Ranji Trophy: ಅಥರ್ವ ಶತಕ; ಮೊದಲ ದಿನ ಕರ್ನಾಟಕದ ವಿರುದ್ಧ ಮೇಲುಗೈ ಸಾಧಿಸಿದ ವಿದರ್ಭ

ಟೈಡೆ ಟನ್ ಮೊದಲ ದಿನದಲ್ಲಿ ಕರ್ನಾಟಕದ ವಿರುದ್ಧ ವಿದರ್ಭವನ್ನು ಅಗ್ರಸ್ಥಾನದಲ್ಲಿಟ್ಟರು ವಿದರ್ಭದ ವಿಸಿಎ ಸ್ಟೇಡಿಯಂನಲ್ಲಿ (ಸಿವಿಲ್ ಲೈನ್ಸ್) ನಡೆಯುತ್ತಿರುವ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲ ದಿನ ಕರ್ನಾಟಕದ ವಿರುದ್ಧ ಆತಿಥೇಯ ವಿದರ್ಭ ತಂಡ ಮೇಲುಗೈ ಸಾಧಿಸಿದೆ. ಅಥರ್ವ ಟೈಡೆ ಶತಕ ಗಳಿಸಿದರೆ, ಯಶ್ ರಾಥೋಡ್ ಅರ್ಧಶತಕ ಗಳಿಸಿದರು.

ಮೊದಲ ದಿನದಾಟದ ಅಂತ್ಯಕ್ಕೆ ವಿದರ್ಭ ತಂಡ ಮೂರು ವಿಕೆಟ್ ಕಳೆದುಕೊಂಡು 261 ರನ್ ಗಳಿಸಿದೆ. ಟಾಸ್ ಗೆದ್ದ ಕರ್ನಾಟಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 22 ರನ್ ಗಳಿಸುವಷ್ಟರಲ್ಲಿ ವಿದರ್ಭ ಮೊದಲ ವಿಕೆಟ್ ಕಳೆದುಕೊಂಡಿತು. ಧ್ರುವ್ ಶೋರೆ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

 Ranji Trophy: Ton by Taide Propels Vidarbha to Dominance Over Karnataka on Day One

ಬಳಿಕ ಜೊತೆಯಾದ ಅಥರ್ವ ಟೈಡೆ ಮತ್ತು ಯಶ್ ರಾಥೋಡ್ ಎರಡನೇ ವಿಕೆಟ್‌ಗೆ 184 ರನ್‌ಗಳನ್ನು ಕಲೆಹಾಕಿದರು. ಯಶ್ ರಾಥೋಡ್ 93 ರನ್ ಗಳಿಸಿ ಶತಕ ಗಳಿಸುವ ಸನಿಹದಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ಅಥರ್ವ ಟೈಡೆ ಶತಕ ಪೂರೈಸಿದರು. ಯಶ್ ರಾಥೋಡ್ ಔಟಾದ ಬಳಿಕ ಕರುಣ್ ನಾಯರ್ ಅವರ ಜೊತೆ 45 ರನ್ ಗಳಿಸಿದರು.

109 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಯಶ್ ರಾಥೋಡ್ ವಿಕೆಟ್ ಒಪ್ಪಿಸಿದರು. ಮೊದಲನೇ ದಿನದಾಟದ ಅಂತ್ಯಕ್ಕೆ ಕರುಣ್ ನಾಯರ್ ಅಜೇಯ 30 ರನ್ ಗಳಿಸಿ ಎರಡನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. ಎವಿ ವಾಡ್ಕರ್ ಕೂಡ ಅಜೇಯ 2 ರನ್ ಗಳಿಸಿದ್ದು ಎರಡನೇ ದಿನ ಕರುಣ್ ನಾಯರ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಕರ್ನಾಟಕದ ಪರವಾಗಿ ವಿಧ್ವತ್ ಕಾವೇರಪ್ಪ, ವಾಸುಕಿ ಕೌಶಿಕ್ ಮತ್ತು ಹಾರ್ದಿಕ್ ರಾಜ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಉಭಯ ತಂಡಗಳ ಆಡುವ ಬಳಗ

ಕರ್ನಾಟಕ ತಂಡ; ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ಹಾರ್ದಿಕ್ ರಾಜ್, ಮನೀಶ್ ಪಾಂಡೆ, ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್), ಅನೀಶ್ ಕೆವಿ, ಧೀರಜ್ ಗೌಡ್, ವಿಜಯ್ ಕುಮಾರ್ ವೈಶಾಕ್, ವಾಸುಕಿ ಕೌಶಿಕ್, ವಿಧ್ವತ್ ಕಾವೇರಪ್ಪ.

ವಿದರ್ಭ ತಂಡ: ಧ್ರುವ್ ಶೋರೆ, ಅಥರ್ವ ತೈಡೆ, ಕರುಣ್ ನಾಯರ್, ಅಕ್ಷಯ್ ವಾಡ್ಕರ್ (ನಾಯಕ), ಮೋಹಿತ್ ಕಾಳೆ, ಯಶ್ ರಾಥೋಡ್, ಆದಿತ್ಯ ಸರ್ವತೆ, ಯಶ್ ಠಾಕೂರ್, ಹರ್ಷ್ ದುಬೆ, ಉಮೇಶ್ ಯಾದವ್, ಆದಿತ್ಯ ಠಾಕರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+