RCB Phil Salt: ಐಪಿಎಲ್ 2026 ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಸ್ಟಾರ್ ಫಿಲ್ ಸಾಲ್ಟ್ ಹೇಳಿಕೆಯೊಂದು ಭಾರೀ ವೈರಲ್
RCB Phil Salt: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿಯು ಬಲಿಷ್ಠ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲ್ಲುವ ಮೂಲಕ ಚೊಚ್ಚಲ ಟ್ರೋಫಿ ಎತ್ತಿಡಿದಿತು. ಇದೀಗ ಎಲ್ಲರ ಚಿತ್ತ 2026ರ ಸೀಸನ್‌ನತ್ತ ನೆಟ್ಟಿದೆ. ಈಗ ಆರ್‌ಸಿಬಿ ಸ್ಟಾರ್ ಫಿಲ್ ಸಾಲ್ಟ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ಇದು ಭಾರೀ ವೈರಲ್ ಆಗಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿಯನ್ನು ಎತ್ತಿಹಿಡಿದಿರಲಲ್ಲಿ. ಆದರೆ, ಈ ಕೊರಗನ್ನೂ 18ನೇ ಆವೃತ್ತಿಯಲ್ಲಿ ನೆರವೇರಿಸಿತು. ಇದಕ್ಕೆ ಪ್ರಮುಖ ಕಾರಣವೇ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದು ಎಂದರೆ ತಪ್ಪಾಗಲಾದರು.

ಹೌದು.. ಕಳೆದ 17 ಸೀಸನ್‌ಗಳವರೆಗೂ ಆರ್‌ಸಿಬಿಯು ಯಾರನ್ನ ಯಾವ ಸ್ಥಾನದಲ್ಲಿ ಆಡಿಸಬೇಕು ಎನ್ನುವ ಗೊಂದಲದಲ್ಲಿತ್ತು. ಆದ್ದರಿಂದ ಬ್ಯಾಟಿಂಗ್ ಅಥವಾ ಬೌಲಿಂಗ್‌ನಲ್ಲಿ ಎಡವಿ ಕೊನೆ ಹಂತದಲ್ಲಿ ಸೋಲನುಭವಿಸುತ್ತಲೇ ಬಂದಿತ್ತು. ಆದರೆ, 2025ರಲ್ಲಿ ಬಲಿಷ್ಠ ತಂಡ ಹೊಂದುವ ಮೂಲಕ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ಹೀಗೆ ಎಲ್ಲಾ ತಂಡಗಳಿಗಿಂತ ಘಟಾನುಗಟಿ ಆಟಗಾರರನ್ನು ಹೊಂದಿರುವ ತಂಡ ಎನಿಸಿಕೊಂಡಿದೆ.
ಇದೀಗ 2026ರ ಆವೃತ್ತಿಯ ಮಿನಿ ಹರಾಜೀಗೂ ಮೊದಲೇ ಆರ್‌ಸಿಬಿ ಸ್ಟಾರ್ ಆಟಗಾರ ಫಿಲ್ ಸಾಲ್ಟ್ ಹೇಳಿಕೆಯೊಂದನ್ನು ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಹಾಗಾದ್ರೆ ಏನೆಲ್ಲಾ ಹೇಳಿದ್ದಾರೆ ಎನ್ನವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ನೋಡಿ.
ಐಪಿಎಲ್ 2025ರ ಹರಾಜಿನಲ್ಲಿ ಆರ್‌ಸಿಬಿಗೆ ಬಿಕರಿಯಾದ ಬಳಿಕ ತಮ್ಮ ಅನುಭವ ಹೇಗಿತ್ತು ಎಂಬುದರ ಅನುಭವವನ್ನು ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ ಹಂಚಿಕೊಂಡಿದ್ದಾರೆ. ಫ್ರಾಂಚೈಸಿಗೆ ತಾವು ಸಹಜವಾಗಿಯೇ ಸೂಕ್ತ ಎಂದು ತಕ್ಷಣವೇ ಭಾವಿಸಿದೆ ಎಂದು ಹೇಳಿದರು.
ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, "ತಂಡದ ಶೈಲಿ ಮತ್ತು ಸಂವಹನದ ಸ್ಪಷ್ಟತೆಯು ಪರಿವರ್ತನೆಯನ್ನು ಸುಗಮಗೊಳಿಸಿದೆ. ನನ್ನ ಮೊದಲ ಆಲೋಚನೆ ಅಂದ್ರೆ, ಇದು ನಾನು ಆಡಲು ನಿಜವಾಗಿಯೂ ಸೂಕ್ತ ತಂಡ. ಆರ್‌ಸಿಬಿ ಯಾವಾಗಲೂ ತಮ್ಮನ್ನು ತಾವು ನಿರ್ವಹಿಸಿಕೊಂಡ ರೀತಿ, ಅವರು ಆಡುವ ಕ್ರಿಕೆಟ್‌ನ ಬ್ರ್ಯಾಂಡ್, ಇದೆಲ್ಲವೂ ನನಗೆ ಇಷ್ಟ ಆಯಿತು ಎಂದು ಹೇಳಿದರು.
ಹರಾಜಿನ ಬಳಿಕ ಅವರೊಂದಿಗಿನ ನನ್ನ ಮೊದಲ ಸಂಭಾಷಣೆಯಿಂದ, ಅವರು ನನ್ನನ್ನು ಏಕೆ ಬಯಸುತ್ತಾರೆ ಹಾಗೂ ಅವರು ನನಗಾಗಿ ಯಾವ ಪಾತ್ರವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ ಎಂದು ನನಗೆ ಸ್ಪಷ್ಟವಾಗಿ ಅರ್ಥವಾ ಆಗುತ್ತಿತ್ತು. ಎಲ್ಲವೂ ನನ್ನ ಆಟಕ್ಕೆ ಹೊಂದಿಕೆ ಆಗುತ್ತದೆ ಎಂದು ಭಾವಿಸಿದೆ ಎಂದು ಹೇಳಿದರು. ಆರ್‌ಸಿಬಿ ಫಿಲ್ ಸಾಲ್ಟ್ ಅವರನ್ನು ಹರಾಜಿನಲ್ಲಿ 11.50 ಕೋಟಿ ರೂಪಾಯಿಗಳಿಗೆ ಖರೀದಿಸಿತು. ಇದಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ತೋರುವ ಮೂಲಕ ಟ್ರೋಫಿ ಗೆಲುವಿಗೆ ಪ್ರಮುಖರಾದವರಲ್ಲಿ ಒಬ್ಬರಾಗಿದ್ದಾರೆ. ಹೀಗೆ ಅವರು ಕೊನೇವರೆಗೂ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸಿದರು.












Click it and Unblock the Notifications