ರಶ್ಮಿಕಾ ಮಂದಣ್ಣ ವಿರುದ್ಧ ರೊಚ್ಚಿಗೆದ್ದ ಆರ್‌ಸಿಬಿ ಫ್ಯಾನ್ಸ್?
ನಟಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ನಟಿ ರಶ್ಮಿಕಾ ಅವರ ವಿರುದ್ಧ ಆಗಾಗ ಆಕ್ರೋಶ ಕೂಡ ಮೊಳಗುತ್ತದೆ. ಆದ್ರೆ ಇದೀಗ 'ಆರ್‌ಸಿಬಿ' ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ರಶ್ಮಿಕಾ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ RCB ಫ್ಯಾನ್ಸ್ ಬೇಸರ ಹೊರಹಾಕುತ್ತಿದ್ದಾರೆ. ಯಾವ ಕಾರಣಕ್ಕೆ ಗೊತ್ತಾ?
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಆರ್‌ಸಿಬಿ ತಂಡದ ಬಗ್ಗೆ ಮಾತನಾಡಿದ್ದು, ಈ ವೇಳೆ ಹೈದರಾಬಾದ್ ತಂಡದ ಬಗ್ಗೆ ಕೂಡ ಬೆಂಬಲ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಅಲ್ಲದೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ನಟಿ ರಶ್ಮಿಕಾ ಅವರು ಮಾತನಾಡಿದ್ದಾರೆ ಅಂತಾ ಫ್ಯಾನ್ಸ್ ಇದೀಗ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹಾಗಾದರೆ ರಶ್ಮಿಕಾ ಮಂದಣ್ಣ ಹೀಗೆ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ದಾರಿಯಾಗಲು ಕಾರಣ ಏನು? ಮುಂದೆ ಓದಿ.

ರಶ್ಮಿಕಾ ವಿರುದ್ಧ ಕೋಪ ಏಕೆ?
ಅಂದಹಾಗೆ ಕೆಲವು ದಿನಗಳ ಹಿಂದೆ ಆರ್‌ಸಿಬಿ ಬಗ್ಗೆ ಟ್ವೀಟ್ ಮಾಡಿದ್ದ ನಟಿ ರಶ್ಮಿಕಾ ಅವರು ಇದೇ ಸಮಯದಲ್ಲಿ ತಾವು ಆರ್‌ಸಿಬಿ ತಂಡದ ಪಕ್ಕಾ ಅಭಿಮಾನಿ ಎಂದಿದ್ದರು. ಆದರೆ ಈ ಸಮಯದಲ್ಲೇ ಹೈದರಾಬಾದ್ ತಂಡಕ್ಕೂ ಸಪೋರ್ಟ್ ಮಾಡಿದ್ದ ನಟಿ ರಶ್ಮಿಕಾ ಅವರು ಈ ನಡುವೆ ತಾವು ಹೈದರಾಬಾದ್ ತಂಡಕ್ಕೆ ಕೂಡ ಬೆಂಬಲ ನೀಡುವುದಾಗಿ ಹೇಳಿದ್ದರು. ಅದೇ ವಿಚಾರವಾಗಿ ಈಗ ಭಾರಿ ಚರ್ಚೆ ಆರಂಭವಾಗಿದೆ. ಅಲ್ಲದೆ ನಟಿ ರಶ್ಮಿಕಾ ಅವರು ಆರ್‌ಸಿಬಿ ತಂಡವನ್ನು ನೇರ ಬೆಂಬಲಿಸಲಿ, ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುವುದು ಬೇಡ ಎನ್ನುತ್ತಿದ್ದಾರೆ.
I am a loyal RCB fan. But I also want SRH to win today♥️ Tell you what… let’s see today.. if SRH win - awesome.. 💃🏻 or else next match pakka we’ll shoot at least one shot on skype 🙏🏽♥️ but when it’s RCB and SRH.. then I wonder what we should do.. 😄 @23_rahulr https://t.co/tAkXqYWUfB
— Rashmika Mandanna (@iamRashmika) March 31, 2024
ಕಿರಿಕ್ ಬ್ಯೂಟಿಯ ಹೊಸ ಕಿರಿಕ್?
ಐಪಿಎಲ್ ಅಂದ್ರೆ ಭಾರತದಲ್ಲಿ ಒಂದು ಹಬ್ಬದ ರೀತಿ ಜನ ಸೆಲೆಬ್ರೇಷನ್ ಮಾಡ್ತಾರೆ. ಅದರಲ್ಲೂ ಬೆಂಗಳೂರು ನಿವಾಸಿಗಳಿಗೆ ಹಾಗೂ ಕನ್ನಡಿಗರಿಗೆ ಆರ್‌ಸಿಬಿ ತಂಡವೇ ಕಣ ಕಣದಲ್ಲಿಯೂ ಬೆರೆತು ಹೋಗಿದೆ. ಹೀಗಿದ್ದರೂ ಆರ್‌ಸಿಬಿ ತಂಡ ಮಾತ್ರ ಕಳೆದ 16 ವರ್ಷ ಕಪ್ ಗೆದ್ದೇ ಇಲ್ಲ. ಇಷ್ಟೆಲ್ಲಾ ನಡೆದರೂ ಕನ್ನಡಿಗರು ಮಾತ್ರ ಆರ್‌ಸಿಬಿ ಟೀಂ ಕೈಬಿಟ್ಟಿಲ್ಲ, ಹಾಗೇ ಈ ಬಾರಿ ಅಂದ್ರೆ 17ನೇ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಿದ್ದಾಗ, ನಟಿ ರಶ್ಮಿಕಾ ಅವರ ಮಾತಿಗೆ ಆರ್‌ಸಿಬಿ ಫ್ಯಾನ್ಸ್ ಬೇಸರ ಹೊರಹಾಕುತ್ತಿದ್ದಾರೆ.

