Get Updates
Get notified of breaking news, exclusive insights, and must-see stories!

Will Jacks: 6 ನಿಮಿಷಗಳಲ್ಲೇ 50 ರನ್; ಗೇಲ್ ದಾಖಲೆ ಕೂಡ ಮುರಿದ ವಿಲ್ ಜ್ಯಾಕ್ಸ್

ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್ ವಿಲ್ ಜಾಕ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. 41 ಎಸೆತಗಳಲ್ಲೇ ಶತಕ ಸಿಡಿಸಿದ ಅವರು ಆರ್​ಸಿಬಿ ತಂಡಕ್ಕೆ 9 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು.

ವಿಲ್‌ ಜ್ಯಾಕ್ಸ್ ಅಬ್ಬರದ ಶತಕದಿಂದ ಹಲವು ದಾಖಲೆಗಳನ್ನು ಸರಿಗಟ್ಟಿದರು. 31 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಅವರು ಬಳಿಕ ಕೇವಲ 10 ಎಸೆತಗಳಲ್ಲಿ 50 ರನ್ ಸಿಡಿಸಿ ಶತಕ ಪೂರೈಸಿದರು. ತಮ್ಮ ಈ ಇನ್ನಿಂಗ್ಸ್‌ನಲ್ಲಿ ಕ್ರಿಸ್‌ ಗೇಲ್ ದಾಖಲೆ ಮುರಿದರು.

RCB Vs GT Will Jacks breaks Chris Gayle s all-time IPL record with stunning hundred

ವಿಲ್ ಜ್ಯಾಕ್ಸ್ ತಮ್ಮ ಕೊನೆಯ 10 ಎಸೆತಗಳಲ್ಲಿ 6, 2, 6, 4, 0, 6, 6, 4, 6, 6 ಹೊಡೆದರು ಮತ್ತು 54 ರಿಂದ ಕೇವಲ 10 ಎಸೆತಗಳಲ್ಲಿ ಶತಕದ ಸಾಧನೆ ಮಾಡಿದರು. 2013 ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧದ ಕ್ರಿಸ್ ಗೇಲ್ ಐವತ್ತರಿಂದ ಕೇವಲ 13 ಎಸೆತಗಳಲ್ಲಿ 100 ರನ್ ತಲುಪಿದ್ದರು. ಗೇಲ್ ಇಲ್ಲಿಯವರೆಗೆ ಹೊಂದಿದ್ದ ದಾಖಲೆಯನ್ನು ವಿಲ್ ಜ್ಯಾಕ್ಸ್ ಮುರಿದರು.

6 ನಿಮಿಷಗಳಲ್ಲೇ ಅರ್ಧಶತಕದಿಂದ ಶತಕ

ಐಪಿಎಲ್ ಇತಿಹಾಸದಲ್ಲಿ 200 ರನ್‌ಗಳ ಮೊತ್ತವನ್ನು ವೇಗವಾಗಿ ಬೆನ್ನಟ್ಟಿದ ದಾಖಲೆಯನ್ನು ಕೂಡ ಆರ್ ಸಿಬಿ ಮಾಡಿದೆ. ಜ್ಯಾಕ್ಸ್ ಅವರ ಅಬ್ಬರದ ಶತಕದ ನೆರವಿನಿಂದ 16 ಓವರ್ ಗಳಲ್ಲಿ 201 ರನ್‌ಗಳನ್ನು ಬೆನ್ನಟ್ಟಿದ್ದು, ಹೊಸ ದಾಖಲೆಯಾಗಿದೆ.

ಮತ್ತೊಂದು ವಿಭಿನ್ನ ದಾಖಲೆ ಎಂದರೆ ವಿಲ್ ಜ್ಯಾಕ್ಸ್ ಕೇವಲ 6 ನಿಮಿಷಗಳಲ್ಲಿ ಅರ್ಧಶತಕದಿಂದ ಶತಕ ಪೂರೈಸಿದ್ದು, ಇದು ಕೂಡ ಒಂದು ರೀತಿ ವಿಶ್ವದಾಖಲೆಯೇ ಎನ್ನಬಹುದು.

ಕ್ರಿಸ್ ಗೇಲ್ ಬಳಿಕ ಆರ್​ಸಿಬಿ ಪರವಾಗಿ ದಾಖಲಾದ ವೇಗದ ಶತಕ ಇದಾಗಿದೆ. ಆರ್​ಸಿಬಿ ಪರವಾಗಿ ಆಡಿದ 5ನೇ ಪಂದ್ಯದಲ್ಲೇ ಜ್ಯಾಕ್ಸ್ ಹಲವು ದಾಖಲೆ ಬರೆದಿದ್ದಾರೆ. ಆರಂಭದ ಐದು ಪಂದ್ಯಗಳಲ್ಲಿ ಜ್ಯಾಕ್ಸ್‌ ಬೆಂಚ್ ಕಾದಿದ್ದರು, ಸತತ ಸೋಲಿನ ಬಳಿಕ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿತ್ತು, ಅವಕಾಶ ಸಿಗುತ್ತಿದ್ದಂತೆ ಜ್ಯಾಕ್ಸ್ ಅಬ್ಬರಿಸುತ್ತಿದ್ದಾರೆ.

ಮೊದಲನೇ ಪಂದ್ಯದಲ್ಲಿ ವಿಲ್ ಜ್ಯಾಕ್ಸ್ ಅವರಿಗೆ ಅವಕಾಶ ಸಿಕ್ಕಿದ್ದರೆ ಆರ್ ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಇರುತ್ತಿರಲಿಲ್ಲ ಎಂದು ಅಭಿಮಾನಿಗಳು ಬೇಜಾರಾಗಿದ್ದಾರೆ. ಮುಂದಿನ ವರ್ಷ ಮೆಗಾ ಹರಾಜು ಇದ್ದು, ದಯವಿಟ್ಟು ಜ್ಯಾಕ್ಸ್ ಅವರನ್ನು ತಂಡದಿಂದ ಬಿಡುಗಡೆ ಮಾಡಬೇಡಿ ಎಂದು ಕೂಡ ಅಭಿಮಾನಿಗಳು ಒತ್ತಾಯಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+