IPL 2025: ಬೆಂಗಳೂರಿನಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ರದ್ದಾಗುವ ಸಾಧ್ಯತೆ- ಕಾರಣ ಇಲ್ಲಿದೆ

ಬೆಂಗಳೂರು ಏಪ್ರಿಲ್ 18: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು (ಏಪ್ರಿಲ್ 18) ರಾಯಲ್ ಚಾಲೆಂಜರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2025ರ 34ನೇ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯ ರದ್ದಾಗುತ್ತಾ ಅನ್ನೋ ಅನುಮಾನಗಳು ಹೆಚ್ಚಾಗಿವೆ. ಈ ಅನುಮಾನ ಹುಟ್ಟಿಕೊಳ್ಳಲು ಬಲವಾದ ಕಾರಣ ಇದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಮಳೆಯ ಅರ್ಭಟ ಜೋರಾಗಿದೆ. ಸಂಜೆ ಆದರೆ ಸಾಕು ಕಳೆದರೆಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಧ್ಯಾಹ್ನದ ವೇಳೆ ಮಳೆ ಮೋಡಗಳು ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಅಲ್ಲದೆ ಈ ದಿನ ಕೂಡ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

RCB Punjab Kings match in Bengaluru likely to be cancelled

ಹೌದು ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರಿನಲ್ಲಿ ಸಂಜೆ ಹಾಗೂ ರಾತ್ರಿ ಮಳೆ ಹೆಚ್ಚಾಗಿದೆ. ಇದರಿಂದ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರಿಗೂ ತೊಂದರೆಯಾಗಿತ್ತು. ಹೀಗೆ ಆಟದ ನಡುವೆ ಅಥವಾ ಆಟಕ್ಕಿಂತ ಮುಚ್ಚೆ ಧಾರಾಕಾರವಾಗಿ ಮಳೆಯಾದರೆ ಆಟ ನಡೆಯುವುದು ಕಷ್ಟವಿದೆ. ವಿಶೇಷವಾಗಿ ನಿರಂತರವಾಗಿ ಮಳೆಯಾದರೆ ಆಟ ಮುಂದೂಡುವ ಸಾಧ್ಯತೆಗಳು ಇವೆ.

ಆದರೆ ಚಿನ್ನಸ್ವಾಮಿ ಕ್ರೀಡಾಂಗಳದಲ್ಲಿ ಮಳೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಳೆ ಬಂದರೆ ನೆಲಕ್ಕೆ ದೊಡ್ಡ ದೊಡ್ಡ ಟಾರ್ಪಲಿನ್ ಹಾಸಲಾಗುತ್ತದೆ. ಇದರಿಂದ ನೆಲ ಒದ್ದೆಯಾಗುವುದಿಲ್ಲ. ಅಲ್ಲದೆ ನೀರು ಹರಿದು ಹೋಗಲು ದೊಡ್ಡ ಚರಂಡಿ ವ್ಯವಸ್ಥೆ ಕೂಡ ಇದೆ. ಹೀಗಾಗಿ ಸಾಧಾರಣ ಮಳೆಯಾದರೆ ಅಥವ ಜೋರಾಗಿ ಮಳೆ ಬಂದು ನಿಂತು ಹೋದರೆ ಸಮಸ್ಯೆಗಳು ಆಗುವುದಿಲ್ಲ.

RCB Punjab Kings match in Bengaluru likely to be cancelled

ಆದರೆ ನಿರಂತರವಾಗಿ ಜಿಟಿ ಜಿಟಿ ಮಳೆಯಾದರೆ ಪಂದ್ಯ ನಡೆಸುವುದು ತುಂಬಾ ಕಷ್ಟ ಇದೆ. ಹವಾಮಾನ ವರದಿ ಪ್ರಕಾರ ಇಂದು (ಏಪ್ರಿಲ್ 18) ಬೆಂಗಳೂರಿನಲ್ಲಿ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು ಸಂಜೆಗೆ 22 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ಎಂದಿನಂತೆ ಮಧ್ಯಾಹ್ನದಿಂದ ಮಳೆ ಮೋಡ ಆವರಿಸಲಿದೆ. ಇದಲ್ಲದೆ ಗುಡುಗು, ಮಿಂಚು, ಗಾಳಿಯೊಂದಿಗೆ ಧಾರಾಕಾರ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಆದರೆ ಇಂದು ನಡೆಯಲಿರುವ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಕುತೂಹಲಕಾರಿಯಾಗಿದೆ. ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಈ ಎರಡೂ ತಂಡಗಳು ತುಂಬಾ ಸ್ಟ್ರಾಂಗ್ ಆಗಿದ್ದು ಕಳೆದ ಪಂದ್ಯದಲ್ಲಿ ಬಲಿಷ್ಠ ತಂಡಗಳನ್ನು ಸೋಲಿಸಿವೆ. ಹೀಗಾಗಿ ಈ ಎರಡು ತಂಡಗಳ ನಡುವೆ ಪೈಪೋಟಿ ಜೋರಾಗಿರಲಿದ್ದು ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ.

Take a Poll

ತನ್ನ ಮನೆಯಂಗಳದಲ್ಲಿ ಗೆಲುವು ಸಾಧಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿದ್ಧವಾಗಿದ್ದರೆ ಇದಕ್ಕೆ ಪಂಜಾಬ್ ಕಿಂಗ್ಸ್‌ ತಂಡ ಸವಾಲು ಹಾಕಿದೆ. ಈ ಎರಡು ತಂಡಗಳ ನಡುವೆ ನಡೆಯುವ ಪಂದ್ಯದಲ್ಲಿ ಯಾರಿಗೆ ಜಯ ಸಿಗಲಿದೆ ಗೊತ್ತಿಲ್ಲ. ಆದರೆ ಈ ಮ್ಯಾಚ್ ವೀಕ್ಷಣೆಗೆ ಈಗಾಗಲೇ ಹಲವಾರು ಜನ ಕ್ರೀಡಾಂಗಣದಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ.

ಹೇಳಿಕೇಳಿ ಇಂದು ಗುಡ್‌ ಫ್ರೈಡೇ. ವಾರಾಂತ್ಯದಲ್ಲಿ ಬಹುತೇಕ ಜನ ಫ್ರೀ ಆಗೇ ಇರುತ್ತಾರೆ. ಯುವಕರ ಹಾರ್ಟ್ ಫೇವರೇಟ್ ಗೇಮ್ ಆದ ಕ್ರಿಯೆಟ್ ನೋಡಲು ಇಂದು ಜನ ಸಾಗರವೇ ಕ್ರೀಡಾಂಗಣದಲ್ಲಿ ಸೇರಿರುತ್ತದೆ. ಆದರೆ ಮಳೆಯಿಂದಾಗಿ ಪಂದ್ಯ ನಿಂತು ಹೋದರೆ ಅಭಿಮಾನಿಗಳಿಗೆ ನಿರಾಸೆಯಾಗೋದು ಗ್ಯಾರಂಟಿ. ಹೀಗಾಗಿ ಇಂದೊಂದು ದಿನ ಪಂದ್ಯ ಮುಗಿದ ಬಳಿಕ ಮಳೆ ಬರಲಿ ಅಂತ ಬೇಡಿಕೊಳ್ಳುತ್ತಿದ್ದಾರೆ ಕ್ರಿಕೆಟ್ ಪ್ರಿಯರು. ಜನರ ಪ್ರಾರ್ಥನೆಗೆ ವರುಣ ಕಿವಿಗೊಡ್ತಾನಾ ಇಲ್ವಾ ಅನ್ನೋದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+