ಶತಕ ವಂಚಿತ ವಿರಾಟ್ ಕೊಹ್ಲಿ, ರಾಜಸ್ಥಾನ ಬುಡ ಅಲುಗಾಡಿಸಿದ ಕ್ರಿಕೆಟ್ ಕಿಂಗ್... Virat Kohli

ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ 1,000 ಕೋಟಿ ರೂಪಾಯಿ ಒಡೆಯಾಗಿದ್ದರೂ ತಮ್ಮ ಕ್ರಿಕೆಟ್ ಕ್ರೇಜ್ ಕಡಿಮೆ ಮಾಡಿಕೊಂಡಿಲ್ಲ. 36 ವರ್ಷ ವಯಸ್ಸಿನ ಕಿಂಗ್ ಕೊಹ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದ್ರೆ ರನ್ ಮಳೆ ಗ್ಯಾರಂಟಿ ಅನ್ನೋದು ಇವತ್ತು ಕೂಡ ಕನ್ಫರ್ಮ್ ಆಗಿದ್ದು. ಇನ್ನೇನು ಶತಕ ಬಾರಿಸಿಯೇ ಬಿಡುತ್ತಾರೆ, ಅನ್ನೋ ಖುಷಿಯಲ್ಲಿ ಇದ್ದಾಗಲೇ ರಾಜಸ್ಥಾನ ಬುಡ ಅಲುಗಾಡಿಸಿದ್ದ ಕ್ರಿಕೆಟ್ ಕಿಂಗ್ ಕೊಹ್ಲಿ ದೊಡ್ಡ ಎಡವಟ್ಟು ಮಾಡಿಕೊಂಡರು...

ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಕ್ರಿಕೆಟ್ ಬಾಸ್ ಆಗಿದ್ದು, ಐಪಿಎಲ್ ಅಖಾಡದಲ್ಲಿ ಭಾರಿ ದೊಡ್ಡ ಸೌಂಡ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಅಖಾಡ ಪ್ರವೇಶ ಮಾಡಿದರೆ ಮುಗೀತು, ಎದುರಾಳಿ ತಂಡದಲ್ಲಿ ನಡುಕ ಗ್ಯಾರಂಟಿ. ಮೊದಲು ಏನಾದರೂ ಮಾಡಿ ವಿರಾಟ್ ಕೊಹ್ಲಿ ಅವರನ್ನ ಔಟ್ ಮಾಡಬೇಕು ಅನ್ನೋ ಚಾಲೆಂಜ್ ಹಾಕಿಕೊಳ್ಳುತ್ತಾರೆ ಪ್ರತಿಯೊಂದು ತಂಡದ ಆಟಗಾರರು. ಹೀಗಿದ್ದಾಗಲೇ, ಇಂದು ರಾಜಸ್ಥಾನ ರಾಯಲ್ಸ್ ತಂಡದ ಹೆಡೆಮುರಿ ಕಟ್ಟಿರುವ ಕೊಹ್ಲಿ ಭರ್ಜರಿ 2 ಸಿಕ್ಸರ್ & 8 ಬೌಂಡರಿ ಬಾರಿಸಿ ಅಬ್ಬರಿಸಿದರು. ಆದರೆ ಇದೇ ಸಮಯದಲ್ಲೇ ಎಡವಟ್ಟು ಒಂದು ಕೊಹ್ಲಿ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನೇ ನೀಡಿತು.

RCB Team Player Virat Kohli New Achievement Against Rajasthan Royals

ಸೆಂಚ್ಯುರಿ ಮಿಸ್ ಮಾಡಿಕೊಂಡ ಕಿಂಗ್!

