RCB: ಆರ್‌ಸಿಬಿಗೆ ಮತ್ತೊಂದು ಟ್ರೋಫಿ..
RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು 17 ವರ್ಷಗಳ ಬಳಿಕ ಮೊದಲ ಬಾರಿ ಟ್ರೋಫಿ ತನ್ನದಾಗಿಸಿಕೊಂಡಿತು. ಈ ಗೆಲುವನ್ನು ಬರೀ ಕರ್ನಾಟಕ ಮಾತ್ರ ಅಷ್ಟೇ ಅಲ್ಲದೆ, ಇಡೀ ದೇಶವೇ ರಾಯಲ್ ತಂಡದ ಸಂಭ್ರಮಿಸಿತ್ತು. ಇದರ ಬೆನ್ನಲ್ಲೇ ಇದೀಗ ರಾಯಲ್ ಚಾಲೆಂಜರ್ಸ್ ತೆಕ್ಕಗೆ ಮತ್ತೊಂದು ಟ್ರೋಫಿ ಬೀಳುವ ಸಾಧ್ಯತೆಯಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
ಐಪಿಎಲ್ 2025 ಫೈನಲ್ ಪಂದ್ಯ ಅಹಮದಬಾದ್ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ವೇಳೆ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ವರ್ಷಗಳ ಮೊದಲ ಟ್ರೋಫಿ ತನ್ನದಾಗಿಸಿಕೊಂಡಿತು. ಇದೀಗ ಮತ್ತೊಂದು ಕಪ್ ಗೆಲ್ಲಿವ ಅವಕಾಶ ಸಿಕ್ಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17 ವರ್ಷಗಳಿಂದ ಒಂದೇ ಒಂದು ಐಪಿಎಲ್ ಟ್ರೋಫಿ ಗೆದ್ದಿರಲಿಲ್ಲ. ಆದರೆ, 18ನೇ ಆವೃತ್ತಿಯಲ್ಲಿ ಭರ್ಜರಿಯಾಗಿ ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಟ್ರೋಫಿ ತನ್ನದಾಗಿಸಿಕೊಂಡು ಕೊರಗನ್ನು ದೂರ ಮಾಡಿಕೊಂಡಿದೆ. ಈ ಬಾರಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದರೆ ತಪ್ಪಾಗಲಾರದು.
ಇದೀಗ ಮತ್ತೊಂದು ಟ್ರೋಫಿ ಗೆಲ್ಲುವ ಅವಕಾಶ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿದೆ. 10 ವರ್ಷಗಳ ಹಿಂದೆ ದಿಢೀರ್ ಸ್ಥಗಿತ ಆಗಿದ್ದ ಚಾಂಪಿಯನ್ ಲೀಗ್ ಟಿ-20 ಪಂದ್ಯವನ್ನು ಮತ್ತೆ ಪುನರಾರಂಭಿಸಲು ಚಿಂತನೆ ನಡೆದಿದೆ ಎಂದು ವರದಿಯಾಗಿದೆ. 2009ರಲ್ಲಿ ಪ್ರಾರಂಭ ಆಗಿದ್ದ ಈ ಪಂದ್ಯಾವಳಿ ಐಪಿಎಲ್ನಷ್ಟೇ ಪ್ರಸಿದ್ಧಿ ಪಡೆದಿತ್ತು.
ಆದರೆ, 2015ರಲ್ಲಿ ಈ ಪಂದ್ಯವನ್ನು ದಿಢೀರ್ ಸ್ಥಗಿತಗೊಳಿಸಲಾಗಿತ್ತು. ಪ್ರಾಯೋಜಕರ ಕೊರತೆ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳ ಹಿನ್ನೆಲೆ ಈ ಲೀಗ್ ಅನ್ನು ಮುಂದುವರೆಸುವುದು ತುಂಬಾ ಕಷ್ಟಕರ ಆಯ್ತು. ಆದ್ದರಿಂದ ಈ ಜನಪ್ರಿಯ ಲೀಗ್ ಅನ್ನು ಸ್ಥಗಿತಗೊಳಿಸಲಾಯಿತು.
