈ ಮೂಲಕ ಆರ್‌ಸಿಬಿ ಬೆಂಗಳೂರು ತಂಡಕ್ಕೆ ಹೀರೋ ಆದರು ದಿನೇಶ್ ಕಾರ್ತಿಕ್ ಅವರು.

ಡಿಕೆ.. ಡಿಕೆ.. ಡಿಕೆ..
ಆರ್‌ಸಿಬಿ ತಂಡವು ನಿನ್ನೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬೀಗಿತ್ತು. 2ನೇ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲುವ ವಿಶ್ವಾಸದಲ್ಲೇ ಮುನ್ನುಗ್ತಿತ್ತು. ಆದರೆ ಪಂಜಾಬ್ ಕಿಂಗ್ಸ್ ಕೂಡ ಉತ್ತಮವಾಗಿ ಆಡಿದ ಪರಿಣಾಮ, ಸವಾಲಿನ ಮೊತ್ತವನ್ನೇ ಆರ್‌ಸಿಬಿ ತಂಡಕ್ಕೆ ನೀಡಿದ್ದರು. ಆ ಬಳಿಕ ಆರ್‌ಸಿಬಿ ಬೆಂಗಳೂರು ತಂಡದ ಆಟಗಾರರು 2ನೇ ಇನ್ನಿಂಗ್ಸ್‌ನಲ್ಲಿ ರನ್ ಗಳಿಸಲು ಪರದಾಡುವ ಸ್ಥಿತಿ ಇತ್ತು. ಆದರೆ ಆಗ ವಿರಾಟ್ ಕೊಹ್ಲಿ ಅವರು ಪಂಜಾಬ್ ತಂಡದ ಪ್ರತಿ ಬಾಲ್ ಚಚ್ಚಿ ಬಿಸಾಡಿದರು. ಹೀಗಿದ್ದಾಗ ವಿರಾಟ್ ಕೊಹ್ಲಿ 77 ರನ್ ಗಳಿಸಿ ಔಟಾಗಿ ಹೋದರು. ಇನ್ನು ಇಂತಹ ಸಮಯದಲ್ಲಿ ಆರ್‌ಸಿಬಿ ಬೆನ್ನಿಗೆ ನಿಂತಿದ್ದೇ ದಿನೇಶ್ ಕಾರ್ತಿಕ್ ಅವರು.
177 ರನ್ ಗುರಿ ನೀಡಿದ್ದರು
ಆರ್‌ಸಿಬಿ ತಂಡ ಟಾಸ್ ಗೆದ್ದು, ಮೊದಲಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಂತರ ಪಂಜಾಬ್ ತಂಡಕ್ಕೆ ಆರಂಭದಲ್ಲೇ ಆಘಾತ ಸಿಕ್ಕಿತ್ತು. ಟಾಸ್ ಸೋತಿದ್ದ ಪಂಜಾಬ್, ಮೊದಲ ವಿಕೆಟ್ ಬೇಗ ಕಳೆದುಕೊಂಡಿತ್ತು. ಆದರೆ ಆ ನಂತರ ಶಿಖರ್ ಧವನ್ ಕೊಂಚ ಚೇತರಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ಪಂಜಾಬ್ ತಂಡ ಕಂಬ್ಯಾಕ್ ಮಾಡಿತ್ತು. ಅಂತು ಇಂತೂ ಈ ತಂಡ ಭರ್ಜರಿ 176 ರನ್ ಗಳಿಸಿತ್ತು. ಹೀಗೆ 177 ರನ್ ಗುರಿ ಬೆನ್ನತ್ತಿದ್ದ ಆರ್‌ಸಿಬಿ ತಂಡಕ್ಕೆ, ಗೆಲುವು ಸುಲಭವಾಗಿ ಸಿಗಲೇ ಇಲ್ಲ. ಆದರೆ ವಿರಾಟ್ ಕೊಹ್ಲಿ ಗೆಲುವನ್ನು ಬಿಟ್ಟು ಕೊಡಲೇ ಇಲ್ಲ. ಮತ್ತೊಂದು ಕಡೆ ದಿಕೆ ಸಾಹೇಬ್ ಅಂದ್ರೆ ದಿನೇಶ್ ಕಾರ್ತಿಕ್ ಅಂತಿಮ ಹಂತದಲ್ಲಿ ತಂಡಕ್ಕೆ ನೆರವಾದರು.
ಆರ್‌ಸಿಬಿ ತಂಡ ಇನ್ನೇನು ಗೆಲುವಿನ ಸಮೀಪಕ್ಕೆ ಬಂದು ಪರದಾಡುತ್ತಿತ್ತು. ಆಗ, ದಿನೇಶ್‌ಗೆ ಬ್ಯಾಟ್ ಸಿಕ್ಕಿತ್ತು. ಇನ್ನು ಪಂಜಾಬ್ ಬೌಲರ್‌ಗಳ ಬೆವರು ಇಳಿಸಿದ ದಿನೇಶ್ ಕಾರ್ತಿಕ್ ಅವರು ವೇಗವಾಗಿ ರನ್ ಗಳಿಸಿದರು. ಅದರಲ್ಲೂ ಪಂಜಾಬ್ ಬೌಲರ್‌ಗಳ ರಣತಂತ್ರ ಪೀಸ್, ಪೀಸ್ ಮಾಡಿ ಆರ್‌ಸಿಬಿ ಗೆಲುವಿನ ನಗೆ ಬೀರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪೈಕಿ ದಿನೇಶ್ ಕಾರ್ತಿ ಅವರು 10 ಬಾಲ್ ಆಡಿ ಗಳಿಸಿದ 28 ರನ್‌ನಲ್ಲಿ ಬಾರಿಸಿದ 2 ಸಿಕ್ಸರ್ ಭರ್ಜರಿ ಲಾಭ ತಂದುಕೊಟ್ಟಿತ್ತು. ಈ ಮೂಲಕ ದಿನೇಶ್ ಕಾರ್ತಿಕ್ ಅವರು ಮತ್ತೊಮ್ಮೆ ತಾವು ಯಾಕೆ ಈಗಲೂ ಗ್ರೇಟ್ ಫಿನಿಶರ್? ಅನ್ನೋದನ್ನ ಜಗತ್ತಿಗೆ ತೋರಿಸಿದ್ದಾರೆ.












Click it and Unblock the Notifications