RCB Vs PBKS: ಆರ್‌ಸಿಬಿ ಬೌಲರ್‌ನನ್ನು ಕಸಕ್ಕೆ ಹೋಲಿಸಿದ ಮುರಳಿ ಕಾರ್ತಿಕ್; ಅಭಿಮಾನಿಗಳ ಆಕ್ರೋಶ
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬೌಲರ್ ಯಶ್ ದಯಾಳ್ ಅತ್ಯುತ್ತಮ ಪ್ರದರ್ಶನ ನೀಡಿದರು. ಮೊದಲ ಮೂರು ಓವರ್ ನಲ್ಲಿ ಕೇವಲ 10 ರನ್ ನೀಡಿದ್ದರು, ಅವರ ಬೌಲಿಂಗ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಯಶ್ ದಯಾಳ್ ಬೌಲಿಂಗ್ ಅವರ ಬೌಲಿಂಗ್ ಅನ್ನು ಹೊಗಳುವ ಭರದಲ್ಲಿ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಮುರಳಿ ಕಾರ್ತಿಕ್ ನಾಲಿಗೆ ಹರಿಬಿಟ್ಟಿದ್ದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಯಶ್ ದಯಾಳ್ ಬಗ್ಗೆ ಮಾತನಾಡುತ್ತಾ, "ಒಬ್ಬರ ಕಸ, ಮತ್ತೊಬ್ಬರ ನಿಧಿ" (Someone's Trash is Someone's Treasure) ಎಂದು ಹೇಳಿದ್ದು, ಅಭಿಮಾನಿಗಳು ಕೋಪಗೊಂಡಿದ್ದಾರೆ.

ಡ್ಯಾನಿಶ್ ಸೇಟ್ ಟ್ವೀಟ್
ಮುರಳಿ ಕಾರ್ತಿಕ್ ಅವರ ಹೇಳಿಕೆ ಬಗ್ಗೆ ಆರ್‌ಸಿಬಿ ಫ್ರಾಂಚೈಸಿಯ ಭಾಗವಾಗಿರುವ ಡ್ಯಾನಿಶ್ ಸೇಟ್ ಅಸಮಾಧಾನಗೊಂಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "ಒಬ್ಬರ ಕಸವನ್ನು ಮತ್ತೊಬ್ಬರ ನಿಧಿ ಎಂದು ನೀವು ಹೇಗೆ ಹೇಳುತ್ತೀರಿ? ನೀವು ಈಗಷ್ಟೇ ಯಶ್ ದಯಾಳ್‌ರನ್ನು ಕಸ ಎಂದು ಹೇಳಿದಿರಿ. ಏನಿದು?" ಎಂದು ಪ್ರಶ್ನೆ ಮಾಡಿದ್ದಾರೆ.
How do you say someone’s trash is someone’s treasure? You just called Yash Dayal Trash on air! Like what even?
— Danish Sait (@DanishSait) March 25, 2024
ಮತ್ತೊಬ್ಬರು ಈ ಬಗ್ಗೆ ಪೋಸ್ಟ್ ಮಾಡಿದ್ದು, ಏನಾದರೂ ಆಗಲಿ, ಯಶ್ ದಯಾಳ್‌ರನ್ನು ಕಸ ಎಂದು ಕರೆಯುವುದನ್ನು ಒಪ್ಪಲು ಸಾಧ್ಯವಿಲ್ಲ. ನೀವೇಗೆ ಒಬ್ಬರನ್ನು ಕಸ ಎಂದು ಕರೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
Whatever murali Karthik said for Yash dayal is not acceptable like how can you call someone trash ??#IPL2024 #RCBvPBKS #MuraliKarthik
— Prajwal (@Prajwal2742) March 25, 2024
ವಿಘ್ನೇಶ್ ಕುಮಾರ್ ಎನ್ನುವವರು ಟ್ವೀಟ್ ಮಾಡಿದ್ದು, ಯಶ್ ದಯಾಳ್ ಬಗ್ಗೆ ಮುರಳಿ ಹೇಳಿಕೆಗೆ ಹಲವರು ಆಕ್ರೋಶಗೊಂಡಿದ್ದಾರೆ. ಇದು ಇಂಗ್ಲಿಷ್‌ನಲ್ಲಿ ಬಹಳ ಸಾಮಾನ್ಯವಾದ ಮಾತು ಮತ್ತು ಅವರು ಯಶ್‌ಗೆ ಯಾವುದೇ ಅಗೌರವವನ್ನು ಸೂಚಿಸಲಿಲ್ಲ. ವಾಸ್ತವವಾಗಿ ಅವನನ್ನು ಹೊಗಳುತ್ತಿದ್ದರು. ನೀವು ಪ್ರತಿ ಪದವನ್ನು ಅಕ್ಷರಶಃ ತೆಗೆದುಕೊಳ್ಳಲು ಸಾಧ್ಯವಿಲ್ಲ." ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
So many people getting furious at Murali's statement about Yash Dayal.
— Vignesh Kumar (@Vignesh__CV) March 25, 2024
It's a very common saying in English and he did not mean any disrespect to Yash. Infact he was praising him.
You can't take every word literally.#RCB
ಯಶ್ ದಯಾಳ್ ಪ್ರದರ್ಶನಕ್ಕೆ ಮೆಚ್ಚುಗೆ
2023ರ ಐಪಿಎಲ್ ಪಂದ್ಯಾವಳಿಯಲ್ಲಿ ಯಶ್ ದಯಾಳ್ ಗುಜರಾತ್ ಟೈಟಾನ್ಸ ತಂಡಕ್ಕಾಗಿ ಆಡಿದ್ದರು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಬ್ಯಾಟರ್ ರಿಂಕು ಸಿಂಗ್ ಯಶ್ ದಯಾಲ್ ಅವರಿಗೆ ಒಂದೇ ಓವರ್ ನಲ್ಲಿ 5 ಸಿಕ್ಸರ್ ಸಿಡಿಸಿದ್ದರು. 2024ರ ಐಪಿಎಲ್ ಹರಾಜಿಗೆ ಮುನ್ನ ಗುಜರಾತ್ ಟೈಟಾನ್ಸ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಆರ್ ಸಿಬಿ ಅವರನ್ನು ಖರೀದಿ ಮಾಡಿತ್ತು.
ಮೊದಲ ಎರಡು ಪಂದ್ಯದಲ್ಲಿ ಯಶ್ ದಯಾಳ್ ಅವರು ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಅದರಲ್ಲೂ ಪಂಜಾಬ್ ಕಿಂಗ್ಸ್ ವಿರುದ್ಧ 4 ಓವರ್ ಗಳಲ್ಲಿ 23 ರನ್ ನೀಡಿ 1 ವಿಕೆಟ್ ಪಡೆದರು. ಅವರ ಪ್ರದರ್ಶನ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications