18 ವರ್ಷಗಳ ಸತತ ಪ್ರಯತ್ನದ ನಂತರ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ... RCB

18 ವರ್ಷ ಬೆಂಗಳೂರು ತಂಡ ಕಪ್ ಗೆಲ್ಲೋದಿಲ್ಲ, ಲಾಲಿಪಪ್ ಗ್ಯಾರಂಟಿ ಅಂತಾ ಹೇಳುತ್ತಾ ಇದ್ದ ಹುಳಗಳಿಗೆ ಸರಿಯಾಗಿ ಬುದ್ಧಿ ಹೇಳಲು ಆರ್‌ಸಿಬಿ ಅಭಿಮಾನಿಗಳು ಸಜ್ಜಾಗಿದ್ದರು. ಕನ್ನಡ ಕನ್ನಡಿಗರ ಹೃದಯ ಭಾಷೆ & ಕನ್ನಡಿಗರ ಹೃದಯ ಗೆದ್ದ ಕ್ರಿಕೆಟ್ ತಂಡ ಬೆಂಗಳೂರು ಟೀಂ ಆರ್‌ಸಿಬಿ.. ಹೀಗೆ 18 ವರ್ಷಗಳಿಂದ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆಲ್ಲುತ್ತೆ... ಆರ್‌ಸಿಬಿ ಕಪ್ ಗೆಲ್ಲುತ್ತೆ... ಅಂತಾನೇ ಕಾಯುತ್ತಿದ್ದ, ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಗುವ ನಿರೀಕ್ಷೆ ಇತ್ತು. ಹೀಗಿದ್ದಾಗಲೇ, 18 ವರ್ಷಗಳ ಸತತ ಪ್ರಯತ್ನದ ನಂತರ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ...

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.... ಅನ್ನೋ ಶಬ್ಧ ಇಡೀ ಜಗತ್ತಿನಾದ್ಯಂತ ಕೇಳಿಸುತ್ತಿದೆ. ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸ ಇದ್ದು, ಕನ್ನಡ ಭಾಷೆ ಜಗತ್ತಿನ ಅತ್ಯಂತ ಹಳೆಯ & ಪುರಾತನ ಭಾಷೆ ಆಗಿದೆ. ಇಂತಹ ಕನ್ನಡ ಭಾಷೆಯ ಮಾತನಾಡುವ ಕನ್ನಡಿಗರು ಈ ಸಮಯದ ತನಕ ಒಂದೇ ಒಂದು ಐಪಿಎಲ್ ತಂಡವನ್ನ ಬೆಂಬಲಿಸಿ, 18 ವರ್ಷಗಳಿಂದ ಕೂಡ ಬೆಂಗಳೂರು ತಂಡ ಆರ್‌ಸಿಬಿ ಗೆಲ್ಲಬೇಕು ಅಂತಾ ಕಾಯುತ್ತಿದ್ದರು. ಆ ಆಸೆ ಇದೀಗ ಈಡೇರಿದ್ದು, ನಮ್ಮ & ನಿಮ್ಮೆಲ್ಲರ ನೆಚ್ಚಿನ ಆರ್‌ಸಿಬಿ ತಂಡ ಗೆದ್ದು ಬೀಗಿದೆ. 18 ವರ್ಷಗಳ ಸತತ ಪ್ರಯತ್ನದ ನಂತರ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ದೊಡ್ಡ ಸಾಧನೆ ಮಾಡಿದೆ...

RCB Fans Are Saying This About The IPL 2025 Final Match Result

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ...

ಹೌದು, ಕನ್ನಡ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ. ನಮ್ಮ & ನಿಮ್ಮೆಲ್ಲರ ಅಚ್ಚುಮೆಚ್ಚಿನ ತಂಡ ಆರ್‌ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಚಾಂಪಿಯನ್ ಆಗಿದೆ. ಐಪಿಎಲ್ 2025 ಟೂರ್ನಿಯಲ್ಲಿ ಭರ್ಜರಿಯಾಗಿ ಆರ್‌ಸಿಬಿ ತಂಡ ಗೆದ್ದು ಬೀಗಿದೆ. ಈ ಮೂಲಕ 17 ವರ್ಷಗಳ ಕಪ್ ಗೆಲ್ಲುವ ಸಾಹಸ ಈಡೇರಿದ್ದು, ಆರ್‌ಸಿಬಿ ತಂಡ ಗೆದ್ದು ಬೀಗಿರುವ ರೀತಿಗೆ ಜಗತ್ತಿನ ಮೂಲೆ ಮೂಲೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

190 ರನ್ ಬಾರಿಸಿದ್ದ ಬೆಂಗಳೂರು ತಂಡ!

ಗುಜರಾತ್‌ನ ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ & ಪಂಜಾಬ್ ನಡುವಿನ ಮಹತ್ವದ ಐಪಿಎಲ್ 2025 ಫೈನಲ್ ಪಂದ್ಯ ಭಾರಿ ಕೂತೂಹಲ ಕೆರಳಿಸಿತ್ತು. ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಪಂಜಾಬ್ ತಂಡ, ಆರ್‌ಸಿಬಿ ತಂಡದ ಸ್ಕೋರ್ 190 ರನ್‌ಗೆ ನಿಲ್ಲುವಂತೆ ಮಾಡಿತ್ತು. ಆದರೆ ಇದೇ ವಿಚಾವರನ್ನು ಚಾಲೆಂಜ್ ಆಗಿ ಆರ್‌ಸಿಬಿ ತೆಗೆದುಕೊಂಡು, ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿತ್ತು. ಕೊನೆಗೆ ಪಂಜಾಬ್ ತಂಡವನ್ನು ಕೇವಲ 184 ರನ್‌ಗೆ ಕಟ್ಟಿಹಾಕುವ ಮೂಲಕ ಆರ್‌ಸಿಬಿ ತಂಡ ಭರ್ಜರಿಯಾಗಿ ಐಪಿಎಲ್ 2025 ಫೈನಲ್ ಪಂದ್ಯ ಗೆದ್ದು ಮೊಟ್ಟ ಮೊದಲ ಬಾರಿಗೆ ಕಪ್ ತನ್ನದಾಗಿಸಿಕೊಂಡಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+