IPL 2025: ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಮಹತ್ವದ ಸುಳಿವು ಕೊಟ್ಟ ಆರ್‌ಸಿಬಿ
ಐಪಿಎಲ್ 2025ರ ಆವೃತ್ತಿಗೆ ಮುನ್ನ ಮೆಗಾ ಹರಾಜು ನಡೆಯಲಿದ್ದು ಪ್ರತಿ ತಂಡಕ್ಕೆ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನ ನೀಡಲು ಅಕ್ಟೋಬರ್ 30 (ಇಂದು) ಕೊನೆಯ ದಿನವಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಆಡಳಿತ ಮಂಡಳಿಗೆ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ನೀಡಿವೆ.
ಅಕ್ಟೋಬರ್ 31 (ಗುರುವಾರ) ಸಂಜೆ 4.30 ಬಳಿಕ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಫ್ರಾಂಚೈಸಿಗಳು ಬಿಡುಗಡೆ ಮಾಡಲಿವೆ. ಐಪಿಎಲ್ ರಿಟೆನ್ಷನ್‌ಗೆ ಮುನ್ನವೇ ಆರ್ ಸಿಬಿ ತನ್ನ ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟಿದೆ. ಕ್ರಾಸ್‌ವರ್ಡ್ ಪಜಲ್‌ನಲ್ಲಿ ಆಟಗಾರರ ಹೆಸರನ್ನು ಹುಡುಕುವಂತೆ ಕೇಳಿದೆ.

ಆರ್ ಸಿಬಿ ಅಧಿಕೃತ ಎಕ್ಸ್ ಖಾತೆಯಲ್ಲಿ ತಾವು ಉಳಿಸಿಕೊಳ್ಳಬಹುದಾದ ಆಟಗಾರರ ಹೆಸರನ್ನು ನೀಡಿದೆ. ಆದರೆ ಇದನ್ನು ಕ್ರಾಸ್‌ವರ್ಡ್ ಪಜಲ್ ಮೂಲಕ ನೀಡಿದ್ದು, ನೀವೆ ಆಟಗಾರರನ್ನು ಹುಡುಕಿ ಎಂದು ಅಭಿಮಾನಿಗಳನ್ನು ಕೇಳಿದೆ. ಅಭಿಮಾನಿಗಳು ಕೆಲವೇ ಕ್ಷಣಗಳಲ್ಲಿ ಹೆಸರುಗಳನ್ನು ಗುರುತಿಸಿದ್ದಾರೆ. ಈ ಕ್ರಾಸ್‌ವರ್ಡ್ ಪಜಲ್‌ನಲ್ಲಿ ಎಂಟು ಆಟಗಾರರ ಹೆಸರನ್ನು ನೀಡಲಾಗಿದೆ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ವಿಲ್ ಜ್ಯಾಕ್ಸ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್ ಮತ್ತು ರಜತ್ ಪಾಟಿದಾರ್ ಹೆಸರುಗಳನ್ನು ನೀಡಲಾಗಿದ್ದು, ಇದರಲ್ಲಿ ಆರು ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಮೊಹಮ್ಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್ ರಿಟೈನ್ ಮಾಡಿಕೊಳ್ಳಬೇಡಿ ಎಂದು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.
𝗧𝗵𝗲 𝘁𝗿𝘂𝘁𝗵 𝗶𝘀 𝗻𝗼𝘁 𝗮𝗹𝘄𝗮𝘆𝘀 𝘄𝗵𝗮𝘁 𝘆𝗼𝘂 𝘀𝗲𝗲. 𝗜𝘁 𝗶𝘀 𝗮𝗯𝗼𝘂𝘁 𝘄𝗵𝗮𝘁 𝘆𝗼𝘂 𝗮𝗰𝘁𝘂𝗮𝗹𝗹𝘆 𝘄𝗮𝗻𝘁 𝘁𝗼 𝘀𝗲𝗲. 👀
— Royal Challengers Bengaluru (@RCBTweets) October 30, 2024
Sneak peek alert! 🚨
Our retentions are shrouded in mystery, waiting for you to uncover. Can you decipher the clues and crack the… pic.twitter.com/lLu5MZ3UI8
ಆರ್ ಸಿಬಿ ಹೇಳಿದ್ದೇನು?
"ಸತ್ಯವು ಯಾವಾಗಲೂ ನೀವು ನೋಡುವಂತಿರುವುದಿಲ್ಲ. ಇದು ನೀವು ನಿಜವಾಗಿಯೂ ಏನನ್ನು ನೋಡಲು ಬಯಸುತ್ತೀರಿ ಎಂಬುದರ ಬಗ್ಗೆಯಾಗಿದ್ದು, ನಮ್ಮ ರಿಟೆನ್ಷನ್ ಫೈನಲ್ ಆಗಿದೆ, ಅದನ್ನು ಬಹಿರಂಗಪಡಿಸಲು ಕಾಯುತ್ತಿದ್ದೇವೆ. ಈ ಸುಳಿವುಗಳನ್ನು ಬಳಸಿಕೊಂಡು ಆಟಗಾರರ ಹೆಸರನ್ನು ಗುರುತಿಸಬಹುದೇ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ವಿಲ್ ಜ್ಯಾಕ್ಸ್ ಮತ್ತು ಯಶ್ ದಯಾಳ್‌ರನ್ನು ಮಾತ್ರ ಉಳಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಆದರೆ ಯಾರನ್ನು ಉಳಿಸಿಕೊಳ್ಳುತ್ತದೆ ಎನ್ನುವ ಕುತೂಹಲಕ್ಕೆ ಗುರುವಾರ ತೆರೆ ಬೀಳಲಿದೆ.
ಆರ್ ಸಿಬಿ ಇದುವರೆಗೂ ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ವಿರಾಟ್ ಕೊಹ್ಲಿ ಮತ್ತೆ ನಾಯಕತ್ವ ವಹಿಸಿಕೊಳ್ಳುತ್ತಾರೆ ಎನ್ನುವ ನಿರೀಕ್ಷೆ ಇದೆ. 2025ರ ಮೆಗಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟುವ ಉತ್ಸಾಹದಲ್ಲಿದೆ ಆರ್ ಸಿಬಿ ಫ್ರಾಂಚೈಸಿ. ದಿನೇಶ್ ಕಾರ್ತಿಕ್ ತಂಡದ ಮೆಂಟರ್ ಆಗಿರುವ ಕಾರಣ ಈ ಬಾರಿ ದೇಶೀಯ ಟೂರ್ನಿಯಲ್ಲಿ ಮಿಂಚಿರುವ ಯುವ ಆಟಗಾರರ ಮೇಲೆ ಫ್ರಾಂಚೈಸಿ ಕಣ್ಣಿಟ್ಟಿದೆ ಎನ್ನಲಾಗಿದೆ.












Click it and Unblock the Notifications