RCB: ಬೆಂಗಳೂರಿನಲ್ಲಿ ಆರ್‌ಸಿಬಿ ಮ್ಯಾಚ್ ಗೆಲ್ಲೋದು ಪಕ್ಕಾ ಕಾರಣ ಇದೇ

ಸತತ ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಇಂದು ಮತ್ತೆ ಅಗ್ನಿ ಪರೀಕ್ಷೆಗೆ ಇಳಿಯಲಿದೆ. ಗುರುವಾರ (ಏಪ್ರಿಲ್ 24) ಸಂಜೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಐಪಿಎಲ್ (IPL 2025) 18ನೇ ಸೀಸನ್‌ನ 42ನೇ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಆರ್ಆರ್‌ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಲಿದ್ದು ಸಾಕಷ್ಟು ಕುತೂಹಲ ಮೂಡಿಸಿವೆ. ಹಾಗಾದರೆ ಆರ್‌ಸಿಬಿ ಇಂದಿನ ಮ್ಯಾಚ್‌ನಲ್ಲಿ ಗೆಲ್ಲುತ್ತಾ? ಈ ಬಗ್ಗೆ ಜ್ಯೋತಿಷ್ಯ ಹೇಳುವುದೇನು? ಇದೆಲ್ಲದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಆರ್‌ಸಿಬಿ ತಂಡ ತನ್ನ ತವರಿನಲ್ಲಿ ಈವರೆಗೆ ಆಡಿದ ಮೂರು ಪಂದ್ಯಗಳನ್ನು ಸೋತಿದ್ದು ಇಂದು ನಡೆಯಲಿರುವ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲು ಪಣ ತೊಟ್ಟು ನಿಂತಿದೆ. ಹೀಗಾಗಿ ಈ ಪಂದ್ಯದ ಬಗ್ಗೆ ಭಾರೀ ಕುತೂಹಲ ಮೂಡಿದೆ. ಕ್ರಿಕೆಟ್ ಪ್ರಿಯರು ಇಂದು ಆರ್‌ಸಿಬಿ ತಂಡ ಗೆಲುವು ಸಾಧಿಸಿಯೇ ತೀರುತ್ತದೆ ಎನ್ನುವ ವಿಶ್ವಾಸದಲ್ಲಿ ಇದ್ದಾರೆ. ಹಾಗಾದರೆ ಜ್ಯೋತಿಷ್ಯದ ಪ್ರಕಾರ ಆರ್‌ಸಿಬಿ ಹಾಗೂ ಆರ್ಆರ್ ನಡುವೆ ನಡೆಯುವ ಪಂದ್ಯದಲ್ಲಿ ಗೆಲುವು ಯಾರಿಗೆ ಎಂದು ತಿಳಿಯೋಣ.

rcb team will win in bengaluru- how is virat kohli prediction today

ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್, ಜೆತೇಶ್ ಶರ್ಮಾ, ದೇವದತ್ ಪಡಿಕ್ಕಲ್, ರೋಮಾರಿಯೋ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್‌ ದಯಾಲ್, ಜೋಶ್ ಹ್ಯಾಜಲ್‌ವುಡ್ ಇದ್ದಾರೆ.

ಈ ಬಾರಿ ವಿರಾಟ್ ಕೊಹ್ಲಿ ಮೇಲೆ ತುಂಬಾ ನಿರೀಕ್ಷೆ ಇದೆ. ಹೀಗಾಗಿ ವಿರಾಟ್ ಕೊಹ್ಲಿ ಮನಸ್ಸು ಮಾಡಿದರೆ ತಂಡ ಗೆಲ್ಲುವುದರಲ್ಲಿ ಅನುಮಾನ ಇಲ್ಲ ಅನ್ನೋದು ಬಹುತೇಕ ಕ್ರಿಕೆಟ್ ಪ್ರಿಯರ ನಂಬಿಕೆ. ಹಾಗಾದರೆ ವಿರಾಟ್ ಕೊಹ್ಲಿ ಜಾತಕ ಇಂದು (ಏಪ್ರಿಲ್ 24) ಹೇಗಿದೆ? ಮ್ಯಾಚ್‌ ಗೆಲ್ಲುವ ಸೂಚನೆಗಳು ಇವೆಯೇ ಎಲ್ಲವನ್ನೂ ಡಿಟೇಲ್ ಆಗಿ ತಿಳಿಯೋಣ.

rcb team will win in bengaluru- how is virat kohli prediction today

ವಿರಾಟ್ ಕೊಹ್ಲಿ ಅವರದ್ದು ವೃಷಭ ರಾಶಿ. ಇಂದು (ಏಪ್ರಿಲ್ 24) ಚಂದ್ರನು ವೃಷಭ ರಾಶಿಯ ಹತ್ತನೇ ಮನೆಯಿಂದ ಸಂಚಾರ ಮಾಡುತ್ತಾನೆ. ಅಲ್ಲದೆ ವೃಷಭ ರಾಶಿ ಹನ್ನೊಂದನೇ ಮನೆಯಲ್ಲಿ ಶುಕ್ರನು ಉತ್ತುಂಗದಲ್ಲಿದ್ದಾನೆ. ಹೀಗಾಗಿ ಈ ದಿನ ಹನ್ನೆರೆಡು ರಾಶಿಗಳಲ್ಲಿ ಅದ್ಭುತ ಫಲವನ್ನು ಪಡೆಯುವ ರಾಶಿ ಅಂದರೆ ವೃಷಭ ರಾಶಿ.

