ಆರ್‌ಸಿಬಿ ಗೆದ್ದಿದ್ದು ಇದೇ ಹುಡುಗಿಯಿಂದ, ಇವರೇ ಆರ್‌ಸಿಬಿ ಅದೃಷ್ಟ ಲಕ್ಷ್ಮಿ ಅಂತಿದ್ದಾರೆ ಫ್ಯಾನ್ಸ್!
ಆರ್‌ಸಿಬಿ ಅಂತೂ, ಇಂತೂ ಮತ್ತೆ ಗೆಲುವಿನ ಹಳಿಗೆ ಮರಳಿದ್ದು. ಸತತವಾಗಿ ಜಯ ಸಾಧಿಸಿ ಅಭಿಮಾನಿಗಳಿಗೆ ನೆಮ್ಮದಿ ನೀಡುತ್ತಿದೆ ಆರ್‌ಸಿಬಿ ತಂಡ. ಈ ಮೂಲಕ ಆರ್‌ಸಿಬಿ ಮುಂದಿನ ಹಂತಕ್ಕೆ, ಅಂದ್ರೆ ಪ್ಲೇಆಫ್ ಹಂತಕ್ಕೆ ಹೋಗಿ ಕಪ್ ಗೆಲ್ಲುವ ಆಸೆ ಇನ್ನೂ ಜೀವಂತವಾಗಿ ಇದೆ. ಹೀಗಿದ್ದಾಗ ನಿನ್ನೆಯ ಪಂದ್ಯದ ವೇಳೆ ಆರ್‌ಸಿಬಿ ತಂಡಕ್ಕೆ ಅದೃಷ್ಟ ಲಕ್ಷ್ಮಿ ಸಿಕ್ಕೆಬಿಟ್ಟಿದ್ದಾಳೆ!
ಹೌದು, ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಭರ್ಜರಿ ಗೆಲುವನ್ನು ಸಾಧಿಸಬಹುದಿತ್ತು. ಆದರೂ ಈ ಸಣ್ಣ ಮ್ಯಾಚ್ ಗೆಲ್ಲೋದಕ್ಕೆ ತೀವ್ರ ಪರದಾಡಿತ್ತು ಆರ್‌ಸಿಬಿ ಬೆಂಗಳೂರು ತಂಡ. ಕೇವಲ 19.3 ಓವರ್‌ನಲ್ಲಿ 147 ರನ್‌ಗೆ ಗುಜರಾತ್ ಆಲೌಟ್ ಆಗಿತ್ತು. 148 ರನ್ ಗುರಿ ಮುಟ್ಟಲು ಆರ್‌ಸಿಬಿ ಪರದಾಡಿತ್ತು, ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ತಂಡಕ್ಕೆ ನೆರವಾಗಿದ್ದು ಆಟಗಾರರು ಮಾತ್ರವಲ್ಲ. ಅಭಿಮಾನಿಗಳು ಕೂಡ ದೇವರ ಬಳಿ ಪ್ರಾರ್ಥನೆ ಮಾಡಿದರು. ಅದ್ರಲ್ಲೂ ಒಬ್ಬ ಹುಡುಗಿ ಬೇಡಿಕೊಂಡ ನಂತರ ಇಡೀ ಪಂದ್ಯದಲ್ಲಿ ಮ್ಯಾಜಿಕ್ ನಡೆದಿತ್ತು. ಹಾಗಾದರೆ ಯಾರದು ಆರ್‌ಸಿಬಿ ಅದೃಷ್ಟ ಲಕ್ಷ್ಮಿ? ವಿಡಿಯೋ ನೋಡಲು ಮುಂದೆ ಓದಿ.

ಆರ್‌ಸಿಬಿ ಕೈಹಿಡಿದ ಅದೃಷ್ಟ ಲಕ್ಷ್ಮಿ!
ಅಂದಹಾಗೆ ಆರ್‌ಸಿಬಿ ಗೆಲುವಿಗೆ ಅಂತಾ ಹುಡುಗಿ ಒಬ್ಬಳು ಬೇಡಿಕೊಂಡು ನಿಂತಿದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ. 148 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ, ಫಾಫ್ & ಕೊಹ್ಲಿ ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲನೇ ವಿಕೆಟ್‌ಗೆ 5.5 ಓವರ್‌ಗಳಲ್ಲಿ 92 ರನ್ ಚಚ್ಚಿ ಬಿಸಾಡಿತ್ತು. 92 ರನ್ ಆಗುವ ತನಕ ಒಂದೇ ಒಂದು ವಿಕೆಟ್ ಕೂಡ, ಆರ್‌ಸಿಬಿ ತಂಡ ಕಳೆದುಕೊಂಡಿರಲಿಲ್ಲ. ಆದ್ರೆ 117 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಇದಾದ ನಂತರ RCB ಅಭಿಮಾನಿಗಳು ಕಣ್ಣಲ್ಲಿ ನೀರು ತುಂಬಿಕೊಂಡರು. ಇದೇ ವೇಳೆ ಆರ್‌ಸಿಬಿ ಪಾಲಿನ ಅದೃಷ್ಟ ಲಕ್ಷ್ಮಿ ದೇವರ ಬಳಿ ಬೇಡಿಕೊಂಡರು, ಆ ನಂತರ ಆರ್‌ಸಿಬಿ ಗೆದ್ದು ಬೀಗಿತ್ತು.
