ಬೆಂಗಳೂರು; ಆರ್‌ಸಿಬಿ ಅಭಿಮಾನಿಗಳಿಗೆ ಉಚಿತ ಬಿಯರ್, ಡಿಸ್ಕೌಂಟ್‌ನಲ್ಲಿ ಊಟ ನೀಡುವುದಾಗಿ ಪಬ್‌ ಮಾಲೀಕ ಘೋಷಣೆ

RCB Vs DC: ಐಪಿಎಲ್ 2025ರ 46ನೇ ಹೈವೋಲ್ಟೇಜ್‌ ಪಂದ್ಯ ಇಂದು (ಏಪ್ರಿಲ್‌ 27) ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಇನ್ನೂ ಈ ಪಂದ್ಯದಲ್ಲಿ ಆರ್‌ಸಿಬಿ ತಂಡದವ್ರು ವಿಕೆಟ್‌ ತೆಗೆದ್ರೆ, ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿದ್ರೆ ಗ್ರಾಹಕರಿಗೆ ಉಚಿತ ಬಿಯರ್ ಹಾಗೂ ಭಾರೀ ಡಿಸ್ಕೌಂಟ್‌ನಲ್ಲಿ ಊಟ ಕೊಡುವುದಾಗಿ ಬೆಂಗಳೂರಿನ ಪಬ್‌ವೊಂದರ ಮಾಲೀಕರೊಬ್ಬರು ಘೋಷಣೆ ಮಾಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ ಗಮನಿಸಿ.

ಇಂದಿನ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೈವೋಲ್ಟೇಜ್‌ ಪಂದ್ಯ ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ತವರು ಅಂಗಳ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋಲನುಭವಿಸಿದ್ದ ಆರ್‌ಸಿಬಿ ಅದೇ ತಂಡದ ವಿರುದ್ಧ ಗೆಲುವು ಸಾಧಿಸಿ ಸೇಡು ತೀರಿಸಿಕೊಳ್ಳುವ ಹಠದಲ್ಲಿದೆ.

RCB Vs DC A Pub owner announces free beer for RCB Fans in Bengaluru

ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ ಆರ್‌ಸಿಬಿಯು 6 ಗೆದ್ದು ಮೂರರಲ್ಲಿ ಸೋಲನುಭವಿಸಿ ಪಾಯಿಂಟ್ಸ್‌ ಟೇಬಲ್‌ನಲ್ಲಿ 12 ಅಂಕಗಳೊಂದಿಗೆ ಮೂರನೇ ಸ್ಥಾನ ಅಲಂಕರಿಸಿದೆ. ಇಂದಿನ ಪಂದ್ಯದಲ್ಲಿ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಕೆಳಗಿಳಿಸುವ ಚಾಲೆಂಜ್‌ನಲ್ಲಿದೆ.

ಗುಜರಾತ್‌ ಟೈಟಾನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋಲನುಭವಿಸಿದ್ದು ಬಿಟ್ಟರೆ, ಉಳಿದ ಎಲ್ಲಾ ತಂಡಗಳ ಮೇಲೆ ಆಡಿರುವ ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಇದೀಗ ಇಂದಿನ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದು ಸೇಡು ತೀರಿಸಿಕೊಳ್ಳುವ ಛಲದಲ್ಲಿದೆ.

ಮತ್ತೊಂದೆಡೆ ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 6ರಲ್ಲಿ ಗೆದ್ದು, 2ರಲ್ಲಿ ಸೋಲನುಭವಿಸಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 12 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಒಂದು ವೇಳೆ ಇಂದು ಆರ್‌ಸಿಬಿ ವಿರುದ್ಧ ಸೋತರೆ ಡೆಲ್ಲಿ ಕೆಳಗಿಯುದಂತೂ ಖಚಿತ.

Take a Poll

ಇನ್ನು ಐಪಿಎಲ್‌ನಲ್ಲಿ ಅತೀ ಹೆಚ್ಚು ಪಕ್ಕಾ ಅಭಿಮಾನಿಗಳನ್ನು ಹೊಂದಿರುವ ತಂಡ ಅಂದ್ರೆ ಅದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮಾತ್ರ. ಬರೀ ಕರ್ನಾಟಕ ಅ‍ಷ್ಟೇ ಅಲ್ಲದೆ, ದೇಶಾದ್ಯಂತ ಆರ್‌ಸಿಬಿ ಅಭಿಮಾನಿಗಳಿದ್ದಾರೆ. ಅಷ್ಟರ ಮಟ್ಟಿಗೆ ಈ ತಂಡ ಪ್ರಸಿದ್ಧಿ ಪಡೆದಿದೆ. ಈ ತಂಡದಲ್ಲಿ ಯಾರೇ ಮಿಂಚಿದರೂ ಕೂಡ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರೆಸಿಬಿಡುತ್ತಾರೆ. ಆಟಗಾರರು ಕೂಡ ಆರ್‌ಸಿಬಿ ಅಭಿಮಾನಿಗಳ ಪ್ರೀತಿಗೆ ಸೈ ಎನ್ನುತ್ತಿದ್ದಾರೆ. ಬೇರೆ ತಂಡದ ಆಟಗಾರರು ಸಹ ಇದೆಂಥಾ ಅಪ್ಪಟ ಅಭಿಮಾನಿಗಳು ಈ ತಂಡಕ್ಕಿದ್ದಾರೆ.. ಅಬ್ಬಬ್ಬಾ ಅನ್ನುತ್ತಿದ್ದಾರೆ.

