ಆರ್‌ಸಿಬಿ Vs ಎಲ್‌ಎಸ್‌ಜಿ: ವಿರಾಟ್ ಕೊಹ್ಲಿ ಡಕ್ ಔಟ್ ಹಿಂದಿದೆ ಒಂದು ಅಚ್ಚರಿ ಸಂಗತಿ

Virat Kohli: ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ಗುರುವಾರ (ಮೇ 7) 2026ರ 50ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಚಕ ಜಯ ದಾಖಲಿಸಿತು. ಈ ಪಂದ್ಯದಲ್ಲಿ ತಾವೇ ಕೊಟ್ಟ ಸಲಹೆಯಿಂದ ವಿರಾಟ್ ಕೊಹ್ಲಿ ಅವರು ಒಂದು ರನ್ ಗಳಿಸದೆ ಪ್ರಿನ್ಸ್ ಯಾದವ್ ಅವರಿಗೆ ವಿಕೆಟ್‌ ಒಪ್ಪಿಸುವ ಮೂಲಕ ಪೆವಿಲಿಯನ್‌ ಕಡೆ ನಡೆದರು. ಈ ಕುರಿತು ಮುರಳಿ ಕಾರ್ತಿಕ್ ನೀಡಿದ ನೀಡಿದ ಮಾಹಿತಿ ಇಲ್ಲಿದೆ ನೋಡಿ.

ಲಕ್ನೋ ಸೂಪರ್ ಜೈಂಟ್ಸ್‌ ತಂಡವು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 6 ರನ್‌ಗಳ ರೋಚಕ ಜಯ ಸಾಧಿಸಿತು. ಇದು ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಎಲ್‌ಎಸ್‌ಜಿ ದಾಖಲಿಸಿದ ಮೂರನೇ ಗೆಲುವಾಗಿದೆ. ವಿಶೇಷ ಅಂದ್ರೆ ಲಕ್ನೋ ಪರ ಪ್ರಿನ್ಸ್ ಯಾದವ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದಾಗ ಪಂದ್ಯವು ಸಂಪೂರ್ಣವಾಗಿ ಲಕ್ನೋ ಪರ ವಾಲಿತು.

RCB Virat Kohli Advice Helped LSG Prince Yadav Dismiss Him Murali Kartik s Remark Goes huge Viral

'ತಾವು ನೀಡಿದ್ದ ಸಲಹೆಯಿಂದ ವಿಕೆಟ್‌ ಒಪ್ಪಿಸಿದ ಕೊಹ್ಲಿ'

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಡಕ್ ಔಟ್ ಔಟ್ ಆಗಿ ಪೆವಿಲಿಯನ್ ಸೇರಿದರು. ಈ ಬಗ್ಗೆ ಮಾತನಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮುರಳಿ ಕಾರ್ತಿಕ್ ಅವರು, "ವಿರಾಟ್‌ ಕೊಹ್ಲಿ ತಾವು ನೀಡಿದ್ದ ಸಲಹೆಯಿಂದ ತಾವೇ ವಿಕೆಟ್‌ ಒಪ್ಪಿಸುವಂತಾಯಿತು," ಎಂದು ಹೇಳಿದ್ದಾರೆ.

"ವಿರಾಟ್ ಕೊಹ್ಲಿ ಈ ಹಿಂದೆ ಯುವ ಸ್ಟಾರ್ ಬೌಲರ್ ಪ್ರಿನ್ಸ್ ಯಾದವ್‌ಗೆ ಕೆಲವು ಬೌಲಿಂಗ್ ಸಲಹೆಗಳನ್ನು ನೀಡಿದ್ದರು. ಈಗ ಅದೇ ಸಲಹೆಯನ್ನು ಬಳಸಿಕೊಂಡು ಅವರು ಕೊಹ್ಲಿ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು," ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು ಬಹುಶಃ ಚೆಂಡು ಕೆಳಮಟ್ಟದಲ್ಲಿ ಬಂದಿತೇ ಎಂದು ಅವರು ನಾನ್-ಸ್ಟ್ರೈಕರ್‌ನಲ್ಲಿ ಬ್ಯಾಟರ್ ಬಳಿ ಕೇಳಿದರು ಎಂದು ನನಗನ್ನಿಸುತ್ತದೆ. ಆದರೆ ಆ ಎಸೆತದಲ್ಲಿ ಅಂತಹದ್ದೇನೂ ಇರಲಿಲ್ಲ," ಎಂದು ಮುರಳಿ ಕಾರ್ತಿಕ್ ಹೇಳಿದರು.

ಕೊಹ್ಲಿ ಅವರಂತಹ ದಿಗ್ಗಜ ಬ್ಯಾಟರ್ ಅನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಪ್ರಿನ್ಸ್ ಪಂದ್ಯದ ಗತಿಯನ್ನೇ ಬದಲಿಸಿದರು. ಇನ್ನೂ ಇದೀಗ ವಿರಾಟ್‌ ಕೊಹ್ಲಿ ಅವರ ಮಾರ್ಗದರ್ಶನವೇ ಅವರಿಗೆ ಮುಳುವಾಯಿತು ಎಂಬ ಕಾರ್ತಿಕ್ ಅವರ ಈ ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಒಬ್ಬ ಅನುಭವಿ ಆಟಗಾರ ಯುವ ಪ್ರತಿಭೆಗೆ ನೀಡಿದ ಸಲಹೆಯೇ ಅವರ ವಿಕೆಟ್ ಪಡೆಯಲು ಕಾರಣವಾದದ್ದು ಈ ಪಂದ್ಯದ ಅತ್ಯಂತ ಕುತೂಹಲಕಾರಿ ಸಂಗತಿಯಾಗಿದೆ.

ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಅಲಂಕರಿಸಿದ ಎಲ್‌ಎಸ್‌ಜಿ

ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈವರೆಗೆ ಆಡಿದ 10 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಗೆದ್ದಿದ್ದು, ಉಳಿದ ಏಳು ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಇನ್ನೂ 10ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಲಕ್ನೋ ತಂಡವು ಈಗ ಒಂಬತ್ತನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡದಷ್ಟೇ ಅಂಕಗಳನ್ನು ಹೊಂದಿದೆ.

ಮುಂಬೈ ಇಂಡಿಯನ್ಸ್ ಉತ್ತಮ ರನ್ ರೇಟ್ ಹೊಂದಿರುವ ಕಾರಣ ಲಕ್ನೋ ಸೂಪರ್ ಜೈಂಟ್ಸ್‌ ತಂಡವು ಕೊನೆಯ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಈ ಗೆಲುವಿನ ನಂತರ ಎಲ್‌ಎಸ್‌ಜಿ ತನ್ನ ಜಯದ ಓಟವನ್ನು ಮುಂದುವರಿಸಲು ಮತ್ತು ಮುಂಬರುವ ಪಂದ್ಯಗಳಲ್ಲೂ ಜಯ ದಾಖಲಿಸುವ ಭರವಸೆಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+