ಪ್ರತಿ ಪಂದ್ಯಕ್ಕೂ ನೀವೇ ಬರಬೇಕು!
ಆರ್‌ಸಿಬಿ ಅಭಿಮಾನಿ ಆಗಿರುವ ಹುಡುಗಿ ದೇವರ ಬಳಿ ಪ್ರಾರ್ಥನೆ ಮಾಡಿಕೊಂಡ ನಂತರವೇ ನಮ್ಮ ಬೆಂಗಳೂರು ತಂಡ ಗೆದ್ದಿದೆ ಅಂತಾ ಅಭಿಮಾನಿಗಳು ಹೇಳುತ್ತಿದ್ದಾರೆ. ಹೀಗಾಗಿಯೇ ಈ ಹುಡುಗಿಯನ್ನು ಇದೀಗ ಆರ್‌ಸಿಬಿ ಅಭಿಮಾನಿಗಳು ಹೊಗಳುತ್ತಿದ್ದು, ಎಲ್ಲೆಲ್ಲೂ ವಿಡಿಯೋ ವೈರಲ್ ಆಗುತ್ತಿದೆ. ಅಲ್ಲದೆ ದೇವರ ಬಳಿ ಆರ್‌ಸಿಬಿ ತಂಡಕ್ಕಾಗಿ ಪ್ರಾರ್ಥನೆ ಮಾಡಿದ್ದಕ್ಕಾಗಿ, ಅಭಿಮಾನಿಗಳು ಹೊಗಳುತ್ತಿದ್ದಾರೆ. ನೀವು ಪ್ರತಿ ಪಂದ್ಯಕ್ಕೂ ಬಂದು, ಆರ್‌ಸಿಬಿ ತಂಡಕ್ಕಾಗಿ ಪ್ರಾರ್ಥನೆ ಮಾಡಿ ಆಗ ನಾವೇ ಕಪ್ ಗೆಲ್ಲೋದು ಅಂತಿದ್ದಾರೆ ನಮ್ಮ ಆರ್‌ಸಿಬಿ ಫ್ಯಾನ್ಸ್.
ಆರ್‌ಸಿಬಿ ರಕ್ಷಣೆ ಮಾಡಿದ್ದು ಯಾರು?
ಆರ್‌ಸಿಬಿ ತಂಡ ಗುಜರಾತ್ ತಂಡವನ್ನು ಕೇವಲ 147 ರನ್‌ಗಳಿಗೆ ಕಟ್ಟಿ ಹಾಕಿತ್ತು. 148 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲನೇ ವಿಕೆಟ್‌ಗೆ 5.5 ಓವರ್‌ಗಳಲ್ಲಿ 92 ರನ್ ಚಚ್ಚಿ ಬಿಸಾಡಿತ್ತು. 92 ರನ್ ಆಗುವ ತನಕ ಒಂದೇ ಒಂದು ವಿಕೆಟ್ ಕೂಡ ಆರ್‌ಸಿಬಿ ತಂಡ ಕಳೆದುಕೊಂಡಿರಲಿಲ್ಲ. ಆದ್ರೆ 117 ರನ್ ಆಗುವಷ್ಟರಲ್ಲಿ ಬರೋಬ್ಬರಿ 6 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಇದಾದ ನಂತರ RCB ಅಭಿಮಾನಿಗಳು ಪರದಾಡಿದರು. ಆಗಲೇ ನೋಡಿ, ನಮ್ಮ ಡಿಕೆ ಅವರು ಅಂದ್ರೆ ದಿನೇಶ್ ಕಾರ್ತಿಕ್ ಅವರು ಭರ್ಜರಿ ಬ್ಯಾಟಿಂಗ್ ಮಾಡಿ ಆರ್‌ಸಿಬಿ ತಂಡವನ್ನು ರಕ್ಷಿಸಿದರು.
ಆರ್‌ಸಿಬಿ ಅಂದ್ರೆ ಫ್ಯಾನ್ಸ್‌ಗೆ ಜೀವ!
