RCB vs CSK: 18ಕ್ಕೂ ಆರ್‌ಸಿಬಿಗೂ ಅವಿನಾಭಾವ ಸಂಬಂಧ- ಈ ಬಾರಿ ಪ್ಲೇ ಆಫ್‌ ಫಿಕ್ಸ್‌

ಐಪಿಎಲ್‌ 2024 ರೋಚಕ ಘಟ್ಟ ತಲುಪಿದೆ. ಎಲ್ಲ ತಂಡಗಳು ಪ್ಲೇ ಆಫ್ ಲೆಕ್ಕಾಚಾರವನ್ನು ಆರಂಭಿಸಿವೆ. ಆರ್‌ಸಿಬಿ ಸಹ ಪ್ಲೇ ಆಫ್‌ ಕನಸಿನಲ್ಲಿ ಕೂತಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್‌, ಎಸ್‌ಆರ್‌ಎಚ್‌, ಎಲ್‌ಎಸ್‌ಜಿ, ಸಿಎಸ್‌ಕೆ ತಂಡಗಳು ಸಹ ಮುಂದಿನ ಹಂತ ಪ್ರವೇಶಿಸುವ ಕನಸಿನಲ್ಲಿವೆ. ಮೇ.18 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ.

ಮೆ 18 ರಂದು ನಡೆಯುವ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಆರ್‌ಸಿಬಿ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಇನ್ನು ಚೆನ್ನೈ ಸೂಪರ್‌ ಕಿಂಗ್ಸ್‌ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಪ್ಲೇ ಆಫ್‌ಗೆ ಹೋಗಲು ಉಭಯ ತಂಡಗಳಿಗೆ ಈ ಪಂದ್ಯವನ್ನು ಗೆಲ್ಲುವುದು ಬಹಳ ಮುಖ್ಯ. ಈ ಪಂದ್ಯದಲ್ಲಿ ಎರಡು ತಂಡಗಳಲ್ಲಿ ಯಾರು ಸೋತರೂ ಅದು ಪ್ಲೇ ಆಫ್ ರೇಸ್‌ನಿಂದ ಹೊರಗುಳಿಯಲಿದೆ. ಐಪಿಎಲ್ 2024ರ ಲೀಗ್ ಹಂತದಲ್ಲಿ ಉಭಯ ತಂಡಗಳ ಕೊನೆಯ ಪಂದ್ಯವೂ ಇದಾಗಿದೆ.

RCB vs CSK RCB Has Special Relation Ship With May 18 This Year Team Will Go To The Playoff

ಮೇ 18ಕ್ಕೂ ಆರ್‌ಸಿಬಿಗೂ ವಿಶೇಷ ಸಂಬಂಧ

ಚಿನ್ನಸ್ವಾಮಿ ಅಂಗಳದಲ್ಲಿ ಮೇ 18 ರಂದು ಚೆನ್ನೈ ಹಾಗೂ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ವಿಶೇಷವೆಂದರೆ ಮೇ 18 ರಂದು ಆರ್‌ಸಿಬಿ ತಂಡ ಇದುವರೆಗೆ ಒಂದೇ ಒಂದು ಐಪಿಎಲ್ ಪಂದ್ಯವನ್ನು ಸೋತಿಲ್ಲ. ಈ ದಿನಂದು ಆಡಿದ ಎಲ್ಲ ಪಂದ್ಯಗಳನ್ನು ಆರ್‌ಸಿಬಿ ಗೆದ್ದು ಕೊಂಡಿದೆ. ಆರ್‌ಸಿಬಿ ಇದೇ ದಿನ ನಾಲ್ಕು ಬಾರಿ ಎದುರಾಳಿ ವಿರುದ್ಧ ಜಯ ಸಾಧಿಸಿದೆ.

ಮೇ 18ರ ಗೆಲುವಿನ ಲೆಕ್ಕಾಚಾರದ ಪ್ರಯಾಣ ಆರಂಭವಾಗಿದ್ದು, 2013ರ ಚೆನ್ನೈ ವಿರುದ್ಧದ ಪಂದ್ಯದಲ್ಲಿ. ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಓವರ್‌ಗಳಿಗೆ ಕತ್ತರಿ ಬಿದ್ದಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬ್ಯಾಟ್ ಮಾಡಿ 8 ಓವರ್‌ಗಳಲ್ಲಿ 2 ವಿಕೆಟ್‌ಗೆ 106 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಸಿಎಸ್‌ಕೆ 8 ಓವರ್‌ಗಳಲ್ಲಿ 6 ವಿಕೆಟ್‌ಗೆ 82 ರನ್‌ ಸೇರಿಸಿತ್ತು. 2014ರಲ್ಲೂ ಆರ್‌ಸಿಬಿ ತಂಡ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಮಣಿಸಿತ್ತು. 2016ರಲ್ಲಿ ಪಂಜಾಬ್‌ ವಿರುದ್ಧ 113 ರನ್‌ ಗೆಲುವು ದಾಖಲಿಸಿದ್ದ ಆರ್‌ಸಿಬಿ, 2023ರಲ್ಲಿ ಹೈದರಾಬಾದ್‌ ತಂಡವನ್ನು 100 ರನ್‌ಗಳಿಂದ ಮಣಿಸಿತ್ತು.

ಹೇಗಿದೆ ಈ ದಿನ ವಿರಾಟ್ ಅಬ್ಬರ

ಮೇ 18 ರಂದು ವಿರಾಟ್ ಕೊಹ್ಲಿ ಅವರ ಬ್ಯಾಟ್ ಆರ್‌ಸಿಬಿಗೆ ಪರ ಸ್ಥಿರ ಪ್ರದರ್ಶನ ನೀಡಿದೆ. ಅವರು ಇದುವರೆಗೆ ಐಪಿಎಲ್ 2013ರಲ್ಲಿ 56 ರನ್, ಐಪಿಎಲ್ 2014ರಲ್ಲಿ 27 ರನ್, ಐಪಿಎಲ್ 2016ರಲ್ಲಿ 113 ರನ್ ಹಾಗೂ ಐಪಿಎಲ್ 2023ರಲ್ಲಿ ಮೇ 18ರಂದು ಆರ್‌ಸಿಬಿ ಪರ 100 ರನ್ ಗಳಿಸಿದ್ದಾರೆ. ಅದೇನೆಂದರೆ, ಮೇ 18 ರಂದು ಅವರು ಆರ್‌ಸಿಬಿ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡುತ್ತಾರೆ. ಆಗ ಆ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ನಿಶ್ಚಿತ.

RCB vs CSK RCB Has Special Relation Ship With May 18 This Year Team Will Go To The Playoff

ನೆಟ್ ರನ್‌ ರೇಟ್‌ ಲೆಕ್ಕಾಚಾರ

RCB ತಂಡ IPL 2024 ರ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈ ತಂಡ ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದೆ. 7 ಪಂದ್ಯಗಳಲ್ಲಿ ಸೋಲು ಕಂಡಿದೆ. ತಂಡದ ನಿವ್ವಳ ರನ್ ರೇಟ್ ಪ್ಲಸ್ 0.387 ಆಗಿದೆ. RCB ಐಪಿಎಲ್ 2024 ರ ಕೊನೆಯ ಲೀಗ್ ಹಂತದ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಬೇಕಾಗಿದೆ. ಪ್ಲೇಆಫ್‌ಗೆ ತಲುಪಬೇಕಾದರೆ ತಂಡ ಈ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಬೇಕು. ಇದರಿಂದ ಅವರು ನೆಟ್ ರನ್ ರೇಟ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಹಿಂದಿಕ್ಕಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+