ಇಂದು ವೃಷಭ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸವಾಲುಗಳನ್ನು ಎದುರಿಸುವ ಶಕ್ತಿ ಅಧಿಕವಾಗುವುದು. ಬುದ್ಧಿವಂತಿಕೆಯಿಂದ ಸಂದರ್ಭ ಗೆಲ್ಲುವ ಸಾಮಾರ್ಥ್ಯ ದ್ವಿಗುಣವಾಗಲಿದೆ. ಈ ರಾಶಿಯವರು ಮೊತ್ತೊಬ್ಬರ ಖುಷಿಯಲ್ಲಿ ತಮ್ಮ ಖುಷಿಯನ್ನು ಕಾಣಲು ಇಚ್ಚಿಸುವುದರಿಂದ ಹಾಗೂ ಮುಂದುವರೆಯುವ ಕಿಚ್ಚು ಹೊಂದಿರುವುದರಿಂದ ಈ ದಿನ ವಿರಾಟ್ ಕೊಹ್ಲಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ನೂರಕ್ಕೆ ನೂರರಷ್ಟು ಇದೆ. ಅಲ್ಲದೆ ವೃಷಭ ರಾಶಿಯವರ ಜಾತಕದಲ್ಲಿ ಗ್ರಹಗಳ ಸ್ಥಾನ ಕೂಡ ಅನುಕೂಲಕರವಾಗಿರುವುದರಿಂದ ವಿರಾಟ್ ಕೊಹ್ಲಿ ಇಂದು ಆಟದಲ್ಲಿ ಇತಿಹಾಸ ನಿರ್ಮಿಸಲಿದ್ದಾರೆ.

ಇನ್ನೂ ವಿರಾಟ್ ಕೊಹ್ಲಿ ಜರ್ಸಿ ನಂಬರ್ 18. ಅವರು ಹುಟ್ಟಿದ್ದು 5 ನವೆಂಬರ್ 1988ರಲ್ಲಿ. ಅವರ ಹುಟ್ಟಿದ ವರ್ಷದಲ್ಲಿ ಎರಡು ಎಂಟು ಬಂದಿದೆ. ಅವರ ಜರ್ಸಿ ನಂಬರ್‌ ನಲ್ಲೂ ಎಂಟು ಸಂಖ್ಯೆ ಇದೆ. ಸಂಖ್ಯಾಶಾಸ್ತ್ರದ ಪ್ರಕಾರ 18ರ ಅಧಿಪತಿ ಕುಜ ಅಥವಾ ಅಂಗಾರಕವಾಗಿದೆ. ಅಂಗಾರಕ ಅಂದರೆ ವಿಜಯಕ್ಕೆ, ಧೈರ್ಯಕ್ಕೆ, ಶೌರ್ಯಕ್ಕೆ, ದೇಶ ಪ್ರೇಮಕ್ಕೆ, ಮಾತೃಭೂಮಿಗೆ ಅಧಿಪತಿಯಾಗಿದೆ. ಹೀಗಾಗಿ ಕುಜ ತುಂಬಾ ಶಕ್ತಿಶಾಲಿ ಗ್ರಹವಾಗಿದೆ.

ಅಲ್ಲದೆ 18 ಜರ್ಸಿ ನಂಬರ್ ಹೊಂದಿರುವ ವ್ಯಕ್ತಿಗಳ ಮೂಳೆಯನ್ನು ಸದೃಢವಾಗಿ ಇರುತ್ತವೆ. ಜನ ಇಷ್ಟಪಡುವಂತಹ ಮೈಕಟ್ಟು ಹೊಂದಿರುತ್ತಾರೆ. ಆಲ್ಲದೆ ಆಕರ್ಷವಾಗಿ ಕಾಣುತ್ತಾರೆ. ತೀಕ್ಷ್ನವಾದ ನೋಟ ಹೊಂದಿರಲಿದ್ದು ಭಾಗ್ಯಶಾಲಿಗಳಾಗಿರುತ್ತಾರೆ. ಇವರಿಗೆ ಧೈರ್ಯ ಸಾಹಸ ಹೆಚ್ಚು. ಸಾಹಸದಿಂದ ನುಗ್ಗುತ್ತಾರೆ. ಗೆಲ್ಲುವ ಉತ್ಸಾಹ ಹೆಚ್ಚಾಗಿರುತ್ತದೆ. ಏನೇ ಆದರೂ ಕೂಡ ಫೇಸ್‌ ಟು ಫೇಸ್ ಮಾತನಾಡುತ್ತಾರೆ. ಜಗಳಕ್ಕೂ ಹಿಂಜರಿಯುವುದಿಲ್ಲ.

ಹೀಗಾಗಿ ವಿರಾಟ್ ಕೊಹ್ಲಿ ಜರ್ಸಿ ನಂಬರ್ ಕೂಡ ಅದ್ಬುತವಾಗಿರುವುದರಿಂದ ಅವರು ಇಂದು ಪಂದ್ಯದಲ್ಲಿ ಗೆಲುವು ಸಾಧಿಸಲು ಪ್ರಮುಖ ಪಾತ್ರ ವಹಿಸುತ್ತಾರೆ ಎನ್ನಲಾಗುತ್ತಿದೆ. ಇದರಿಂದ ಇಂದು ಆರ್‌ಸಿಬಿ ತಂಡ ಕ್ರಿಕೆಟ್ ಪ್ರಿಯರ ಮನಸ್ಸು ಕದಿಯುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು. ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಏನೇ ಹೇಳಲಿ ಫಲಿತಾಂಶಕ್ಕಾಗಿ ನಾವು ಇಂದು ರಾತ್ರಿವರೆಗೂ ಕಾಯಲೇಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+