ಕನ್ನಡತಿ ಶ್ರೇಯಾಂಕಾಗೆ ಬೆಂಗಳೂರಿಗರು ಕ್ಲೀನ್ ಬೋಲ್ಡ್: ಆರ್‌ಸಿಬಿ ಕಪ್ ಗೆಲ್ಲೋದು ಗ್ಯಾರಂಟಿ!
ಆರ್‌ಸಿಬಿ ತಂಡ ಕಪ್ ಗೆಲ್ಲೋದು ಪಕ್ಕಾ ಆಗಿದೆ, ಇಂದು ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ನಮ್ಮ ಆರ್‌ಸಿಬಿ ಟೀಂ ಪ್ಲೇಯರ್ಸ್ ಅಬ್ಬರಿಸಿದ್ದಾರೆ. ದೆಹಲಿ ತಂಡದ ಎದುರು, ಬೆಂಗಳೂರು ತಂಡ ಭರ್ಜರಿ ಆಟ ಆಡಿದೆ. ಅದ್ರಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ ನಮ್ಮ ಕನ್ನಡತಿ ಮಾಡಿದ ಮೋಡಿಗೆ ದೆಹಲಿ ತಂಡ ಬೆಚ್ಚಿಬಿತ್ತು. ಶ್ರೇಯಾಂಕಾ ಪಾಟೀಲ್ ಮುದ್ದು ಮುದ್ದಾಗಿ ನಗುತ್ತಾ ಬಂದು, ದೆಹಲಿ ತಂಡವನ್ನು ನೋಡ ನೋಡುತ್ತಲೇ 'ಉಡೀಸ್' ಮಾಡಿಬಿಟ್ಟರು!
ಶ್ರೇಯಾಂಕಾ ಪಾಟೀಲ್ ಕರ್ನಾಟಕ ಮೂಲದ ಆರ್‌ಸಿಬಿ (Royal Challengers Bengaluru) ಆಟಗಾರ್ತಿ. ಹೀಗಾಗಿ ಕನ್ನಡಿಗರು ಮೊದಲಿನಿಂದ ಕೂಡ ಶ್ರೇಯಾಂಕಾ ಪಾಟೀಲ್ ಅವರನ್ನ ಬೆಂಬಲಿಸುತ್ತಾ ಬಂದಿದ್ದಾರೆ. ಅದರಲ್ಲೂ ಇಡೀ ಡಬ್ಲ್ಯೂಪಿಎಲ್ (WPL) ಟೂರ್ನಿಯಲ್ಲಿ ಈ ನಮ್ಮ ಆಟಗಾರ್ತಿ ಅಬ್ಬರಿಸಿದ್ದಾರೆ. ಇಂದಿನ ಪಂದ್ಯದಲ್ಲಂತೂ ಶ್ರೇಯಾಂಕಾ ಅವರ ಬೌಲಿಂಗ್ ದಾಳಿಗೆ ದೆಹಲಿ ಕ್ಯಾಪಿಟಲ್ ತಂಡ ಬೆಚ್ಚಿಬಿದ್ದಿತ್ತು. ಹಾಗಾದರೆ, ಶ್ರೇಯಾಂಕಾ ಪಾಟೀಲ್ ಈ ಪಂದ್ಯದಲ್ಲಿ ಪಡೆದ ವಿಕೆಟ್ ಎಷ್ಟು ಗೊತ್ತಾ? ಮುಂದೆ ಓದಿ.

ಶ್ರೇಯಾಂಕಾ ಪಾಟೀಲ್ ಹವಾ ಜೋರು!
2024ರ ಡಬ್ಲ್ಯೂಪಿಎಲ್ (WPL) ಫೈನಲ್ ಪಂದ್ಯದಲ್ಲಿ, ಆರ್‌ಸಿಬಿ ತಂಡದ ಆರಂಭವಂತೂ ತುಂಬಾನೆ ಕಷ್ಟದಿಂದ ಕೂಡಿತ್ತು. ಅದ್ರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನ್ನಿಂಗ್ಸ್ ಆರಂಭಿಸಿದ ನಾಯಕಿ ಮೆಗ್ ಲ್ಯಾನಿಂಗ್ & ಶಫಾಲಿ ವರ್ಮಾ ಪವರ್ ಪ್ಲೇ ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್‌ನ ಮಾಡಿದರು. ಈ ಜೋಡಿಯು ಮೊದಲನೇ ವಿಕೆಟ್‌ಗೆ, ಕೇವಲ 7 ಓವರ್‌ಗಳಲ್ಲಿ 64 ರನ್‌ನ ಚಚ್ಚಿ ಬಿಸಾಡಿತ್ತು. ಆದರೆ 8ನೇ ಓವರ್ ಎಸೆಯಲು ಬಂದ ಸೋಫಿ ಮೊಲಿನೆಕ್ಸ್ ಮೊದಲ ಎಸೆತದಲ್ಲೇ ಭರ್ಜರಿ ಆಟಗಾರ್ತಿ ಶಫಾಲಿ ವರ್ಮಾ ವಿಕೆಟ್ ಉರುಳಿಸಿದರು. ಅಲ್ಲಿಂದಲೇ ನೋಡಿ ದೆಹಲಿಗೆ ಶುರುವಾಗಿದ್ದು ಗ್ರಹಚಾರ! ಇನ್ನು ಮುಂದೆ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅಬ್ಬರಿಸಿದ್ರು.
