RCB: ಈ ಬೌಲರ್‌ಗಳಿದ್ದರೆ ಆರ್‌ಸಿಬಿಗೆ ಕಪ್‌ ಸಿಗೋದು ಫಿಕ್ಸ್!

ಇಂಡಿಯನ್ ಪ್ರೀಮಿಯರ್ ಲೀಗ್ ( IPL) 2025ರ ಮೆಗಾ ಹರಾಜಿಗೆ ಇನ್ನು ಒಂದು ವಾರ ಮಾತ್ರ ಸಮಯ ಬಾಕಿ ಇದ್ದು, ಎಲ್ಲಾ ತಂಡಗಳು ಖರೀದಿಸಬೇಕಾದ ಆಟಗಾರರ ಪಟ್ಟಿಯನ್ನು ರೆಡಿ ಮಾಡಿಕೊಂಡು ಕಾಯುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೂವರು ಆಟಗಾರರನ್ನು ಉಳಿಸಿಕೊಂಡು ಉಳಿದ ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಿದೆ. 83 ಕೋಟಿ ರೂಪಾಯಿ ಪರ್ಸ್ ಹೊಂದಿದ್ದು ಬಲಿಷ್ಠ ತಂಡವನ್ನು ಕಟ್ಟಲು ಎಲ್ಲಾ ಲೆಕ್ಕಾಚಾರ ಹಾಕಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಯಾವಾಗಲೂ ಬೌಲಿಂಗ್ ಸಮಸ್ಯೆಯಾಗಿದೆ. ಈ ಬಾರಿ ಮೆಗಾ ಹರಾಜಿನಲ್ಲಿ ಬಲಿಷ್ಠ ಬೌಲಿಂಗ್‌ ಪಡೆಯನ್ನು ಕಟ್ಟುವ ಯೋಜನೆಯಲ್ಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾರು ಪರಿಣಾಮಕಾರಿ ಬೌಲಿಂಗ್ ಮಾಡಬಹುದು, ಯಾರೆಲ್ಲಾ ಇದ್ದರೆ ಆರ್ ಸಿಬಿ ಬೌಲಿಂಗ್ ಬಲಿಷ್ಠವಾಗಲಿದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.

rcb should target bowlers ipl mega auction 2025

ಯಶ್ ದಯಾಳ್‌ರನ್ನು ರಿಟೇನ್ ಮಾಡಿಕೊಂಡಿರುವ ಆರ್ ಸಿಬಿ ಇದೀಗ ವೇಗಿಗಳು ಮತ್ತು ಸ್ಪಿನ್ನರ್ ಗಳ ಶಾರ್ಟ್ ಲಿಸ್ಟ್ ರೆಡಿ ಮಾಡಿಕೊಂಡಿದೆ. ಅಭಿಮಾನಿಗಳು ಕೂಡ ಹಲವು ಬೌಲರ್ ಗಳ ಹೆಸರನ್ನು ಸೂಚಿಸಿದ್ದು, ಆ ಆಟಗಾರರನ್ನು ಖರೀದಿ ಮಾಡಿದರೆ ತಂಡದ ಬೌಲಿಂಗ್ ಬಲಿಷ್ಠವಾಗಲಿದೆ ಎಂದು ಹೇಳಿದ್ದಾರೆ.

ಆರ್ ಸಿಬಿಯಲ್ಲಿ ಯಾರೆಲ್ಲಾ ಇರಬೇಕು?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ 7 ಪಂದ್ಯಗಳನ್ನಾಡಲಿದೆ. ಈ ಪಿಚ್‌ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಬೌಲಿಂಗ್ ಮಾಡುವ ಅನುಭವಿ ಬೌಲರ್ ಗಳು ಬೇಕು. ಟಿ20 ಸ್ಪೆಷಲಿಸ್ಟ್ ಬೌಲರ್ ಇದ್ದರೆ ಮಾತ್ರ ಇಲ್ಲಿ ಬ್ಯಾಟರ್ ಗಳನ್ನು ಕಟ್ಟಿಹಾಕಬಹುದು. ಅಂತಹ ಬೌಲರ್ ಗಳ ಪಟ್ಟಿ ಇಲ್ಲಿದೆ.

ಟ್ರೆಂಟ್ ಬೌಲ್ಟ್: ನ್ಯೂಜಿಲೆಂಡ್ ತಂಡದ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಯಾವುದೇ ತಂಡಕ್ಕೆ ಬೇಕಾದ ಬೌಲರ್ ಆಗಿದ್ದಾರೆ. ಎಡಗೈ ವೇಗಿ ಅರ್ ಸಿಬಿಗೆ ಬಂದರೆ ಪವರ್ ಪ್ಲೇನಲ್ಲಿ ತಂಡದ ಬೌಲಿಂಗ್‌ಗೆ ಹೆಚ್ಚಿನ ಬಲ ತಂದುಕೊಡಲಿದ್ದಾರೆ.

ವೈಶಾಕ್‌ ವಿಜಯ್‌ಕುಮಾರ್: ಆರ್ ಸಿಬಿ ತಂಡದ ಮಾಜಿ ವೇಗಿ ವೈಶಾಕ್ ವಿಜಯ್ ಕುಮಾರ್ ತಂಡಕ್ಕೆ ಮರಳುವುದು ಬಹುತೇಕ ಖಚಿತವಾಗಿದೆ. ಬೆಂಗಳೂರಿನಲ್ಲಿ ಆಡಿರುವ ಅನುಭವ ಹೊಂದಿದ್ದು. ಇತ್ತೀಚೆಗೆ ಬ್ಯಾಟಿಂಗ್‌ನಲ್ಲಿ ಕೂಡ ಉತ್ತಮವಾಗಿದ್ದು ಅವರನ್ನು ಮತ್ತೆ ಖರೀದಿಸಲು ಆರ್ ಸಿಬಿ ಯೋಜಿಸಿದೆ.

ರವಿಚಂದ್ರನ್ ಅಶ್ವಿನ್; ರವಿಚಂದ್ರನ್ ಅಶ್ವಿನ್ ಕೂಡ ಆರ್ ಸಿಬಿ ತಂಡಕ್ಕೆ ಉತ್ತಮ ಆಯ್ಕೆಯಾಗಲಿದ್ದಾರೆ. ಅಪಾರ ಅನುಭವ ಹೊಂದಿದ್ದು, ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಕೂಡ ಹೊಂದಿದ್ದಾರೆ.

ಯುಜ್ವೇಂದ್ರ ಚಹಾಲ್‌; ಆರ್ ಸಿಬಿ ಮಾಜಿ ಆಟಗಾರ ಯುಜ್ವೇಂದ್ರ ಚಹಾಲ್‌ ಕೂಡ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎನ್ನುವ ಬಗ್ಗೆ ಕೂಡ ತಿಳಿದಿದ್ದು, ಅವರು ತಂಡಕ್ಕೆ ಮರಳಿದರೆ ಆರ್ ಸಿಬಿ ಬೌಲಿಂಗ್‌ಗೆ ಹೆಚ್ಚಿನ ಬಲ ತುಂಬಲಿದ್ದಾರೆ.

ಮಿಚೆಲ್ ಸ್ಟಾರ್ಕ್; ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್, ಕಲೆದ ವರ್ಷ 24.75 ಕೋಟಿ ರೂಪಾಯಿಗೆ ಕೆಕೆಆರ್ ತಂಡದ ಪಾಲಾಗಿದ್ದರು. ಈ ಬಾರಿ ಮೆಗಾ ಹರಾಜಿನಲ್ಲಿ ಅವರು ದೊಡ್ಡ ಮೊತ್ತ ಪಡೆಯುವ ನಿರೀಕ್ಷೆ ಇದ್ದು, ಆರ್ ಸಿಬಿ ಸ್ಟಾರ್ಕ್‌ಗಾಗಿ ಪ್ರಯತ್ನ ಮಾಡಬಹುದು.

ಉಳಿದಂತೆ ಭುವನೇಶ್ವರ್ ಕುಮಾರ್, ಸಾಯಿ ಕಿಶೋರ್, ಟಿ ನಟರಾಜನ್, ವಾಷಿಂಗ್ಟನ್ ಸುಂದರ್, ನೂರ್ ಅಹಮದ್‌, ಮೊಹಮ್ಮದ್ ಶಮಿ ಕೂಡ ಉತ್ತಮ ಆಯ್ಕೆಯಾಗಿದ್ದು ಆರ್ ಸಿಬಿ ಯಾರ ಮೇಲೆ ಒಲವು ತೋರಿಸುತ್ತಾರೆ ಎನ್ನುವುದು ನವೆಂಬರ್ 24, 25ರಂದು ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+