RCB: ಆರ್‌ಸಿಬಿಗೆ ಕನ್ನಡಿಗ ಕೆಎಲ್‌ ರಾಹುಲ್‌ ಸೇರಿ ಮೂವರು ಸ್ಟಾರ್ ಆಟಗಾರರ ಎಂಟ್ರಿ ಸಾಧ್ಯತೆ

RCB: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಆರ್‌ಸಿಬಿ 17 ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿ ಟ್ರೋಫಿಗೆ ಮುತ್ತಿಟ್ಟಿತು. ಬಳಿಕ ತುಂಬಾ ಬೆಳವಣಿಗೆಗಳು ಆದ್ವು, ಈಗಲೂ ಆಗುತ್ತಲಿವೆ. ಇದೀಗ ಮುಂದಿನ ಸೀಸನ್‌ನಿಂದ ಮುಂಬೈ ಇಂಡಿಯನ್ಸ್‌ನ ಇಬ್ಬರು, ಡೆಲ್ಲಿ ಕ್ಯಾಪಿಟಲ್ಸ್‌ನ ಓರ್ವ ಸೇರಿ ಒಟ್ಟು ಮೂವರು ಸ್ಟಾರ್ ಆಟಗಾರರು ರಾಯಲ್‌ ಚಾಲೆಂಜರ್ಸ್ ಸೇರುವ ಸಾಧ್ಯತೆಯಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಹಾಗಾದ್ರೆ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಆಡಿದ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, 18ನೇ ಆವೃತ್ತಿಯಲ್ಲಿ ಈ ಕೊರಗಿಗೆ ತೆರೆ ಎಳೆಯುವ ಕೆಲಸ ಮಾಡಿತು. ಈ ಬಾರಿ ಆರ್‌ಸಿಬಿ ಆರಂಭದಿಂದಲೂ ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿ ಬಲಿಷ್ಠ ತಂಡಗಳನ್ನೇ ಬಗ್ಗುಬಡಿಯಿತು. ಕೊನೆಗೆ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಅನ್ನು ಮಣಿಸಿ ಟ್ರೋಫಿ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

RCB Three Star Players Including Kannadiga KL Rahul Likely to be Joins this team

ಫೈನಲ್‌ ಪಂದ್ಯ ಅಹಮದಬಾದ್‌ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಜೂನ್‌ 3ರಂದು ನಡೆದಿದ್ದು, ಈ ವೇಳೆ ಆರ್‌ಸಿಬಿ ಪಂಜಾಬ್‌ ತಂಡವನ್ನು ಹೀನಾಯವಾಗಿ ಮಣಿಸುವ ಮೂಲಕ ಟ್ರೋಫಿ ಗೆದ್ದುಕೊಂಡಿತು. ಅಂದು ಬರೀ ಬರೀ ಕರ್ನಾಟಕ ಅಷ್ಟೇ ಅಲ್ಲದೆ, ದೇಶಾದ್ಯಂತ ಬೆಂಗಳೂರು ತಂಡದ ಗೆಲುವನ್ನು ಸಂಭ್ರಮಿಸಿದರು. ಅಷ್ಟರ ಮಟ್ಟಿಗೆ ಐಪಿಎಲ್‌ ತಂಡಗಳಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಟೀಂ ಇದಾಗಿದೆ.

ಇದಾದ ಬಳಿಕ ವಿಜಯ್ ಮಲ್ಯ ಅವರು ಆರ್‌ಸಿಬಿ ತಂಡಕ್ಕೆ ಶುಭಹಾರೈಸಿದರು. ಅಲ್ಲದೆ, ಇದಕ್ಕೂ ಮುಂಚೆ ಆರ್‌ಸಿಬಿ ಗೆದ್ದಾಗಲೆಲ್ಲ ಟ್ವೀಟ್‌ ಮೂಲಕ ವಿಶ್‌ ಮಾಡಿ ಗಮನ ಸೆಳೆದಿದ್ಧಾರೆ. ಅಷ್ಟೇ ಅಲ್ಲದೆ, ಮತ್ತೆ ನಾನೇನಾದ್ರೂ ಕರ್ನಾಟಕಕ್ಕೆ ಮರಳಿದ್ರೆ, ಪ್ರಾಂಚೈಸಿ ಕೊಂಡುಕೊಳ್ಳುತ್ತೇನೆ. ಹಾರಾಜು ಪ್ರಕ್ರಿಯೆ ವೇಳೆ ಮೊದಲು ನಾನು ಕೊಂಡುಕೊಳ್ಳುವುದೇ, ಕನ್ನಡಿಗ ಕೆಎಲ್‌ ರಾಹುಲ್‌ ಹಾಗೂ ಸದ್ಯ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಡುತ್ತಿರುವ ಜಸ್ಪ್ರಿತ್ ಬೂಮ್ರಾ, ಸೂರ್ಯ ಯಾದವ್‌ನನ್ನ ಎಂದು ಖಡಕ್‌ ಆಗಿಯೇ ಹೇಳಿದ್ದರು.