ಹೌದು, ವಿರಾಟ್ ಕೊಹ್ಲಿ ಇಂದು ಸ್ವಲ್ಪ ತಾಳ್ಮೆ ವಹಿಸಿದ್ದರೆ ದೊಡ್ಡ ಇತಿಹಾಸ ನಿರ್ಮಾಣ ಆಗಿರುತ್ತಿತ್ತು. ರಾಜಸ್ಥಾನ ರಾಯಲ್ಸ್ ವಿರುದ್ಧ ಮೊದಲು ಬ್ಯಾಟ್ ಬೀಸಿದ ಆರ್‌ಸಿಬಿ ತಂಡ, ಭರ್ಜರಿಯಾಗಿ ರನ್ ಗಳಿಸಿತ್ತು. ಅದರಲ್ಲೂ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅವರು ಭಾರಿ ಭರ್ಜರಿಯಾಗಿ 70 ರನ್ ಗಳಿಸಿದ್ದರು. ಆದರೆ ವಿರಾಟ್ ಕೊಹ್ಲಿ ಅವರು ಇದೇ ಸಮಯದಲ್ಲೇ ದೊಡ್ಡ ಎಡವಟ್ಟು ಮಾಡಿಕೊಂಡು, ಅಭಿಮಾನಿಗಳಿಗೆ ಕೂಡ ನಿರಾಸೆ ಮಾಡಿಬಿಟ್ಟರು...

ಕ್ರಿಕೆಟ್ ಕಿಂಗ್ ಕೊಹ್ಲಿಗೆ ಶಾಕ್!

ವಿರಾಟ್ ಕೊಹ್ಲಿ ಸರಿಯಾಗಿ ಅಖಾಡದಲ್ಲಿ ನಿಂತುಬಿಟ್ಟರೆ, ಅವರನ್ನ ಔಟ್ ಮಾಡುವ ಬೌಲರ್ ಹುಟ್ಟಿಲ್ಲ ಅಂದುಕೊಳ್ಳಬೇಕು. ಯಾಕಂದ್ರೆ ವಿರಾಟ್ ಕೊಹ್ಲಿ ಅಷ್ಟು ಅಚ್ಚುಕಟ್ಟಾಗಿ ಆಟವನ್ನ ಆಡುತ್ತಾರೆ. ಅದೇ ರೀತಿ ರಾಜಸ್ಥಾನ ತಂಡದ ವಿರುದ್ಧ ಕೂಡ ವಿರಾಟ್ ಕೊಹ್ಲಿ ಅಬ್ಬರದಿಂದಲೇ ಬ್ಯಾಟಿಂಗ್ ಶುರು ಮಾಡಿದ್ದರು. ಹೀಗೆ ನೋಡ ನೋಡುತ್ತಲೇ 42 ಬಾಲ್ ಆಡಿ ಬರೋಬ್ಬರಿ 70 ರನ್ ಗಳಿಸಿದ್ದರು ವಿರಾಟ್ ಕೊಹ್ಲಿ. ಆದರೆ ಇದೇ ಸಮಯದಲ್ಲಿ, ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು.

ಜೋಫ್ರಾ ಆರ್ಚರ್ ಬೌಲಿಂಗ್ ಮಾಡಲು ಬಂದಾಗ ಸುಲಭದ ಹೊಡೆತ ಅಂತಾನೇ ವಿರಾಟ್ ಕೊಹ್ಲಿ ತಪ್ಪಾಗಿ ತಿಳಿದುಕೊಂಡರು. ಹೀಗಿದ್ದಾಗ ದೊಡ್ಡ ಹೊಡೆತಕ್ಕೆ ಕೈಹಾಕಿದ್ದ ಕಿಂಗ್ ಕೊಹ್ಲಿ ಕ್ಯಾಚ್ ನೀಡಿಬಿಟ್ಟರು. ಬಾಲ್ ದೂರಕ್ಕೆ ಹೋಗುವ ಬದಲು 30 ಯಾರ್ಡ್ ಸರ್ಕಲ್ ಒಳಗೆ ಬಿದ್ದು ಬಿಟ್ಟಿತು, ಹೀಗಿದ್ದಾಗ ವಿರಾಟ್ ಕೊಹ್ಲಿ ಸೆಂಚ್ಯುರಿ ಮಿಸ್ ಮಾಡಿಕೊಂಡು 70 ರನ್‌ಗೆ ಔಟ್ ಆಗಿಬಿಟ್ಟರು. ಇದು ಕೊಹ್ಲಿ ಅವರ ಅಭಿಮಾನಿಗಳಿಗೆ ಭಾರಿ ದೊಡ್ಡ ಆಘಾತವನ್ನೇ ನೀಡಿಬಿಟ್ಟಿತು. ಕೆಲವೇ ರನ್‌ಗಳ ಅಂತರದಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಮಿಸ್ ಮಾಡಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+