ಹಾಗೆಯೇ ಇದೀಗ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಅಬ್ಬರಿಸಿದರೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡುವುದಾಗಿ ಬೆಂಗಳೂರಿನಲ್ಲಿನ ಪಬ್‌ವೊಂದರ ಮಾಲೀಕರೊಬ್ಬರು ಘೋಷಣೆ ಮಾಡಿದ್ದಾರೆ.
ಆರ್‌ಸಿಬಿಯವ್ರು ಒಂದು ವಿಕೆಟ್‌ ತೆಗೆದರೆ 5, ಒಂದೊಂದು ಬೌಂಡರಿ, ಸಿಕ್ಸರ್‌ ಸಿಡಿಸಿದ್ರೆ 1 ಬಿಯರ್ ಉಚಿತ, ಅಷ್ಟೇ ಅಲ್ಲದೆ ಡಿಸ್ಕೌಂಟ್‌ನಲ್ಲಿ ಊಟ ನೀಡುವುದಾಗಿ ಹೇಳಿದ್ದಾರೆ. ವಿಳಾಸವನ್ನು ಸಹ ತಿಳಿಸಿದ್ದಾರೆ.

ಈಗಿನಿನ ಕಾಲದಲ್ಲಿ ಒಂದು ರೂಪಾಯಿ ಕಡಿಮೆ ಇಲ್ಲ ಅಂದರೂ ನಗರ ಪ್ರದೇಶದ ಬಹುತೇಕ ಹೋಟೆಲ್‌ಗಳಲ್ಲಿ ಊಟ ನೀಡುವುದಿಲ್ಲ. ಅಂತಹದ್ದರಲ್ಲಿ ಬೆಂಗಳೂರಿನಲ್ಲಿ ಪಬ್‌ ಮಾಲೀಕರೊಬ್ಬರು ಇಂತಹ ದೊಡ್ಡ ಆಫರ್‌ ಅನ್ನು ಆರ್‌ಸಿಬಿ ಅಭಿಮಾನಿಗಳಿಗೆ ಘೋಷಣೆ ಮಾಡಿ ಗಮನ ಸೆಳೆದಿದ್ದಾರೆ.

ಉಚಿತ ಬಿಯರ್ ಪಡೆಯಬೇಕೇ?: "ಆರ್‌ಸಿಬಿಯವ್ರು ಇಂದು ವಿಕೆಟ್‌ ತೆಗೆದಾಗಲೆಲ್ಲ ನನ್‌ ಕಡೆಯಿಂದ 5 ಬಿಯರ್ ಉಚಿತ. ಅಷ್ಟೇ ಅಲ್ಲ, ಆರ್‌ಸಿಬಿಯವ್ರು ಬೌಂಡರಿ, ಸಿಕ್ಸ್‌ ಬೌಂಡರಿ ಬಾರಿಸಿದ್ರೂ 1 ಬಿಯರ್ ಉಚಿತ. ಇದು ಸಾಕಗಿಲ್ಲವೆಂದರೆ, ಯಾವುದೇ ಫುಡ್‌ ತೆಗೆದುಕೊಂಂಡರೂ 10% ಡಿಸ್ಕೌಂಟ್‌ ನೀಡಲಾಗುತ್ತದೆ. ಲೈವ್‌ ಕ್ರಿಕೆಟ್‌ ಸ್ಕ್ರೀನಿಂಗ್‌, ಡಿಜೆ ಸೌಂಡ್‌, ಸುತ್ತಲೂ ಆರ್‌ಸಿಬಿ ಅಭಿಮಾನಿಗಳು ಇರುತ್ತಾರೆ. ಬೆಂಗಳೂರಿನ ಬೆಲ್‌ ರೋಡ್‌ನಲ್ಲಿರುವ ಡಿ ಫೌಂಡರ್ಸ್‌ ಬ್ರೇವರಿ (The Founders Brewery) ಪಬ್‌ನಲ್ಲಿ ನಮ್ಮ ಪೇಜ್‌ನಿಂದ ನಮ್ಮ ಫಾಲೋವರ್ಸ್‌ಗೋಸ್ಕರ್ ಇದನ್ನು ಆಯೋಜನೆ ಮಾಡಿದ್ದೇವೆ. ಡೆಲ್ಲಿ ಹಾಗೂ ಆರ್‌ಸಿಬಿ ಪಂದ್ಯವನ್ನು ಕುಳಿದತುಕೊಂಡು ಎಂಜಾಯ್ ಮಾಡಿಕೊಂಡು ನೋಡೋಣ. ನೀವು ಇದನ್ನು ಪಡೆಯಬೇಕೆಂದರೆ, @justmadesh ಇನ್ಸ್ಟಾ ಪೇಜ್‌ ಅನ್ನು ಫಲೋ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ 8050083751 ಸಂಪರ್ಕಿಸಬಹುದು," ಎಂದು ಹೇಳಿದ್ದಾರೆ,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+