RCB vs KKR: 3 ವರ್ಷಗಳ ಬಳಿಕ ಐಪಿಎಲ್ ಪಂದ್ಯ ಆಯೋಜಿಸಲು ಐತಿಹಾಸಿಕ ಈಡನ್ ಗಾರ್ಡನ್ ಸಜ್ಜು
ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಸೆಣೆಸಾಟ ನಡೆಯಲಿದೆ. ಈ ಪಂದ್ಯ ಕೊಲ್ಕತ್ತಾದ ಐತಿಹಾಸಿಕ ಕ್ರೀಡಾಂಗಣವಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿದ್ದು ಮೂರು ವರ್ಷಗಳ ಬಳಿಕ ಈಡನ್ ಗಾರ್ಡನ್ ಕ್ರೀಡಾಂಗಣ ಐಪಿಎಲ್ ಪಂದ್ಯದ ಆಯೋಜನೆಗೆ ಸಿದ್ಧವಾಗಿದೆ. ಈ ಪಂದ್ಯಕ್ಕಾಗಿ ಈಡನ್ ಗಾರ್ಡನ್ ಕ್ರೀಡಾಂಗಣವನ್ನು ವರ್ಣರಂಜಿತವಾಗಿ ಸಜ್ಜುಗೊಳಿಸಲಾಗಿದೆ.
ಸುದೀರ್ಘ ಕಾಲದ ಬಳಿಕ ತವರಿನಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕಾಗಿ ಕೆಕೆಆರ್ 'ಹೋಮ್ ಕಮಿಂಗ್' ಅಭಿಯಾನವನ್ನು ನಡೆಸಿದ್ದು ಅಭಿಮಾನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಕರೆತರಲು ಪ್ರಯತ್ನ ನಡೆಸಿದೆ. "ತವರಿಗೆ ನಾವು ಮರಳುತ್ತಿದ್ದೇವೆ. ನಾವು ಕೆಕೆಆರ್" ಎಂಬ ಘೋಷಣೆಯೊಂದಿಗೆ ಅಭಿಮಾನಿಗಳನ್ನು ಸೆಳೆಯುತ್ತಿದೆ. ಅಲ್ಲದೆ ಕ್ರೀಡಾಂಗಣ ಕೂಡ ಈ ಪಂದ್ಯಕ್ಕಾಗಿ ವಿಶೇಷವಾಗಿ ಸನ್ನಧವಾಗಿದೆ.

ಈ ಬಗ್ಗೆ ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರು ಪ್ರತಿಕ್ರಿಯಿಸಿದ್ದು ತವರಿಗೆ ವಾಪಸಾಗುತ್ತಿರುವ ಈ ಸಂದರ್ಭವನ್ನು ಕೆಕೆಆರ್ ತಂಡ ಹಾಗೂ ಆಭಿಮಾನಿಗಳು ಜೊತೆಯಾಗಿ ಸಂಭ್ರಮಿಸಲು ಈ ಅಭಿಯಾನ ನಡೆಸಲಾಗಿದೆ. ಕೊಲ್ಕತ್ತಾ ನಗರಕ್ಕೆ ಮರಳುತ್ತಿರುವುದರ ಸಂಭ್ರಮವನ್ನು ನಾವು ಈ ರೀತಿಯಾಗಿ ವ್ಯಕ್ತಪಡಿಸಲಿದ್ದೇವೆ ಎಂದಿದ್ದಾರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸಿಇಒ.
ICC ODI Ranking: ಏಕದಿನ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡ ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್
"ನಮಗೆ ಇಷ್ಟು ವರ್ಷಗಳಲ್ಲಿ ಅಭಿಮಾನಿಗಳು ನೀಡಿರುವ ಬೆಂಬಲ ಅಭೂತಪೂರ್ವವಾದದ್ದು. ಅದಕ್ಕಾಗಿ ನಾವು ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ನಾವು ಈಡನ್ ಗಾರ್ಡನ್‌ನಲ್ಲಿ ಆಡುವುದಕ್ಕೂ ಮುನ್ನ ನಮ್ಮೆಲ್ಲರಲ್ಲೂ ವಿಶೇಷವಾದ ಹುರುಪು ಶಕ್ತಿ ಬಂದಿದೆ. ಶ್ರೇಷ್ಠ ಆವೃತ್ತಿಗಾಗಿ ನಾವು ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸಿಇಒ ವೆಂಕಿ ಮೈಸೂರು.
