RCB: ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಯಾರೂ ಊಹಿಸಲಾರದ ಹೊಸ ನಾಯಕ ಎಂಟ್ರಿ!

IPL 2025 RCB: ಅರ್ಧಕ್ಕೆ ನಿಂತಿದ್ದ ಐಪಿಎಲ್‌ 2025 ಟೂರ್ನಿ ಮತ್ತೆ ಮೇ 17ರಿಂದ ಆರಂಭವಾಗಲಿದೆ. ಇದರಿಂದ ಕ್ರಿಕೆಟ್‌ ಅಭಿಮಾನಿಗಳಿಗೆ ಸಂಸತ ಆದಂತಾಗಿದೆ. ಮೊದಲ ಪಂದ್ಯವೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್‌ ರೈಡರ್ಸ್‌ ನಡುವೆ ನಡೆಯಲಿದ್ದು, ಈ ನಡುವೆಯೇ ಆರ್‌ಸಿಬಿಗೆ ಯಾರೂ ಊಹಿಸಲಾರದ ಹೊಸ ನಾಯಕನ ಎಂಟ್ರಿಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಾದ್ರೆ ಯಾರು ಹಾಗೂ ಹಳೆ ನಾಯಕ ಕೈಕೊಡಲು ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾರತ-ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆ ಆಟಗಾರರು, ಅಭಿಮಾನಿಗಳ ಹಿತದೃಷ್ಟಿಯಿಂದ ಪ್ರಾಂಚೈಸಿಗಳ ಮೇರೆಗೆ ಬಿಸಿಸಿಐ ಐಪಿಎಲ್‌ ರದ್ದಪಡಿಸಿ ಮುಂದೂಡಿಕೆ ಮಾಡಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಐಪಿಎಲ್‌ ಹೊಸ ವೇಳಾಪಟ್ಟಿಯೊಂದಿಗೆ ಪುನರಾಂಭ ಮಾಡಲಾಗಿತ್ತಿದೆ. ಮೊದಲ ಪಂದ್ಯವೇ ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಮೇ 17ರಂದು ನಡೆಯಲಿದೆ.

RCB New Captain Likely to Enter for Bengaluru team before resumption IPL

ಅಂದಿನ ಪಂದ್ಯಕ್ಕೆ ಕೈ ಬೆರಳಿನ ಗಾಯದ ಕಾರಣ ಆರ್‌ಸಿಬಿಯ ನಾಯಕ ರಜತ್ ಪಾಟಿದಾರ್ ಬಹುತೇಕ ಅಲಭ್ಯರಾಗುವ ಸಾಧ್ಯತೆಯಿದೆ. ಈ ಸ್ಟಾರ್ ಆಟಗಾರ ಹೊರಗುಳಿದರೆ, ತಂಡಕ್ಕೆ ಹೊಡೆತ ಬೀಳಲಿದೆ. ಮತ್ತೊಂದೆಡೆ ಇವರ ಸ್ಥಾನವನ್ನು ಯಾರು ನಿಭಾಯಿಸಲಿದ್ದಾರೆ ಎನ್ನುವ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಹಾಗಾದ್ರೆ ಹೊಸ ನಾಯಕ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಆರಂಭದಿಂದಲೂ ವಿಕೆಟ್‌ ಕೀಪರ್ ಹಾಗೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿರುವ ಜಿತೇಶ್ ಶರ್ಮಾ ಅವರು ರಜತ್ ಪಾಟೀದಾರ್ ಸ್ಥಾನ ತುಂಬಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಮಾಧ್ಯಮಗಳ ಮುಂದೆ ಸಂದರ್ಶನವೊಂದರಲ್ಲಿ ರಜರ್ ಪಾಟೀದಾರ್ ಗಾಯದಿಂದ ಹೊರಗುಳಿದ ಕಾರಣ, ತಾವು ನಾಯಕರಾಗುವ ಬಗ್ಗೆ ಹೇಳಿಕೊಂಡಿದ್ದರು.

"ನನಗೆ ಆಡಳಿತ ಮಂಡಳಿಯಿಂದ ನಾಯಕತ್ವದ ಆಫರ್ ಸಿಕ್ಕಿದ್ದು ನನ್ನ ಅದೃಷ್ಟ. ನಾನು ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಳ್ಳುವುದು ನನಗೆ ಮತ್ತು ನನ್ನ ಕುಟುಂಬಕ್ಕೆ ದೊಡ್ಡ ಸಂತಸದ ವಿಚಾರವಾಗಿದೆ. ಒಬ್ಬ ಆಟಗಾರ ಮತ್ತು ನಾಯಕನಾಗಿ, ನಾನು ತಂಡದ ಸಂಯೋಜನೆಯ ಬಗ್ಗೆ ಯೋಚಿಸುತ್ತಿದ್ದೆ. ನಾನು ಎರಡ್ಮೂರು ದಿನಗಳ ಕಾಲ ಕೋಚ್ ಮತ್ತು ಆಟಗಾರರೊಂದಿಗೆ ಮಾತನಾಡಿದ್ದೆ. ಬ್ಯಾಟಿಂಗ್ ಕ್ರಮಾಂಕ, ಪಾಯಿಂಟ್ಸ್‌ ಟೇಬಲ್ ಮತ್ತು ಪ್ಲೇಆಫ್ ಮೇಲೆ ಗಮನಹರಿಸಿದ್ದೆ. ಅಲ್ಲದೆ, ನಾನು ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೆ," ಎಂದು ಹೇಳಿ ಗಮನ ಸೆಳೆದಿದ್ದರು.

ಇದೀಗ ರಜತ್ ಪಾಟೀದಾರ್ ಚೇತರಿಸಿಕೊಳ್ಳುವ ಹಂತದಲ್ಲಿದ್ದು, ತಂಡಕ್ಕೆ ಮರಳುವ ಸಾಧ್ಯತೆತಿದೆ. ಒಂದು ವೇಳೆ ಅಲಭ್ಯರಾದರೆ, ಮುಂದಿನ ಪಂದ್ಯಕ್ಕೆ ಜಿತೇಶ್ ಶರ್ಮಾ ಅವರೇ ನಾಯಕರಾಗಿ ತಂಡವನ್ನು ಮೆನ್ನಡೆಸಲಿದ್ದಾರೆ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಪ್ಲೇ ಆಫ್‌ ತಲುಪುವ ಘಟ್ಟದಲ್ಲೇ ಆರ್‌ಸಿಬಿಗೆ ಒಂದಲ್ಲ ಒಂದು ರೀತಿಯಲ್ಲಿ ಆಘಾತಗಳು ಎದಯರಾಗುತ್ತಲಿವೆ.

ಆರ್‌ಸಿಬಿಗೆ ಇನ್ನೂ ಮೂರು ಪಂದ್ಯಗಳು ಬಾಕಿ ಇದ್ದು, ಅದರಲ್ಲು ಉತ್ತಮ ರನ್‌ ರೇಟ್‌ನ ಮೂಲಕ ಇನ್ನೊಂದು ಒಂದ್ಯ ಗೆದ್ದರೂ ಪ್ಲೇ ಆಫ್‌ ಹಾದಿ ಮತ್ತಷ್ಟು ಸುಲಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೀಗ ಸದ್ಯ ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗೊಳೊದಿಗೆ ಎರಡನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+