ಕ್ರಿಕೆಟ್ಗೆ ಮತ್ತಷ್ಟು ಉತ್ತೇಜನ ನೀಡಲು 2009ರಲ್ಲಿ ಪ್ರಾರಂಭ ಆದ ಈ ಲೀಗ್ 2014ರ ವರೆಗೆ ಯಶಸ್ವಿಯಾಗಿ ನಡೆದಿದ್ದು, ಇದರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿವೆ. ಇದೀಗ 2026ರಲ್ಲಿ ಹೆಸರು ಬದಲಾಯಿಸಿ WCC ಅಂದರೆ ವರ್ಲ್ಡ್ ಕ್ಲಬ್ ಚಾಂಪಿಯನ್‌ಶಿಪ್ ಹೆಸರಿನೊಂದಿಗೆ ಇದನ್ನು ಮತ್ತೆ ಆರಂಭಿಸಲು ಚಿಂತನೆ ನಡೆದಿವೆ ಎಂದು ತಿಳಿದುಬಂದಿದೆ.
ಬಿಸಿಸಿಐ, ಇಸಿಬಿ ಮತ್ತು ಐಸಿಸಿ ಚಾಂಪಿಯನ್ಸ್ ಲೀಗ್ ಟಿ-20ಯ ಹಿಂದಿನ ಸ್ವರೂಪವನ್ನು ಆಧುನೀಕರಿಸಲು ಮತ್ತು ಅಂತಾರಾಷ್ಟ್ರೀಯ ಮಟ್ಟದ ಮೆಗಾ ಟೂರ್ನಮೆಂಟ್ ಆಗಿ ಪರಿವರ್ತಿಸಲು ಚಿಂತನೆ ನಡೆಸಿವೆ. ಪುರುಷರ ಜೊತೆಗೆ ಮಹಿಳಾ ಲೀಗ್ ಅನ್ನು ಆಯೋಜಿನೆ ಮಾಡುವ ಯೋಜನೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ವತಃ ಇಸಿಬಿ ಸಿಇಒ ರಿಚರ್ಡ್ ಗೋಲ್ಡ್ ತಿಳಿಸಿದ್ದಾರೆ. ಪುರುಷರ ಕ್ರಿಕೆಟ್ ಜೊತೆಗೆ, ಮಹಿಳಾ ವಿಶ್ವ ಕ್ಲಬ್ ಚಾಂಪಿಯನ್‌ಶಿಪ್ ನಡೆಯುವ ಬಗ್ಗೆ ಪ್ರಾಥಮಿಕ ಹಂತದಲ್ಲಿ ಚರ್ಚೆಗಳು ನಡೆದಿವೆ ಎಂದು ಹೇಳಿದರು.
ಒಂದು ವೇಳೆ ಈ ಪಂದ್ಯ ಆರಂಭವಾದ್ರೆ, ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ರೋಫಿ ಎತ್ತುವ ಸಾಧ್ಯತೆ ಹೆಚ್ಚಿದೆ. ಯಾಕಂದ್ರೆ ಈಗಾಗಲೇ ಐಪಿಎಲ್ ವೇಳೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಬಲಿಷ್ಠ ತಂಡಗಳನ್ನೆಲ್ಲಾ ಬಗ್ಗುಬಡಿಯುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಈ ಪ್ರದರ್ಶನ ವರ್ಲ್ಡ್ ಕ್ಲಬ್ ಚಾಂಪಿಯನ್‌ಶಿಪ್‌ನಲ್ಲಿ ಮತ್ತೆ ಮರುಕಳಿಸಿದರೂ ಆಶ್ಚರ್ಯಪಡಬೇಕಿಲ್ಲ.












Click it and Unblock the Notifications