ಅದರಂತೆಯೇ ಇದೀಗ ವಿಜಯ್‌ ಮಲ್ಯ ಮತ್ತೆ ದೇಶಕ್ಕೆ ಮರಳಿ ಆರ್‌ಸಿಬಿ ಪ್ರಾಂಚೈಸಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲಿದ್ಧಾರೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಒಂದು ವೇಳೆ ಅವರು ಮರಳಿದರೆ ಅಂದುಕೊಂಡಂತೆಯೇ ಟೀಂ ಕಟ್ಟುವುದಂತೂ ಪಕ್ಕಾ ಅಂತಲೂ ಅಭಿಮಾನಿಗಳು ಹೇಳುತ್ತಿದ್ದಾರೆ.

ಈಗಾಗಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಬಲಿಷ್ಠ ತಂಡವನ್ನು ಹೊಂದಿದೆ. ಆದರೂ, ಪ್ರತಿ ಬಾರಿಯೂ ಐಪಿಎಲ್‌ ಟ್ರೋಫಿ ಗೆಲ್ಲುವಂತೆ ತಂಡವನ್ನು ಮತ್ತಷ್ಟು ಬಲಿಷ್ಠವಾಗಿಸಲು ಸಕಲ ತಯಾರಿಗಳು ಈಗಾಗಲೇ ನಡೆಯಿತ್ತಿವೆ. ಈ ನಡುವೆಯೇ ಆರ್‌ಸಿಬಿಗೆ ಮುಂದಿನ ಬಾರಿಯಿಂದ ಸದ್ಯ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡುತ್ತಿರುವ ಕನ್ನಡಿಗ ಕೆಎಲ್‌ ರಾಹುಲ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ಜಸ್ಪ್ರಿತ್ ಬೂಮ್ರಾ, ಸೂರ್ಯ ಕುಮಾರ್ ಯಾದವ್‌ ಎಂಟ್ರಿ ಕೊಡುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮತ್ತೊಂದೆಡೆ, ಇದು ಸಾಧ್ಯ ಆಗಬೇಕಂದ್ರೆ ಅದು ವಿಜಯ್ ಮಲ್ಯ ಆಗಮನದಿಂದ ಮಾತ್ರ ಅಂತಲೂ ಹೇಳುತ್ತಿದ್ದಾರೆ. ಈ ಮೂವರು ಏನಾದ್ರೂ ಬಂದ್ರೆ ಪ್ರತಿ ಬಾರಿಯೂ ಕಪ್‌ ನಮ್ದೆ ಎನ್ನುವ ಘೋಷವಾಕ್ಯ ಸೃಷ್ಟಿಯಾದರೂ ಆಶ್ಚರ್ಯವಿಲ್ಲ ಅಂತಿದ್ದಾರೆ ಅಭಿಮಾನಿಗಳು. ಆದರೆ, ಮೊದಲ ಬಾರಿ ಟ್ರೋಫಿ ಗೆದ್ದ ಸಮಯದಲ್ಲೇ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಆರ್‌ಸಿಬಿ ಪಾಲಿಗೆ ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿತು.

ಆರ್‌ಸಿಬಿ ಟ್ರೋಫಿ ಗೆದ್ದ ಮಾರನೇ ದಿನ ಜೂನ್‌ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿದ ಸಂಭವಿಸಿ 11 ಜನ ಮೃತಪಟ್ಟಿದ್ದರು. ಇದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+