ಶಫಾಲಿ ವರ್ಮಾ 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸೇರಿ 44 ರನ್‌ಗಳನ್ನ ಬಾರಿಸಿ ಔಟಾದ ಬಳಿಕ ಕೇವಲ 25 ರನ್ ಗಳಿಸುವ ಒಳಗೆ ಬರೋಬ್ಬರಿ 7 ವಿಕೆಟ್ ಕಳೆದುಕೊಂಡು ದೆಹಲಿ ಕ್ರಿಕೆಟ್ ತಂಡ ನರಳಾಡಿತು. ಆಗಲೇ, ಇನ್ನೇನು ದೆಹಲಿ ತಂಡ ಕಂಬ್ಯಾಕ್ ಮಾಡಿ ಆರ್‌ಸಿಬಿಗೆ ಸವಾಲಿನ ಮೊತ್ತ ಕೊಡಲಿದೆ ಎನ್ನುವಷ್ಟರಲ್ಲೇ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸಾಲು ಸಾಲು ವಿಕೆಟ್ ಉರುಳಿಸಿದರು ದೆಹಲಿ ತಂಡವನ್ನು ಮಕಾಡೆ ಮಲಗುವಂತೆ ಮಾಡಿದ್ರು. ಹಾಗಾದರೆ ಶ್ರೇಯಾಂಕಾ ಪಾಟೀಲ್ ದೆಹಲಿ ತಂಡದ ವಿರುದ್ದ ಪಡೆದ ವಿಕೆಟ್ ಎಷ್ಟು ಗೊತ್ತೆ? ಮುಂದೆ ಓದಿ.
ಶ್ರೇಯಾಂಕಾ ಅಬ್ಬರಕ್ಕೆ ದಾಖಲೆ ಉಡೀಸ್!
ಹೀಗೆ ಶ್ರೇಯಾಂಕಾ ಪಾಟೀಲ್ 3.3 ಓವರ್‌ಗಳಲ್ಲಿ 12 ರನ್ ನೀಡಿ 4 ವಿಕೆಟ್ ಕಬಳಿಸಿದರೆ ಸೋಫಿ ಮೊಲಿನೆಕ್ಸ್ 4 ಓವರ್‌ಗಳಲ್ಲಿ 20 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಆಶಾ ಸೋಬನಾ 3 ಓವರ್‌ಗಳಲ್ಲಿ ಕೇವಲ 14 ರನ್ ನೀಡಿ 2 ವಿಕೆಟ್ ಪಡೆದರು. ಈ ಮೂಲಕ ದೆಹಲಿ ತಂಡವನ್ನು 113 ರನ್‌ಗೆ ಆಲೌಟ್ ಮಾಡಿತು ಆರ್‌ಸಿಬಿ ತಂಡ. ಇದೀಗ ಆರ್‌ಸಿಬಿ ತಂಡವು, ಉತ್ತಮವಾಗಿ ಆಡುತ್ತಿದ್ದು ಫೈನಲ್ ಪಂದ್ಯ ಗೆಲ್ಲಲು ಇನ್ನು ಕೆಲವೇ ಓವರ್ ಬಾಕಿ ಇವೆ.
Alright, this is the story to be written.
— Royal Challengers Bangalore (@RCBTweets) March 17, 2024
Our bowlers have done an incredible job. Time to keep our heads steady and get the job done! 👊#PlayBold #ನಮ್ಮRCB #SheIsBold #WPL2024 #WPLFinal #DCvRCB pic.twitter.com/LIGBOKKC5M
ಒಟ್ನಲ್ಲಿ ಆರ್‌ಸಿಬಿ ತಂಡದ ಮಹಿಳಾ ಆಟಗಾರರ ಆಟಕ್ಕೆ ಇದೀಗ ಕನ್ನಡಿಗರು ಫಿದಾ ಆಗಿದ್ದು, ಇನ್ನೇನು ನಮ್ಮ ಆರ್‌ಸಿಬಿ ಹುಡುಗಿಯರು ಹೊಸ ಇತಿಹಾಸ ನಿರ್ಮಿಸಲು ಗೆಲುವಿಗೆ ತುಂಬಾ ಹತ್ತಿರದಲ್ಲೇ ಇದ್ದಾರೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಕೂಡ ಈ ಸಂಭ್ರಮವನ್ನ ತಮ್ಮ ಖುಷಿಗೆ ತಕ್ಕಂತೆ ಆಚರಿಸಲು ಸಜ್ಜಾಗಿದ್ದಾರೆ.












Click it and Unblock the Notifications