RCB: "ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿಗೆ ಹೀನಾಯ ಸೋಲು, ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು": ಭವಿಷ್ಯ ಭಾರೀ ವೈರಲ್
RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು 17 ವರ್ಷಗಳ ಬಳಿಕ ಮೊಟ್ಟ ಮೊದಲ ಟ್ರೋಫಿಗೆ ಮುತ್ತಿಟ್ಟಿತು. ಈ ಮೂಲಕ ಟ್ರೋಫಿ ಇಲ್ಲ ಎಂಬ ಕೊರಗನ್ನೇನೋ ಮರೆಸಿತು. ಆದರೆ, ರಾಯಲ್ ತಂಡಕ್ಕೆ ಹೋದೆಯಾ ಪಿಶಾಚಿ, ಅಂದ್ರೆ ಬಂದೆಯಾ ಗವಾಕ್ಷಿ ಎಂಬ ಮಾತಿನಂತೆ ಕೆಲವರು ಅಪಶಕುನ ಬಯಸುತ್ತಲಿದ್ದಾರೆ. ಅದರಲ್ಲೂ ಈ ಸಾಲಿಗೆ ಸಿಎಸ್‌ಕೆ ತಂಡ ಇಬ್ಬರು ಆಟಗಾರರು ಸೇರಿದ್ದಾರೆ. ಇದೀಗ ಇದರಲ್ಲೊಬ್ಬರು ಬೆಂಗಳೂರು ಟೀಂ ಬಗ್ಗೆ ಮಾತನಾಡಿ ಭಾರೀ ಟ್ರೋಲ್ ಆಗಿದ್ದಾರೆ.
ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 18ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯ ನಡೆಯಿತು. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗುಬಡಿಯುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದಕ್ಕೂ ಮುನ್ನ ಆರ್‌ಸಿಬಿ ಗೆಲ್ಲುವುದೇ ಇಲ್ಲವೆಂಬ ರೀತಿಯಲ್ಲಿ ಇಬ್ಬರು ಸಿಎಸ್‌ಕೆ ಆಟಗಾರರು ಹೇಳಿದ್ದರು. ಆದರೆ, ಆರ್‌ಸಿಬಿ ಇವರ ಹೇಳಿಕೆಗಳನ್ನೆಲ್ಲ ಸುಳ್ಳು ಮಾಡಿತು.

ಆದರೂ, ಬುದ್ಧಿ ಕಲಿಯದ ಇವರು ಮಾತನಾಡದಿದ್ದರೆ, ತಿಂದಿದ್ದು ಕರಗುವುದಿಲ್ಲ ಎಂಬಂತೆ ಈಗಲೂ ಅಪಶಕುನ ನುಡಿಯುತ್ತಲಿರುತ್ತಾರ. ಈ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವುದಲ್ಲದೆ, ಟ್ರೋಲ್ ಕೂಡ ಆಗುತ್ತಿದ್ದಾರೆ. ಈ ಪೈಕಿ ಇದೀಗ ಒಬ್ಬರಾದ ಅಂಬಾಟಿ ರಾಯುಡು ಹೇಳಿಕೆಯೊಂದನ್ನು ನೀಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಹೌದು.. ಆರ್‌ಸಿಬಿ ಟೀಂ ವಿರುದ್ಧ ಸದಾ ಕೊಂಕು ನುಡಿಯುವ ಸಿಎಸ್‌ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಇದೀಗ ಮತ್ತೊಮ್ಮೆ ಟ್ರೋಫಿ ಭವಿಷ್ಯ ನುಡಿದು ಟ್ರೋಲ್ ಆಗಿದ್ದಾರೆ. ಮುಂಬರುವ ಐಪಿಎಲ್ ಬಗ್ಗೆ ಭವಿಷ್ಯವೊಂದನ್ನು ನುಡಿದಿದ್ದು, ಇವರ ಹೇಳಿಕೆ ನೆಟ್ಟಿಗರ ಆಕ್ರೋಶಕ್ಕೆ ಕಾರಣ ಆಗುವುದಲ್ಲದೆ, ಟ್ರೋಲ್ ಕೂಡ ಆಗುತ್ತಿದೆ.
ಪಾಡ್ಕಾಸ್ಟ್ವೊಂದರಲ್ಲಿ ಮಾತನಾಟಿದ ಅಂಬಾಟಿ ರಾಯುಡು, ಐಪಿಎಲ್ 2026ರಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್, ಕೆಕೆಆರ್ ಮತ್ತು ಸಿಎಸ್‌ಕೆ ತಂಡಗಳು ಪ್ಲೇಆಫ್ ಪ್ರವೇಶ ಮಾಡಲಿವೆ. ಇವುಗಳಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಫೈನಲ್ಗೆ ಪ್ರವೇಶ ಪಡೆಯಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದೇ ವೇಳೆ ಆರ್‌ಸಿಬಿ ಫೈನಲ್‌ನಲ್ಲಿ ಗೆಲ್ಲುವುದಿಲ್ಲೆ ಎಂದು ಹೇಳಿಕೆ ನೀಡಿ ನಗೆಪಾಟಲಿಗೆ ಕಾರಣರಾಗಿದ್ದಾರೆ.
