Asia Cup 2023: ಏಷ್ಯಾಕಪ್‌ಗೆ ಭಾರತ ತಂಡದ ಪ್ಲೇಯಿಂಗ್ XI ನಿರ್ಧಾರವಾಗಿದೆ: ಜಡೇಜಾ ಅಚ್ಚರಿಯ ಹೇಳಿಕೆ
ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಕೋಚ್ ರಾಹುಲ್ ದ್ರಾವಿಡ್ ಆಯ್ಕೆಯನ್ನು ಟೀಂ ಇಂಡಿಯಾದ ರವೀಂದ್ರ ಜಡೇಜಾ ಸಮರ್ಥಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಏಷ್ಯಾಕಪ್ 2023 ಪಂದ್ಯಾವಳಿಗಾಗಿ ಭಾರತ ತಂಡದ ಆಡುವ ಬಳಗ ಈಗಾಗಲೇ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಭಾರತ 2 ನೇ ಏಕದಿನ ಪಂದ್ಯದಲ್ಲಿ ಸೋತ ನಂತರ ಕೋಚ್ ದ್ರಾವಿಡ್ ಮತ್ತು ಆಡಳಿತ ಮಂಡಳಿ ಬಗ್ಗೆ ಟೀಕೆಗಳು ವ್ಯಕ್ತವಾಗಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರಿಗೂ ವಿಶ್ರಾಂತಿ ನೀಡಿದ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಹೊಸ ಆಟಗಾರರಿಗೆ ಅವಕಾಶ ಕೊಟ್ಟ ಕಾರಣ ಭಾರತ ಸೋಲನುಭವಿಸಿದೆ ಎಂದು ಹಲವರು ವಾದಿಸಿದ್ದರು.

ಈ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡ ಸಿದ್ಧತೆ ಮಾಡಿಕೊಳ್ಳುವ ಸಂದರ್ಭದಲ್ಲಿ, ಈ ರೀತಿ ಪ್ರಯೋಗ ಮಾಡುತ್ತಿರುವುದು ಅಭಿಮಾನಿಗಳು ಕೋಪಕ್ಕೆ ಕಾರಣವಾಗಿದೆ.
ಜಡೇಜಾ ಹೇಳಿದ್ದೇನು?
"ಏಷ್ಯಾ ಕಪ್ ಮತ್ತು ವಿಶ್ವಕಪ್‌ಗೆ ಮೊದಲು ಬರುವ ಈ ಸರಣಿಯು ನಮಗೆ ವಿವಿಧ ಆಟಗಾರರನ್ನು ಪ್ರಯೋಗಿಸಲು ಮತ್ತು ಪರೀಕ್ಷಿಸಲು ಅವಕಾಶವನ್ನು ನೀಡುತ್ತದೆ. ನಾವು ಏಷ್ಯಾ ಕಪ್ ಮತ್ತು ವಿಶ್ವಕಪ್‌ನಲ್ಲಿ ಯಾವುದೇ ಪ್ರಯೋಗ ನಡೆಸಲು ಸಾಧ್ಯವಿಲ್ಲ. ತಂಡದ ಸಮತೋಲನ, ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ನಾವು ಉತ್ತಮ ತಿಳುವಳಿಕೆಯನ್ನು ಹೊಂದಿರುವುದು ಉತ್ತಮವಾಗಿದೆ" ಎಂದು ಜಡೇಜಾ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಆಡುವ ಬಳಗ ಅಂತಿಮವಾಗಿದೆ
ಕುತೂಹಲದಿಂದ ಕಾಯುತ್ತಿರುವ ಏಷ್ಯಾ ಕಪ್ 2023 ಆಗಸ್ಟ್ 30 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 17ರಂದು ಮುಕ್ತಾಯವಾಗುತ್ತದೆ. 2023 ರ ಏಷ್ಯಾಕಪ್ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ನಾಲ್ಕು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಪಾಕಿಸ್ತಾನದ ಮುಲ್ತಾನ್ ಮತ್ತು ಲಾಹೋರ್ ಮತ್ತು ಶ್ರೀಲಂಕಾದ ಕ್ಯಾಂಡಿ ಮತ್ತು ಕೊಲಂಬೊದಲ್ಲಿ ಪಂದ್ಯಗಳು ನಡೆಯಲಿದ್ದು, ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ.
"ನಾಯಕ ಮತ್ತು ತಂಡದ ಮ್ಯಾನೇಜ್‌ಮೆಂಟ್ ಏಷ್ಯಾಕಪ್‌ನಲ್ಲಿ ಪ್ಲೇಯಿಂಗ್ 11 ಬಗ್ಗೆ ತಿಳಿದಿದ್ದಾರೆ. ಈ ಬಗ್ಗೆ ಯಾವುದೇ ಅಸ್ಪಷ್ಟತೆ ಇಲ್ಲ. ಪ್ರಯೋಗ ಮಾಡುವುದರಿಂದ ನಾವು ಪಂದ್ಯದಲ್ಲಿ ಸೋಲನುಭವಿಸಿಲ್ಲ, ಪರಿಸ್ಥಿತಿ ಕೂಡ ಇದಕ್ಕೆ ಕಾರಣ, ಏಷ್ಯಾಕಪ್‌ಗಾಗಿ ಭಾರತದ ಆಡುವ ಬಳಗ ನಿರ್ಧಾರ ಆಗಿರುವುದರಿಂದ, ಈ ಬಗ್ಗೆ ಯಾವುದೇ ಅನುಮಾನ ಇರುವುದಿಲ್ಲ" ಎಂದು ಹೇಳಿದ್ದಾರೆ.
ಬಹುನಿರೀಕ್ಷಿತ ಏಷ್ಯಾ ಕಪ್ 2023 ರ ವೇಳಾಪಟ್ಟಿ ಭಾರತ ಕ್ರಿಕೆಟ್ ತಂಡಕ್ಕೆ ಉತ್ತಮ ಸುದ್ದಿಯಲ್ಲ, ಬಿಡುವಿಲ್ಲ ವೇಳಾಪಟ್ಟಿಯಲ್ಲಿ ಭಾರತ ಪಂದ್ಯಗಳನ್ನು ಆಡಬೇಕಿದೆ. ಏಷ್ಯಾಕಪ್‌ನಲ್ಲಿ ಭಾರತ ತಂಡ 15 ದಿನಗಳಲ್ಲಿ 6 ಪಂದ್ಯಗಳನ್ನು ಆಡಲಿದೆ.
ಆ ಆರು ಪಂದ್ಯಗಳಲ್ಲಿ ಮೂರು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಸಾಧ್ಯತೆ ಇದೆ. ಶ್ರೀಲಂಕಾದಲ್ಲಿ ಹೆಚ್ಚು ಬಿಸಿಲಿನ ವಾತಾವರಣದಲ್ಲಿ ಆಡುವುದು ತಂಡದ ಆಟಗಾರರಿಗೆ ಸವಾಲಿನ ಕೆಲಸವಾಗಿದೆ. ಏಕದಿನ ವಿಶ್ವಕಪ್‌ಗೆ ಮುನ್ನ ಪ್ರಮುಖ ಆಟಗಾರರು ಗಾಯಗೊಂಡರೆ ಎನ್ನುವ ಚಿಂತೆ ಕೂಡ ಕಾಡುತ್ತಿದೆ.












Click it and Unblock the Notifications