ಇನ್ನು ಈ ಬಾರಿಯ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದ್ದು ಡಕ್ವರ್ತ್ ಲೂಯಿಸ್ ನಿಯಮದಲ್ಲಿ ಸೋಲು ಕಂಡಿದೆ. ನಿತೀಶ್ ರಾಣಾ ನೇತೃತ್ವದಲ್ಲಿ ತವರಿನಲ್ಲಿ ಮಿಂಚಲು ಕೆಕೆಆರ್ ಈಗ ಸಿದ್ಧವಾಗಿದ್ದು ಪ್ರೇಕ್ಷಕರ ಸಮ್ಮುಖದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇತ್ತ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನಲ್ಲಿ ಭರ್ಜರಿ ಆರಂಭವನ್ನು ಪಡೆದುಕೊಂಡಿದ್ದು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವಿನಿಂದಿಗೆ ಶುಭಾರಂಭ ಮಾಡಿದೆ. ಕೆಕೆಆರ್ ತನ್ನ ತವರಿನಲ್ಲಿ ನೀಡಲಿರುವ ಸವಾಲನ್ನು ಯಾವ ರೀತಿಯಾಗಿ ಎದುರಿಸಲಿದೆ ಎಂಬುದು ಈಗ ಇರುವ ಪ್ರಶ್ನೆ.
ಇನ್ನು ಈಡನ್ ಗಾರ್ಡನ್‌ನಲ್ಲಿ ಆರ್‌ಸಿಬಿ ವಿರುದ್ಧ ಕೆಕೆಆರ್ ಮೇಲುಗೈ ಸಾಧಿಸಿದ ಇತಿಹಾಸ ಹೊಂದಿದೆ. ಆಡಿರುವ 10 ಪಂದ್ಯಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಟ್ಟಾರೆಯಾಗಿಯೂ ಆರ್‌ಸಿಬಿ ವಿರುದ್ಧ ಕೆಕೆಆರ್ ಮೇಲುಗೈ ಸಾಧಿಸಿದ್ದು 31 ಪಂದ್ಯಗಳಲ್ಲಿ 17ರಲ್ಲಿ ಕೆಕೆಆರ್ ಗೆದ್ದಿದ್ದರೆ 14ರಲ್ಲಿ ಆರ್‌ಸಿಬಿ ಗೆದ್ದುಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಮಹಿಪಾಲ್ ಲೋಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಮೈಕೆಲ್ ಬ್ರೇಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ಫಿನ್ ಅಲೆನ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಆಕಾಶ್ ದೀಪ್, ಅವಿನಾಶ್ ಸಿಂಗ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ರಾಜನ್ ಕುಮಾರ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ಸೋನು ಯಾದವ್, ರೀಸ್ ಟೋಪ್ಲಿ
ಕೊಲ್ಕತ್ತಾ ನೈಟ್ ರೈಡರ್ಸ್: ನಿತೀಶ್ ರಾಣಾ (ನಾಯಕ), ವರುಣ್ ಚಕ್ರವರ್ತಿ, ಲಾಕಿ ಫರ್ಗುಸನ್, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಹರ್ಷಿತ್ ರಾಣಾ, ಅನುಕುಲ್ ರಾಯ್, ಆಂಡ್ರೆ ರಸೆಲ್, ರಿಂಕು ಸಿಂಗ್, ಟಿಮ್ ಸೌಥಿ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ವೈಭವ್ ಅರೋರಾ, ಎನ್ ಜಗದೀಸನ್, ಸುಯಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಲಿಟನ್ ದಾಸ್, ಮನ್‌ದೀಪ್ ಸಿಂಗ್, ಜೇಸನ್ ರಾಯ್, ಶ್ರೇಯಸ್ ಅಯ್ಯರ್ (ಗಾಯಾಳು).












Click it and Unblock the Notifications