ಮುಂದಿನ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಸೋಲನುಭವಿಸಲಿದ್ದು, ಮುಂಬೈ ಇಂಡಿಯನ್ಸ್ ಟ್ರೋಫಿ ಎತ್ತಲಿದೆ ಎಂದು ಅಂಬಾಟಿ ರಾಯುಡು ಅಚ್ಚರಿ ಭವಿಷ್ಯ ನುಡಿದಿದ್ದಾರೆ. ಇದೀಗ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ನೆಟ್ಟಿಗರು ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಆರ್‌ಸಿಬಿ ತಂಡವು ಗೆಲ್ಲಲು ಹೆಣಗಾಡುವುದನ್ನು ನೋಡಿ ನಾನು ಸದಾ ಸಂತಸಪಡುತ್ತೇನೆ. ಆದರೂ, ಅವರು ಟ್ರೋಫಿ ಗೆಲ್ಲಲಿ ಎಂದು ಬಯಸುತ್ತೇನೆ. ಆದರೆ, ಈ ಬಾರಿ ಅವರು ಟ್ರೋಫಿ ಗೆಲ್ಲಬಾರದು. ಮುಂದೊಂದು ದಿನ ಯಾವತ್ತಾದರೂ ಗೆಲ್ಲಲಿ. ಸಿಎಸ್‌ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟ್ರೋಫಿ ಎತ್ತಿ ಹಿಡಿಯಬೇಕು ಅಂತಲೂ ಹೇಳಿದ್ದರು. ಆದರೆ ರಾಯಲ್ ಹುಡುಗ್ರು ಇದನ್ನೆಲ್ಲಾ ಸುಳ್ಳು ಮಾಡುವ ಮೂಲಕ ರಾಯಡುಗೆ ಸರಿಯಾಗಿ ತಿರುಗೇಟು ಕೊಡುವ ಕೆಲಸ ಮಾಡಿದರು. ಅಲ್ಲದೆ, ಅವರು ಕಂಡ ಕನಸನ್ನು ನುಚ್ಚುನೂಡು ಮಾಡಿಬಿಟ್ಟಿತು.
ಅಂಬಾಟಿ ರಾಯಡು ಆರ್‌ಸಿಬಿ ಬಗ್ಗೆ ಹೀಗೆ ಹೇಳಿಕೆ ನೀಡಿರುವುದು ಇದೇ ಮೊದಲೇನಲ್ಲ. ಕಳೆದ ಸೀಸನ್ ವೇಳೆ ಈ ಬಾರಿ ಆರ್‌ಸಿಬಿ ಟ್ರೋಫಿ ಎತ್ತರಬಾರದು, ಸೋಲಬೇಕು ಎಂದು ಹೇಳಿದ್ದರು. ಅಲ್ಲದೆ, ಆರ್‌ಸಿಬಿ ಸೋಲಿಗೆ ಅವರ ತಂಡದ ಆಯ್ಕೆಯೇ ಕಾರಣ ಅಂತಲೂ ದೂರಿದ್ದರು. ಆದರೆ, ಅವರಿಗೆ ಇನ್ನೂ ಸರಿಯಾಗಿ ಗೊತ್ತಿರದ ಒಂದು ವಿಚಾರ ಇದೆ. ಆರ್‌ಸಿಬಿ ತಂಡ ಇಲ್ಲದಿದ್ದರೆ, ಐಪಿಎಲ್ ಇಲ್ಲ ಎನ್ನುವ ಪರಿಸ್ಥಿತಿ ಇದೆ.
ಐಪಿಎಲ್‌ಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂತಾ ಇದ್ರೆ ಅದು ಆರ್‌ಸಿಬಿ ಮಾತ್ರ. ಒಂದು ವೇಳೆ ಈ ತಂಡ ಇಲ್ಲದಿದ್ದರೆ, ಐಪಿಎಲ್ ಬ್ಯಾನ್ ಆಗುವುದು ಖಚಿತ ಎನ್ನುವಂತಾಗಿದೆ. ಅಲ್ಲದೆ, ಬ್ರ್ಯಾಂಡ್ ವ್ಯಾಲ್ಯೂನಲ್ಲೂ ಕೂಡ ಎಲ್ಲಾ ತಂಡಗಳನ್ನು ಕೆಳಗಿಟ್ಟು ಮೇಲೆ ಕುಳಿತುಕೊಂಡುಬಿಟ್ಟಿದೆ. ಅಷ್ಟರ ಮಟ್ಟಿಗೆ ಫೇಮಸ್ ಆಗಿಬಿಟ್ಟಿದೆ.
ಇನ್ನೂ ಅಂಬಾಟಿ ರಾಯಲ್ ನೀಡಿದ ಮುಂದಿನ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲಬಾರದು ಎಂಬ ಹೇಳಿಕೆಗೆ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. "ಆರ್‌ಸಿಬಿ ಕೆಣಕದೆ ತಿಂದ ಅನ್ನ ಕರಗುವುದಿಲ್ಲವೇ? ಮಾಡೋದಿಕ್ಕೆ ಕೆಲಸ ಇಲ್ವಾ ಇವನಿಗೆ? ಪದೇ ಪದೇ ಇದನ್ನೇ ಹೇಳಿಕೊಂಡು ಬರುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ,". ಇನ್ನು ಕೆಲವರು "ಬಲಿಷ್ಠ ಆಟಗಾರರನ್ನು ಹೊಂದಿರುವ ಆರ್‌ಸಿಬಿಯೇ ಮುಂದಿನ ಬಾರಿಯೂ ಟ್ರೋಫು ಹೊಡೆಯುತ್ತದೆ. ನೀನು ನುಡಿದ ಭವಿಷ್ಯ ಎಲ್ಲಾ ನಿಜ ಆಗುವಂತಿದ್ದರೆ, ಈ ಬಾರಿ ಆರ್‌ಸಿಬಿ ಸೋಲಲಿ ಎಂಬ ನಿಮ್ಮ ಕನಸು ಕೊನೆಗೂ ನನಸಾಗಲಿಲ್ಲ. ಇನ್ನೂ ಮುಂದಿನ ಬಾರಿಯೂ ನೀನು ಕೊಟ್ಟಿರುವ ಹೇಳಿಕೆಯ ವಿರುದ್ಧವೇ ಆಗುತ್ತದೆ," ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications