RCB Vs MI: ಆರ್‌ಸಿಬಿ ವಿರುದ್ಧ ಪಂದ್ಯಕ್ಕೆ ಮುನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಸ್ಫೋಟಕ ಬ್ಯಾಟರ್ ಸೇರ್ಪಡೆ
2024 ಐಪಿಎಲ್ ಪಂದ್ಯಾವಳಿಯಲ್ಲಿ ಸತತ ಮೂರು ಸೋಲುಗಳ ಬಳಿಕ ಮೊದಲ ಪಂದ್ಯ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತಷ್ಟು ಬಲ ಬಂದಿದೆ. ಗಾಯಗೊಂಡಿರುವ ವಿಷ್ಣು ವಿನೋದ್ ಬದಲಾಗಿ ಹಾರ್ವಿಕ್ ದೇಸಾಯಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಬ್ಯಾಟರ್ ವಿಷ್ಣು ವಿನೋದ್ ತೋಳಿನ ಗಾಯದಿಂದ ಮರಳುತ್ತಿದ್ದು, ಅವರನ್ನು ಈ ಆವೃತ್ತಿಯಲ್ಲಿ ತಂಡದಿಂದ ಹೊರಗುಳಿದಿದ್ದಾರೆ. ಸೌರಾಷ್ಟ್ರ ವಿಕೆಟ್ ಕೀಪರ್ ಬ್ಯಾಟರ್ ಹಾರ್ವಿಕ್ ದೇಸಾಯಿ ತಂಡವನ್ನು ಸೇರಿಕೊಂಡಿದ್ದಾರೆ.

24 ವರ್ಷದ ಹಾರ್ವಿಕ್ ದೇಸಾಯಿ ಕೂಡ ಸ್ಫೋಟಕ ಬ್ಯಾಟರ್ ಆಗಿದ್ದಾರೆ. ಟಿ20, ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಅವರು ಶತಕ ಸಿಡಿಸಿದ್ದಾರೆ. 2018ರಲ್ಲಿ ವಿಶ್ವಕಪ್ ಗೆದ್ದ ಭಾರತ U19 ತಂಡದ ಸದಸ್ಯರಾಗಿದ್ದರು.
ಹಾರ್ವಿಕ್ ದೇಸಾಯಿ ಟಿ20 ಅಂಕಿಅಂಶ
ಹಾರ್ವಿಕ್ ದೇಸಾಯಿ 27 ಟಿ20 ಪಂದ್ಯಗಳನ್ನಾಡಿದ್ದು 134.17 ಸ್ಟ್ರೈಕ್‌ರೇಟ್ ಮತ್ತು 30.04 ಸರಾಸರಿಯಲ್ಲಿ 691 ರನ್ ಗಳಿಸಿದ್ದಾರೆ. ಅಜೇಯ 104 ರನ್ ಗಳಿಸಿರುವುದು ಅವರ ಅತ್ಯಧಿಕ ಮೊತ್ತವಾಗಿದೆ. 40 ಲಿಸ್ಟ್ ಎ ಪಂದ್ಯಗಳನ್ನಾಡಿದ್ದು 35.28 ಸರಾಸರಿಯಲ್ಲಿ 1341 ರನ್ ಸಿಡಿಸಿದ್ದಾರೆ. 46 ಪ್ರಥಮ ದರ್ಜೆ ಪಂದ್ಯಗಳಲ್ಲಿ 33.64 ಸರಾಸರಿಯಲ್ಲಿ 2658 ರನ್ ಗಳಿಸಿದ್ದಾರೆ.
ದೇಶೀಯ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಕಾರಣ ಮುಂಬೈ ಇಂಡಿಯನ್ಸ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಇಶಾನ್ ಕಿಶನ್ ಸದ್ಯ ಮುಂಬೈನ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದು, ಹಾರ್ವಿಕ್ ದೇಸಾವಿ ಅವರು ತಂಡದಲ್ಲಿದ್ದರೂ, ಆಡುವ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ.
ಆರ್ ಸಿಬಿ ವಿರುದ್ಧ ಪಂದ್ಯ
ಗುರುವಾರ ಮುಂಬೈ ಇಂಡಿಯನ್ಸ್ ತಂಡ ತವರಿನ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಇದುವರೆಗೆ ಮೊದಲ ಗೆಲುವನ್ನು ಮಾತ್ರ ನೋಡಿದ್ದು, ಎರಡನೇ ಜಯದ ಹುಡುಕಾಟದಲ್ಲಿವೆ.
ಆರ್ ಸಿಬಿ ಇದುವರೆಗೂ ಆಡಿರುವ ಐದು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ.












Click it and Unblock the Notifications