ಐಪಿಎಲ್ ಶುರುವಾಯ್ತು ಅಂದ್ರೆ ಭಾರತದಲ್ಲಿ ಒಂದು ಹಬ್ಬದ ರೀತಿ ಜನ ಸೆಲೆಬ್ರೇಷನ್ ಮಾಡ್ತಾ ಖುಷಿ ಹಂಚಿಕೊಳ್ಳುತ್ತಾರೆ. ಅದ್ರಲ್ಲೂ ಬೆಂಗಳೂರು ನಿವಾಸಿಗಳಿಗೆ ಮತ್ತು ಕನ್ನಡಿಗರಿಗೆ ಆರ್‌ಸಿಬಿ ತಂಡವೇ ಕಣ ಕಣದಲ್ಲೂ ಬೆರೆತು ಹೋಗಿದೆ. ಹೀಗಿದ್ದರೂ, ಆರ್‌ಸಿಬಿ ತಂಡ ಮಾತ್ರ ಕಳೆದ 16 ವರ್ಷ ಕಪ್ ಗೆದ್ದೇ ಇಲ್ಲ. ಇಷ್ಟೆಲ್ಲಾ ನಡೆದ್ರೂ ಕನ್ನಡಿಗರು ಮಾತ್ರ RCB ತಂಡದ ಕೈಯ ಬಿಟ್ಟಿಲ್ಲ ಹಾಗೇ ಈ ಬಾರಿ ಅಂದ್ರೆ 17ನೇ ಬಾರಿಯ ಐಪಿಎಲ್‌ನಲ್ಲಿ RCB ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿ ಖುಷಿಯಾಗಿದ್ದರು ಅಭಿಮಾನಿಗಳು. 'ಈ ಸಲ ಕಪ್ ನಮ್ದೆ' ಅಂತಾ ಹೇಳುತ್ತಿದ್ದರು ಫ್ಯಾನ್ಸ್. ಆದರೆ ಆರ್‌ಸಿಬಿ ಮಾತ್ರ ಸಾಲು ಸಾಲು ಸೋಲು ಕಂಡು ನಿರಾಸೆ ಮೂಡಿಸಿತ್ತು. ಈಗ ಮತ್ತೆ ಕಂಬ್ಯಾಕ್ ಮಾಡಿದ್ದು, ಆರ್‌ಸಿಬಿ ತಂಡ ಮುಂದಿನ ಹಂತಕ್ಕೆ ಹೋಗುವ ನಿರೀಕ್ಷೆ ಇದೆ.
ಕೊಹ್ಲಿ ಕೆಣಕಿದರೆ ಮುಗೀತು ಕಥೆ!
ವಿರಾಟ್ ಕೊಹ್ಲಿ ವಿರುದ್ಧ ಕ್ರಿಕೆಟ್ ಮೈದಾನದಲ್ಲಿ ಎಗರಾಡಿ ಗೆದ್ದವರು ಯಾರೂ ಇಲ್ಲ ಬಿಡಿ. ಯಾಕಂದ್ರೆ ವಿರಾಟ್ ಕೊಹ್ಲಿಗೆ ಇರುವ ಕೆಪಾಸಿಟಿ ಏನು ಅಂತಾ ಎಲ್ಲರಿಗೂ ಗೊತ್ತು. ಒಮ್ಮೆ ಎದುರಾಳಿ ತಂಡದ ಆಟಗಾರರು ಕೆಣಕಿಕೊಂಡು ಬಂದರೆ, ವಿರಾಟ್ ಕೊಹ್ಲಿ ಅಲ್ಲೇ ಡ್ರಾ & ಅಲ್ಲೇ ಬಹುಮಾನ ಅಂತಾ ಘೋಷಣೆ ಮಾಡಿ ಬಿಡುತ್ತಾರೆ. ಇಷ್ಟು ಇಲ್ಲದಿದ್ದರೆ ವಿರಾಟ್‌ಗೆ ಆಸ್ಟ್ರೇಲಿಯಾ ತಂಡವನ್ನು ಸೈಲೆಂಟ್ ಮಾಡುವುದು ಸಾಧ್ಯವಾಗುತ್ತಿತ್ತಾ? ಅಥವಾ ಜಗತ್ತಿಗೇ ಸ್ಲೆಡ್ಜಿಂಗ್ ಮಾಡುವುದನ್ನ ಕಲಿಸಿಕೊಟ್ಟ ಆಸ್ಟ್ರೇಲಿಯಾ ಆಟಗಾರರು ವಿರಾಟ್ ಕೊಹ್ಲಿಯನ್ನ ಕಂಡು ಸೈಲೆಂಟ್ ಆಗಿದ್ದು ನಿಮಗೆಲ್ಲಾ ಗೊತ್ತು.












Click it and Unblock the Notifications