'ಈ ಸಲ ಕಪ್ ನಮ್ದೆ'?
ಆರ್‌ಸಿಬಿ ಫ್ಯಾನ್ಸ್ ಬೆಂಗಳೂರು ತಂಡವೇ ಐಪಿಎಲ್ ಟೂರ್ನಿ ಗೆದ್ದೇ ಗೆಲ್ಲುತ್ತೆ ಅಂತಾ ಕಾಯುತ್ತಾ ಕೂತಿದ್ದಾರೆ. ಹೀಗಾಗಿ 'ಈ ಸಲ ಕಪ್ ನಮ್ದೆ' ಘೋಷ ವಾಖ್ಯ ಕೂಡ, ವೈರಲ್ ಆಗಿದೆ ಹಾಗೂ ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿಗಳು ತಮ್ಮ ತಂಡದ ಗೆಲುವಿಗೆ ಕಾಯ್ತಾ ಕೂತಿದ್ದಾರೆ. ಅವರ ಆಸೆ ಈ ವರ್ಷ ನೆರವೇರುತ್ತಾ? ಅನ್ನೋ ಕುತೂಹಲ ಕೂಡ ಡಬಲ್ ಆಗುತ್ತಿದೆ. ಅಲ್ಲದೆ, ಈ ಬಾರಿ ಕಪ್ ಗೆಲ್ಲಲು ಆರ್‌ಸಿಬಿ ತಂಡ ಕೂಡ ಎಲ್ಲಾ ರೀತಿ ಎಫರ್ಟ್ಸ್ ಹಾಕುತ್ತಿದೆ. ಹೀಗಿದ್ದಾಗಲೇ ರಶ್ಮಿಕಾ ಅವರ ಟ್ವೀಟ್ ಕೂಡ ವೈರಲ್ ಆಗುತ್ತಿದೆ.












Click it and Unblock the Notifications